ಕೆಎಲ್‌ ರಾಹುಲ್ ಬದಲಿಗೆ ಶುಭಮನ್ ಗಿಲ್‌ ಆಯ್ಕೆ; ಅಥಿಯಾ ಶೆಟ್ಟಿ ಕಾಲೆಳೆದ ನೆಟ್ಟಿಗರು!

Published : Mar 02, 2023, 03:33 PM IST

ಇತ್ತೀಚೆಗಷ್ಟೇ ಇಂದೋರ್‌ನಲ್ಲಿ ನಡೆದ ಭಾರತ ವಿರುದ್ಧ ಆಸ್ಸೆಸ್ ಸರಣಿಯ 11 ಆಟಗಾರರಲ್ಲಿ ಕೆ ಎಲ್‌ ರಾಹುಲ್‌ ಬದಲು ಶುಭ್‌ಮನ್ ಗಿಲ್ ಅವರನ್ನು ನೇಮಿಸಲಾಯಿತು. ಈಗ ನೆಟಿಜನ್‌ಗಳು ಅಥಿಯಾ ಶೆಟ್ಟಿಯೊಂದಿಗಿನ ಅವರ ಮದುವೆಯೇ ಇದ್ಕಕೆ ಕಾರಣ ಎನ್ನುವಂತೆ ಟ್ರೋಲ್‌ ಮಾಡುತ್ತಿದ್ದಾರೆ.

PREV
17
 ಕೆಎಲ್‌ ರಾಹುಲ್ ಬದಲಿಗೆ ಶುಭಮನ್ ಗಿಲ್‌ ಆಯ್ಕೆ; ಅಥಿಯಾ ಶೆಟ್ಟಿ ಕಾಲೆಳೆದ ನೆಟ್ಟಿಗರು!

ಭಾರತ vs ಆಸ್ಟ್ರೇಲಿಯಾ  ಸರಣಿಯ ಮೂರನೇ ಟೆಸ್ಟ್ ಪಂದ್ಯದಲ್ಲಿ ಕೆಎಲ್‌ ರಾಹುಲ್ ಬದಲಿಗೆ ಶುಭಮನ್ ಗಿಲ್ ಆಯ್ಕೆ ಮಾಡಲಾಗಿದೆ. ಈ ಕಾರಣಕ್ಕಾಗಿ ರಾಹುಲ್‌ ಪತ್ನಿ ಅಥಿಯಾ ಶೆಟ್ಟಿ ಅವರನ್ನು ಅಭಿಮಾನಿಗಳು ದೂಷಿಸಿದ್ದಾರೆ
 

27

ಕೆಎಲ್ ರಾಹುಲ್ ಮತ್ತು ಅಥಿಯಾ ಜನವರಿ 23, 2023 ರಂದು ದಕ್ಷಿಣ ಭಾರತದ ಪದ್ದತಿಯಂತೆ ವಿವಾಹವಾದರು ಅವರು ಮದುವೆಯಾದಾಗಿನಿಂದ, ಅವರ ರೊಮ್ಯಾಂಟಿಕ್ ಕ್ಷಣಗಳು ಇಂಟರ್ನೆಟ್ ಅನ್ನು ಗೆಲ್ಲುತ್ತಿವೆ.

37

ನವವಿವಾಹಿತ ಜೋಡಿಗಳಾದ ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ತಮ್ಮ ವೈವಾಹಿಕ ಜೀವನದ ಅತ್ಯುತ್ತಮ ಹಂತವನ್ನು ಎಂಜಾಯ್‌ ಮಾಡುತ್ತಿದ್ದಾರೆ.  ಆದರೆ, ಕೆಎಲ್ ರಾಹುಲ್ ಅವರು ತಮ್ಮ ವೃತ್ತಿ ಜೀವನದಲ್ಲಿ ಪರೀಕ್ಷೆಯ  ಎದುರಿಸುತ್ತಿದ್ದಾರೆ  ಮತ್ತು ನೆಟಿಜನ್‌ಗಳು ಅವರ ಪತ್ನಿ ಅಥಿಯಾ ಅವರನ್ನು ದೂಷಿಸುತ್ತಿದ್ದಾರೆ.

47

ವೆಂಕಟೇಶ್ ಪ್ರಸಾದ್ ಅವರು ಕೆಎಲ್ ರಾಹುಲ್ ಮತ್ತು ಅವರ ಫಾರ್ಮ್ ವಿರುದ್ಧ ಮಾತನಾಡುತ್ತಿದ್ದಂತೆ, ನೆಟಿಜನ್‌ಗಳು ಕೂಡ ರಾಹುಲ್‌ ಕ್ರಿಕೆಟ್ ಮೈದಾನದಲ್ಲಿ ಉತ್ತಮವಾಗಿ ಪಾರ್ಫಾಮ್‌ ಮಾಡಲಿಲ್ಲ ಎಂದು ಲೇವಡಿ ಮಾಡಲು ಪ್ರಾರಂಭಿಸಿದರು. 

57

ಕೆಲವರು ಕೆ.ಎಲ್.ರಾಹುಲ್ ಅವರ ಮದುವೆಯ ಬಗ್ಗೆ ಗೇಲಿ ಮಾಡಿದರೆ, ಇನ್ನು ಕೆಲವರು ಅವರ ವಿರುದ್ಧ ಏನಾದರೂ ಮಾತನಾಡುವ ಮೊದಲು ಕೆಎಲ್ ಅವರ ಮಾವ ಸುನೀಲ್ ಶೆಟ್ಟಿ ಅವರ ಬಗ್ಗೆ ಎಚ್ಚರದಿಂದಿರಿ ಎಂದು ತಮಾಷೆ  ಮಾಡಿದ್ದಾರೆ.

67

ಕೆಲವು  ಅಭಿಮಾನಿಗಳು ಕ್ರಿಕೆಟಿಗನಿಗೆ ಛೀಮಾರಿ ಹಾಕಿದ್ದಾರೆ.  ಇನ್ನೂ ಕೆಲವರು ಪ್ರತಿ ಬಾರಿ ಕೆಎಲ್ ರಾಹುಲ್ ಅವರನ್ನು ಆಯ್ಕೆ ಮಾಡುವ ಆಯ್ಕೆದಾರರನ್ನು ದೂಷಿಸಿದ್ದಾರೆ.
 

77

ಕೆಎಲ್‌ಆರ್‌ಗೆ ಅರ್ಹತೆಗಿಂತ ಹೆಚ್ಚಿನ ಅವಕಾಶಗಳು ಸಿಕ್ಕಿವೆ! ಯುವಕರು ತಮ್ಮ ಅವಕಾಶಗಳಿಗಾಗಿ ಕಾಯುತ್ತಿರುವ ಕಾರಣ ಅವರನ್ನು ಮೊದಲೇ ತೆಗೆದುಹಾಕಬೇಕಿತ್ತು. ಅವರಿಗೆ ಏನಾದರೂ ಸಂಪರ್ಕವಿದೆಯೇ" ಎಂದು ಅಭಿಮಾನಿಯೊಬ್ಬರು ಕಾಮೆಂಟ್‌ ಮಾಡಿದ್ದಾರೆ.

Read more Photos on
click me!

Recommended Stories