ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ತಮ್ಮ ಕೆಲವು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಕಪ್ಪು ಬಣ್ಣದ ಡ್ರೆಸ್ ಧರಿಸಿ ಬಿಳಿ ಬೆಟ್ಟಗಳ ನಡುವೆ ಸ್ಟೈಲಿಶ್ ಆಗಿ ಪೋಸ್ ನೀಡುತ್ತಿದ್ದಾರೆ.
ಈ ಫೋಟೋಗಳನ್ನು ಹಂಚಿಕೊಂಡ ಅವರು, 'ಈ ಸ್ಥಳವು ಒಂದು ಎಮೋಷನ್' ಎಂದು ಕ್ಯಾಪ್ಷನ್ ನೀಡಿದ್ದಾರೆ. ಪ್ರಸ್ತುತ ಯುಜುವೇಂದ್ರ ಚಹಲ್ ಮತ್ತು ಧನಶ್ರೀ ವರ್ಮಾ ಕಾಶ್ಮೀರದ ಗುಲ್ಮಾರ್ಗ್‌ನಲ್ಲಿ ತಮ್ಮ ಹಾಲಿಡೇ ಎಂಜಾಯ್ ಮಾಡುತ್ತಿದ್ದಾರೆ.
ಧನಶ್ರೀ ಜೊತೆಗೆ ಯುಜುವೇಂದ್ರ ಚಹಲ್ ಕೂಡ ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ತಮ್ಮ ಫೋಟೋ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಹಿಮಭರಿತ ಬೆಟ್ಟಗಳಲ್ಲಿ ಎಂಜಾಯ್ ಮಾಡುತ್ತಿರುವುದು ಕಾಣಬಹುದಾಗಿದೆ. ಇಬ್ಬರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ತಮ್ಮ ವೈವಾಹಿಕ ಜೀವನದ ವಿಶೇಷ ದಿನವನ್ನು ಆಚರಿಸುತ್ತಿರುವ ಚಹಾಲ್ ದಂಪತಿಗಳು ಕಾಶ್ಮೀರದ -3 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಚಳಿಯನ್ನು ಸಹ ಎಂಜಾಯ್ ಮಾಡುತ್ತಿದ್ದಾರೆ. ಇಬ್ಬರೂ ತಮ್ಮ Insta ಸ್ಟೋರಿಯಲ್ಲಿ ಹಿಮಭರಿತ ಪರ್ವತಗಳ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.
ಚಹಲ್ ಮತ್ತು ಧನಶ್ರೀ ತಮ್ಮ ಮೊದಲ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಲು ಇಲ್ಲಿಗೆ ಬಂದಿದ್ದಾರೆ. ಕಳೆದ ವರ್ಷ ಡಿಸೆಂಬರ್ 22ರಂದು ಈ ಜೋಡಿಯ ವಿವಾಹ ದೆಹಲಿಯಲ್ಲಿ ಅದ್ಧೂರಿಯಾಗಿ ನಡೆದಿತ್ತು. ಅವರ ಮದುವೆಯಲ್ಲಿ ಶಿಖರ್ ಧವನ್ ಕೂಡ ಭಾಗವಹಿಸಿದ್ದರು.
ಈ ಜೋಡಿ ತಮ್ಮ ಮದುವೆಯ ನಂತರ ಯಾವಾಗಲೂ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಪ್ರತಿ ಐಪಿಎಲ್ ಪಂದ್ಯದಲ್ಲೂ ಧನಶ್ರೀ ತನ್ನ ಪತಿ ಮತ್ತು ಆತನ ತಂಡವಾದ ಆರ್‌ಸಿಬಿಯನ್ನು ಹುರಿದುಂಬಿಸುತ್ತಿದ್ದರು. ಐಪಿಎಲ್ 2020 ಮತ್ತು 2021ರ ಸಮಯದಲ್ಲಿ ಧನಶ್ರೀ ವರ್ಮಾ, ಚಹಲ್ ಜೊತೆ ಯುಎಇನಲ್ಲಿದ್ದರು.
ವೇಕೆಷನ್‌ಗೆ ಹೋಗುವ ಮೊದಲು, ಯುಜುವೇಂದ್ರ ಚಹಲ್ ವಿಜಯ್ ಹಜಾರೆ ಟ್ರೋಫಿ 2021-22 ರಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಅವರು 5 ಪಂದ್ಯಗಳಲ್ಲಿ 14 ವಿಕೆಟ್ ಪಡೆದಿದ್ದರು. ಇದರೊಂದಿಗೆ ಈ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು
ಚಹಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ವೃತ್ತಿಯಲ್ಲಿ ಯೂಟ್ಯೂಬರ್ ಆಗಿದ್ದಾರೆ ಮತ್ತು ಅವರ ನೃತ್ಯ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾರೆ. ಧನಶ್ರೀ ನೃತ್ಯಗಾರ್ತಿ ಜೊತೆಗೆ ನೃತ್ಯ ನಿರ್ದೇಶಕಿಯೂ ಹೌದು. ಮುಂಬೈನಲ್ಲಿ ತಮ್ಮದೇ ಆದ ನೃತ್ಯ ಸಂಸ್ಥೆಯನ್ನೂ ಹೊಂದಿದ್ದಾರೆ.