ಮಿಥಾಲಿ ದೊತೆ ವೈವಾಹಿತ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಾರ್ದೂಲ್ , ನವಜೋಡಿ ಡ್ಯಾನ್ಸ್‌ಗೆ ಕ್ರಿಕೆಟಿಗರು ಫಿದಾ!

Published : Feb 28, 2023, 07:25 PM ISTUpdated : Feb 28, 2023, 07:35 PM IST

ಟೀಂ ಇಂಡಿಯಾ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಮಿಥಾಲಿ ಪರುಲ್ಕರ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾ ಕ್ರಿಕೆಟಿಗರು, ಐಪಿಎಲ್ ಕ್ರಿಕೆಟಿಗರು ಠಾಕೂರ್ ಮದುವೆಯಲ್ಲಿ ಪಾಲ್ಗೊಂಡಿದ್ದಾರೆ. ಅದ್ಧೂರಿ ಮದುವೆಯಲ್ಲಿ ಸ್ವತಃ ಶಾರ್ದೂಲ್ ಠಾಕೂರ್ ಹಾಗೂ ಮಿಥಾಲಿ ಡ್ಯಾನ್ಸ್ ಮಾಡಿದ್ದಾರೆ. ಇಷ್ಟೇ ಅಲ್ಲ ಅದ್ಬುತ ಹಾಡಿನ ಮೂಲಕ ರಂಜಿಸಿದ್ದಾರೆ.

PREV
16
ಮಿಥಾಲಿ ದೊತೆ ವೈವಾಹಿತ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಾರ್ದೂಲ್ , ನವಜೋಡಿ ಡ್ಯಾನ್ಸ್‌ಗೆ ಕ್ರಿಕೆಟಿಗರು ಫಿದಾ!

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಬೆನ್ನಲ್ಲೇ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಉದ್ಯಮಿ, ಗೆಳತಿ ಮಿಥಾಲಿ ಪರುಲ್ಕರ್ ಜೊತೆ ಶಾರ್ದೂಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅದ್ಧೂರಿ ಮದುವೆ ಕಾರ್ಯಕ್ರಮದಲ್ಲಿ ಹಲವು ಕ್ರಿಕೆಟಿಗರು ಭಾಗವಹಿಸಿದ್ದಾರೆ. 

26

ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಕೋಲ್ಕತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್, ಮಾಜಿ ಕ್ರಿಕೆಟಿಗ ಅಭಿಷೇಕ್ ನಾಯರ್ ಸೇರಿದಂತೆ ಹಲವು ಕ್ರಿಕೆಟಿಗರು ಸಂಗೀತ್ ಸೆರೆಮನಿ ಹಾಗೂ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

36

ಸಂಗೀತ್ ಕಾರ್ಯಕ್ರಮದಲ್ಲಿ ಶಾರ್ದೂಲ್ ಠಾಕೂರ್ ಹಾಗೂ ಮಿಥಾಲಿ ಪರುಲ್ಕರ್ ಜೊತೆಯಾಗಿ ಹೆಜ್ಜೆ ಹಾಕಿದ್ದಾರೆ. ಅದ್ಭುತ ಸ್ಟೆಪ್ಸ್ ಮೂಲಕ ಕ್ರಿಕೆಟಿಗರನ್ನು ನಾಚಿಸಿದ್ದಾರೆ. ಶಾರ್ದೂಲ್‌ಗೆ ತಕ್ಕನಾಗಿ ಮಿಥಾಲಿ ಕೂಡ ಡ್ಯಾನ್ಸ್ ಮಾಡಿದ್ದಾರೆ. ಇಷ್ಟೇ ಅಲ್ಲ ಕ್ರಿಕೆಟಿಗರ ಜೊತೆ ಶಾರ್ದೂಲ್ ಠಾಕೂರ್ ಗಾಯನದ ಮೂಲಕವೂ ರಂಜಿಸಿದ್ದಾರೆ.

46

ಮುಂಬೈನಲ್ಲಿ ಅದ್ಧೂರಿ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಾರ್ದೂಲ್ ಹಾಗೂ ಮಿಥಾಲಿ ಕುಟುಂಬಸ್ಥರು ಆಪ್ತರು ಸೇರಿದಂತೆ ಹಲವು ಕ್ರಿಕೆಟಿಗರು ಮದುವೆ ಸಮಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.

56

ಶಾರ್ದೂಲ್ ಕೈಹಿಡಿರುವ ಮಿಥಾಲಿ ಪರುಲ್ಕರ್ ಸ್ಟಾರ್ಟ್ ಅಪ್ ಮಾಲೀಕರಾಗಿದ್ದಾರೆ. ಯಶಸ್ವಿ ಉದ್ಯಮ ನಡೆಸುತ್ತಿರುವ ಪರುಲ್ಕರ್ ಹಾಗೂ ಶಾರ್ದೂಲ್ ಕಳೆದ ಕೆಲ ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು. 

66

2021ರಲ್ಲಿ ಶಾರ್ದೂಲ್ ಠಾಕೂರ್ ಹಾಗೂ ಮಿಥಾಲಿ ಪರುಲ್ಕರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಕೊರೋನಾ ಕಾರಣ ಮದುವೆ ಮಂದೂಡಲಾಗಿತ್ತು. ಇದೀಗ ಸಮಯ ಕೂಡಿ ಬಂದಿದೆ. ಇಬ್ಬರು ಸಪ್ತಪದಿ ತುಳಿದಿದ್ದಾರೆ.
 

Read more Photos on
click me!

Recommended Stories