ಲಂಡನ್: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಹಾಗೂ ಕೊನೆಯ ಟೆಸ್ಟ್ ಪಂದ್ಯವು ದಿ ಓವಲ್ ಮೈದಾನದಲ್ಲಿ ಆರಂಭವಾಗಲಿದೆ. ಈ ಟೆಸ್ಟ್ ಪಂದ್ಯದಲ್ಲಿ 4 ಬದಲಾವಣೆಗಳೊಂದಿಗೆ ಇಂಗ್ಲೆಂಡ್ ತಂಡವು ಕಣಕ್ಕಿಳಿಯುತ್ತಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಅಂತಿಮ ಹಂತ ತಲುಪಿದೆ. ಮೊದಲ ಮತ್ತು ಮೂರನೇ ಟೆಸ್ಟ್‌ಗಳಲ್ಲಿ ಇಂಗ್ಲೆಂಡ್ ಗೆದ್ದರೆ, ಎರಡನೇ ಟೆಸ್ಟ್‌ನಲ್ಲಿ ಭಾರತ ಗೆದ್ದಿದೆ. ನಾಲ್ಕನೇ ಟೆಸ್ಟ್ ಡ್ರಾ ಆಗಿದೆ.
210
ಐದನೇ ಟೆಸ್ಟ್ ಪಂದ್ಯವು ಇಲ್ಲಿನ ದಿ ಓವಲ್‌ನಲ್ಲಿ ಇಂದಿನಿಂದ ಆರಂಭವಾಗಲಿದೆ. ಭಾರತ ಗೆದ್ದರೆ ಸರಣಿ ಡ್ರಾ ಆಗುತ್ತದೆ. ಇಂಗ್ಲೆಂಡ್ ಡ್ರಾ ಮಾಡಿದರೂ ಸರಣಿ ಗೆಲ್ಲುತ್ತದೆ.
310
ಕೊನೆಯ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವು 4 ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಗಾಯದ ಸಮಸ್ಯೆಯಿಂದಾಗಿ ಬೆನ್ ಸ್ಟೋಕ್ಸ್, ಕೊನೆಯ ಟೆಸ್ಟ್‌ನಿಂದ ಹೊರಬಿದ್ದಿದ್ದು, ಓಲಿ ಪೋಪ್ ನಾಯಕನಾಗಿ ಇಂಗ್ಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ.
ಬೆನ್ ಸ್ಟೋಕ್ಸ್ ಇಡೀ ಸರಣಿಯಲ್ಲಿ ಗಾಯದಿಂದ ಬಳಲುತ್ತಿದ್ದರು ಮತ್ತು ನಾಲ್ಕನೇ ಟೆಸ್ಟ್‌ನಲ್ಲಿ ಭುಜದ ಗಾಯಕ್ಕೆ ತುತ್ತಾದರು. ಇದು ಗ್ರೇಡ್ 3 ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ ಎಂದು ವರದಿಯಾಗಿದೆ.
510
ಭಾರತ ಟೆಸ್ಟ್ ಸರಣಿಯ ನಂತರ ಇಂಗ್ಲೆಂಡ್ ಕ್ರಿಕೆಟ್ ತಂಡವು ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಆಷಸ್ ಸರಣಿಯನ್ನು ಆಡಲಿದೆ. ಆದ್ದರಿಂದ, ಸ್ಟೋಕ್ಸ್ 5ನೇ ಟೆಸ್ಟ್‌ನಿಂದ ಹೊರಗುಳಿದಿದ್ದಾರೆ. ಇದು ಇಂಗ್ಲೆಂಡ್‌ಗೆ ಹಿನ್ನಡೆಯಾಗಿದೆ.
610
ಏಕೆಂದರೆ ಅವರು ಬ್ಯಾಟಿಂಗ್‌ನಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ ಮತ್ತು ಬೌಲಿಂಗ್‌ನಲ್ಲಿ ಚೆನ್ನಾಗಿ ಬೌಲ್ ಮಾಡುತ್ತಿದ್ದಾರೆ. ಈ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ (15 ವಿಕೆಟ್) ಪಡೆದ ಬೌಲರ್ ಎನಿಸಿಕೊಂಡಿದ್ದಾರೆ.
710
5ನೇ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡದಲ್ಲಿ 4 ಬದಲಾವಣೆಗಳಾಗಿವೆ. ಸ್ಟೋಕ್ಸ್ ಗಾಯದಿಂದ ಹೊರಗುಳಿದಿದ್ದರೆ, ಜೋಫ್ರಾ ಆರ್ಚರ್, ಬ್ರೈಡನ್ ಕಾರ್ಸ್ ಮತ್ತು ಲಿಯಾನ್ ಡಾವ್ಸನ್ ಅವರನ್ನು ಕೈಬಿಡಲಾಗಿದೆ.
810
ಇನ್ನು ಮೊದಲ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದ, ಆರ್‌ಸಿಬಿ ಸ್ಪೋಟಕ ಬ್ಯಾಟರ್ ಜೆಕೊಬ್ ಬೆಥೆಲ್‌ಗೆ ಇದೇ ಮೊದಲ ಸಲ ಭಾರತ ಎದುರಿನ ಟೆಸ್ಟ್ ಸರಣಿಯಲ್ಲಿ ಸ್ಥಾನ ನೀಡಲಾಗಿದೆ.
910
ಹೌದು, ಜೇಕಬ್ ಬೆಥೆಲ್, ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್ ಮತ್ತು ಜೋಶ್ ಟಂಗ್ ಅವರು ತಂಡ ಕೂಡಿಕೊಂಡಿದ್ದಾರೆ. ಈ ಪೈಕಿ ಜೋಶ್ ಟಂಗ್ ಹೊರತುಪಡಿಸಿ ಉಳಿದ 3 ಆಟಗಾರರು ಈ ಟೆಸ್ಟ್ ಸರಣಿಯಲ್ಲಿ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದ್ದಾರೆ..
1010
ಭಾರತ ವಿರುದ್ಧದ 5ನೇ ಟೆಸ್ಟ್‌ಗಾಗಿ ಇಂಗ್ಲೆಂಡ್ ಪ್ಲೇಯಿಂಗ್ 11:
ಓಲಿ ಪೋಪ್ (ನಾಯಕ), ಜಾಕ್ ಕ್ರಾಲಿ, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್, ಜೇಕಬ್ ಬೆಥೆಲ್, ಜೇಮಿ ಸ್ಮಿತ್, ಕ್ರಿಸ್ ವೋಕ್ಸ್, ಗಸ್ ಅಟ್ಕಿನ್ಸನ್, ಜೇಮಿ ಓವರ್ಟನ್, ಜೋಶ್ ಟಂಗ್.