ಇಂಗ್ಲೆಂಡ್ ಕ್ರಿಕೆಟ್ ತಂಡದ ವೇಗಿ ಜೋಫ್ರಾ ಆರ್ಚರ್‌ಗೆ ಗಾಯದ ಸಮಸ್ಯೆ ಇನ್ನಿಲ್ಲದಂತೆ ಕಾಡುತ್ತಿದೆ. ಗಾಯದ ಸಮಸ್ಯೆಯಿಂದಾಗಿ ಕಳೆದೊಂದು ವರ್ಷದಲ್ಲಿ ಆರ್ಚರ್, ತಂಡದ ಒಳಗೆ ಹೊರಗೆ ಆಗುತ್ತಲೇ ಇದ್ದಾರೆ. ಮೊಣಕೈ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಆರ್ಚರ್ ಗಾಯದಿಂದ ಸರಣಿಯಿಂದ ಹೊರಗುಳಿದವರ ವಿವರ ಇಲ್ಲಿದೆ ನೋಡಿ.
ಜನವರಿ 3, 2020: ಮೊಣಕೈ ಗಾಯದ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದರು.
ಜನವರಿ 29, 2020: ಮೊಣಕೈ ಗಾಯದ ಸಮಸ್ಯೆಯಿಂದ ಸಂಪೂರ್ಣ ಗುಣಮುಖರಾಗದ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ದದ ಟಿ20 ಸರಣಿಯಿಂದ ಹೊರಬಿದ್ದಿದ್ದರು.
ಫೆಬ್ರವರಿ 6, 2020: ಮೊಣಕೈ ಗಾಯದಿಂದಾಗಿಯೇ ದುಬೈನಲ್ಲಿ ನಡೆದ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದರು. ಆರ್ಚರ್ ಅನುಪಸ್ಥಿತಿಯಲ್ಲಿ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿಯು ನೀರಸ ಪ್ರದರ್ಶನ ತೋರಿತ್ತು.
ಜುಲೈ 8, 2020: ದೀರ್ಘ ಬಿಡುವಿನ ಬಳಿಕ ಜೋಫ್ರಾ ಆರ್ಚರ್ ತವರಿನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ದದ ಮೊದಲ ಟೆಸ್ಟ್ ಪಂದ್ಯವನ್ನಾಡಿದ್ದರು. ಇದಾದ ನಂತರ ಬಯೋ ಬಬಲ್‌ನಲ್ಲಿ ಕಾಲಕಳೆಯಲು ಹಿಂಜರಿದು ಸರಣಿಯಿಂದ ಹೊರಬಿದ್ದಿದ್ದರು.
ಮಾರ್ಚ್ 21, 2021: ಬರೋಬ್ಬರಿ ಏಳು ತಿಂಗಳ ಬಳಿಕ ಆರ್ಚರ್, ಭಾರತ ವಿರುದ್ದದ ಟಿ20 ಸರಣಿಯಲ್ಲಿ ಕಣಕ್ಕಿಳಿದ್ದರು. ಆದರೆ ಮತ್ತೆ ಮೊಣಕೈ ನೋವು ಕಾಣಿಸಿಕೊಂಡಿದ್ದರಿಂದ ಭಾರತ ವಿರುದ್ದದ ಏಕದಿನ ಸರಣಿಯಿಂದ ಮತ್ತೆ ಹೊರಬಿದ್ದಿದ್ದರು.
ಮಾರ್ಚ್ 29, 2021: ಜನವರಿ ತಿಂಗಳಿನಲ್ಲಿ ತಮ್ಮ ಮನೆಯಲ್ಲೇ ಫಿಶ್ ಟ್ಯಾಂಕ್ ಸ್ವಚ್ಚ ಮಾಡುವಾಗ ಕೈ ಬೆರಳು ಗಾಯ ಮಾಡಿಕೊಂಡಿದ್ದರು. ಇದಕ್ಕೆ ಮತ್ತೆ ಆರ್ಚರ್ ಸರ್ಜರಿಗೆ ಒಳಗಾದರು.
ಏಪ್ರಿಲ್ 11, 2021: ಆರ್ಚರ್ ಫಿಟ್ನೆಸ್ ಟೆಸ್ಟ್ ಕ್ಲಿಯರ್ ಮಾಡಿದರು.
ಏಪ್ರಿಲ್ 23, 2021: ಮತ್ತೆ ಅನಿವಾರ್ಯವಾಗಿ 2021ರ ಐಪಿಎಲ್ ಟೂರ್ನಿಯಿಂದ ಹೊರಬಿದ್ದರು.
ಮೇ 5, 2021 : ಕೌಂಟಿ ಕ್ರಿಕೆಟ್‌ನಲ್ಲಿ ಸಸೆಕ್ಸ್ ಪರ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದರು.
ಮೇ 15, 2021: ಕೆಂಟ್ ವಿರುದ್ದದ ಪಂದ್ಯ ಆಡುವಾಗ ಆರ್ಚರ್‌ಗೆ ಗಂಟಲು ನೋವು ಕಾಣಿಸಿಕೊಂಡಿತ್ತು.
ಮೇ 18, 2021: ಜೋಫ್ರಾ ಆರ್ಚರ್‌ಗೆ ಬಲಗೈ ಶಸ್ತ್ರ ಚಿಕಿತ್ಸೆಗೆ ಒಳಗಾಗಲು ಇಂಗ್ಲೆಂಡ್ & ವೇಲ್ಸ್ ಕ್ರಿಕೆಟ್ ಮಂಡಳಿ ಸಲಹೆ ನೀಡಿತು. ಹೀಗಾಗಿ 10 ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದರು.
ಆಗಸ್ಟ್ 24, 2021: ಜೋಫ್ರಾ ಆರ್ಚರ್, ವೆಸ್ಟ್ ಇಂಡೀಸ್ ವಿರುದ್ದದ ಸರಣಿ ವೇಳೆ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ಗುರಿ ಹೊಂದಿದ್ದರು.
ಡಿಸೆಂಬರ್ 8, 2021: ಚಾನೆಲ್ 7ಗೆ ನೀಡಿದ ಸಂದರ್ಶನದಲ್ಲಿ ಗಾಯದಿಂದ ಸಂಪೂರ್ಣ ಗುಣಮುಖರಾಗಿರುವುದಾಗಿ ಘೋಷಿಸಿದ್ದರು.
ಡಿಸೆಂಬರ್ 11, 2021: ಮತ್ತೊಮ್ಮೆ ಎರಡನೇ ಬಾರಿಗೆ ಮೊಣಕೈ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.