RCB ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ ಬ್ಯೂಟಿಫುಲ್ ಪತ್ನಿಯ ಇಂಟ್ರೆಸ್ಟಿಂಗ್ ಸಂಗತಿಗಳಿವು..!

First Published | May 7, 2024, 2:07 PM IST

ಬೆಂಗಳೂರು: 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಫಾಫ್ ಡು ಪ್ಲೆಸಿಸ್ ನಾಯಕನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಿದ್ದಾರೆ. ನಾವಿಂದು ಫಾಫ್ ಬ್ಯೂಟಿಫುಲ್ ಪತ್ನಿಯ ಕುರಿತಾದ ಇಂಟ್ರೆಸ್ಟಿಂಗ್ ಸಂಗತಿಗಳನ್ನು ತಿಳಿಯೋಣ ಬನ್ನಿ.
 

ದಕ್ಷಿಣ ಆಫ್ರಿಕಾ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ 2022ರಿಂದಲೂ ನಾಯಕನಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮುನ್ನಡೆಸುತ್ತಾ ಬಂದಿದ್ದಾರೆ. ಫಾಫ್ ಬ್ಯಾಟಿಂಗ್‌ನಲ್ಲೂ ಅಬ್ಬರಿಸುತ್ತಿದ್ದಾರೆ.

ಇನ್ನು ಫಾಫ್ ಡು ಪ್ಲೆಸಿಸ್ ಅವರ ಯಶಸ್ಸಿನ ಹಿಂದೆ ಅವರ ಮುದ್ದಾದ ಮಡದಿ ಇಮಾರಿ ವಿಸಾರ್ ಪಾತ್ರವನ್ನು ಮರೆಯುವಂತಿಲ್ಲ. ಫಾಫ್ ಡು ಪ್ಲೆಸಿಸ್ 2013ರ ನವೆಂಬರ್ 23ರಂದು ಬಹುಕಾಲದ ಗೆಳತಿ ಇಮಾರಿ ವಿಸಾರ್ ಅವರನ್ನು ಮದುವೆಯಾದರು.

Tap to resize

ನಾವಿಂದು ಯಾರು ಈ ಇಮಾರಿ ವಿಸಾರ್? ಫಾಫ್ ಡು ಪ್ಲೆಸಿಸ್ ಮಡದಿಯ ಹಿನ್ನೆಲೆ ಏನು? ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಹೃದಯ ಕದ್ದ ಇಮಾರಿ ಬಗ್ಗೆ ಇಂಚಿಂಚು ಮಾಹಿತಿಯನ್ನು ತಿಳಿಯೋಣ ಬನ್ನಿ.

ಸ್ಪೋರ್ಟ್ಸ್‌ಕೀಡಾ ವರದಿಯ ಪ್ರಕಾರ, ಇಮಾರಿ ವಿಸಾರ್ ಮೇ 01, 1987ರಲ್ಲಿ ದಕ್ಷಿಣ ಆಫ್ರಿಕಾದ ಸ್ಯಾನಿಸೋಫ್ ಎನ್ನುವ ನಗರದಲ್ಲಿ ಜನಿಸಿದರು. 5 ಅಡಿ 5 ಇಂಚು ಎತ್ತರವಿರುವ ಇಮಾರಿಯ ಈಗಿನ ವಯಸ್ಸು 36 ವರ್ಷ.

ಶೈಕ್ಷಣಿಕ ಹಿನ್ನೆಲೆ:

ಫಾಫ್ ಡು ಪ್ಲೆಸಿಸ್ ಪತ್ನಿ ಇಮಾರಿ ವಿಸಾರ್, ಪ್ರಾಥಮಿಕ ಶಿಕ್ಷಣವನ್ನು ಬಾಲಕಿಯರ ಯುನೈಸ್ ಸೆಕೆಂಡರಿ ಸ್ಕೂಲ್‌ನಲ್ಲಿ ಪೂರೈಸಿದರು. ಇನ್ನು ಪ್ರಿಟೋರಿಯಾ ಯೂನಿವರ್ಸಿಟಿಯಲ್ಲಿ ಬಿ.ಕಾಂ ಪದವಿಯನ್ನು ಪಡೆದರು.

ವೃತ್ತಿ ಬದುಕು:

ಮಾಧ್ಯಮಗಳ ವರದಿಯ ಪ್ರಕಾರ, ಇಮಾರಿ ವಿಸಾರ್ ದಕ್ಷಿಣ ಆಫ್ರಿಕಾದ ಪ್ರಖ್ಯಾತ ಬ್ಯೂಟಿ ಪ್ರಾಡಕ್ಟ್‌ ಕಂಪನಿಯಾಗಿರುವ ನಿಮ್ಯೂ ಸ್ಕಿನ್ ಟೆಕ್ನಾಲಜಿ ಕಂಪನಿಯಲ್ಲಿ ಮಾರ್ಕೆಟಿಂಗ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆಸಕ್ತಿ:

ಇಮಾರಿ ವಿಸಾರ್‌ಗೆ ಫೋಟೋಗ್ರಫಿ ಎಂದರೆ ತುಂಬಾ ಇಂಟ್ರೆಸ್ಟ್. ತಮ್ಮ ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಇಮಾರಿ ವಿಸಾರ್ ಕ್ಯಾಂಡೀಡ್ ಫೋಟೋಗಳನ್ನು ಶೇರ್ ಮಾಡುತ್ತಾ ಬಂದಿದ್ದಾರೆ.

ಫಿಟ್ನೆಸ್ ಅಂದರೆ ಅಚ್ಚುಮೆಚ್ಚು:

ಪತಿ ಫಾಫ್ ಡು ಪ್ಲೆಸಿಸ್ ಅವರಂತೆ ಅವರ ಪತ್ನಿ ಇಮಾರಿ ವಿಸಾರ್ ಕೂಡಾ ಫಿಟ್ನೆಸ್ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಂಡಿಲ್ಲ. ತಮ್ಮ ಬ್ಯುಸಿ ವೇಳಾಪಟ್ಟಿಯ ಹೊರತಾಗಿಯೂ ದಿನನಿತ್ಯ ವರ್ಕೌಟ್ ಮಾಡುವುದನ್ನು ಮಾತ್ರ ತಪ್ಪಿಸೊಲ್ಲ.

ಪತಿ ಜತೆ ಯಾವಾಗಲೂ ಲೋಕಸಂಚಾರ

ಫಾಫ್ ಡು ಪ್ಲೆಸಿಸ್ ಹಲವು ಟಿ20 ಲೀಗ್‌ಗಳಲ್ಲಿ ಪಾಲ್ಗೊಳ್ಳಲು ಜಗತ್ತಿನ ಮೂಲೆ ಮೂಲೆಗೆ ಭೇಟಿ ನೀಡುತ್ತಾ ಬಂದಿದ್ದಾರೆ. ಆಗೆಲ್ಲಾ ಇಮಾರಿ ವಿಸಾರ್ ತಮ್ಮ ಪತಿಗೆ ಸಾಥ್ ನೀಡುತ್ತಾ ಬಂದಿದ್ದಾರೆ.

Latest Videos

click me!