ಐಸಿಸಿ ಟಿ20 ಶ್ರೇಯಾಂಕದಲ್ಲಿ ಅಭಿಷೇಕ್ ಶರ್ಮಾ 829 ರೇಟಿಂಗ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ 814 ರೇಟಿಂಗ್‌ನೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. 5 ತಿಂಗಳಿಂದ ಒಂದು ಅಂತಾರಾಷ್ಟ್ರೀಯ ಟಿ20 ಮ್ಯಾಚ್ ಆಡದೆ ಅಭಿಷೇಕ್ ಶರ್ಮಾ ನಂ.1ಸ್ಥಾನದಲ್ಲಿರುವುದು ಅಚ್ಚರಿ ಮೂಡಿಸಿದೆ.
24
ಹೆಡ್ ಇಳಿಸಿ ನಂ.1 ಸ್ಥಾನಕ್ಕೆ ಅಭಿಷೇಕ್
ಅಭಿಷೇಕ್ ಶರ್ಮಾಗೂ ಮುನ್ನ ಟ್ರಾವಿಸ್ ಹೆಡ್ ನಂ.1 ಸ್ಥಾನದಲ್ಲಿದ್ದರು. ಆದರೆ ಸೆಪ್ಟೆಂಬರ್ 2024ರ ನಂತರ ಅವರು ಯಾವುದೇ ಅಂತಾರಾಷ್ಟ್ರೀಯ ಟಿ20 ಪಂದ್ಯ ಆಡಿಲ್ಲ. ಇದರಿಂದಾಗಿ ಅವರು ಮೊದಲ ಸ್ಥಾನ ಕಳೆದುಕೊಂಡರು. ಹೀಗಾಗಿ ಅಭಿಷೇಕ್ ಶರ್ಮಾ ಮೊದಲ ಸ್ಥಾನಕ್ಕೇರಿದರು.
34
ರೇಟಿಂಗ್ ಅಂಕ ಕಳೆದುಕೊಳ್ಳದ ಅಭಿಷೇಕ್
ಐಸಿಸಿ ನಿಯಮದ ಪ್ರಕಾರ, ಆಟಗಾರರು ಪಂದ್ಯಗಳನ್ನು ತಪ್ಪಿಸಿಕೊಂಡರೆ ರೇಟಿಂಗ್ ಅಂಕಗಳನ್ನು ಕಳೆದುಕೊಳ್ಳುತ್ತಾರೆ. ಟ್ರಾವಿಸ್ ಹೆಡ್ ಕಳೆದ ಸೆಪ್ಟೆಂಬರ್‌ನಿಂದ ಟಿ20 ಪಂದ್ಯಗಳನ್ನು ಆಡಿಲ್ಲ. ಹೀಗಾಗಿ ಅವರ ರೇಟಿಂಗ್ 814ಕ್ಕೆ ಇಳಿದಿದೆ. ಆದರೆ ಫೆಬ್ರವರಿ 2025ರಿಂದ ಭಾರತ ಒಂದೇ ಒಂದು ಟಿ20 ಪಂದ್ಯ ಆಡದ ಕಾರಣ ಅಭಿಷೇಕ್ ಶರ್ಮಾ ರೇಟಿಂಗ್ ಅಂಕಗಳನ್ನು ಕಳೆದುಕೊಂಡಿಲ್ಲ.
2024ರಲ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಅಭಿಷೇಕ್ ಶರ್ಮಾ ಅಂತಾರಾಷ್ಟ್ರೀಯ ಟಿ20ಗೆ ಪದಾರ್ಪಣೆ ಮಾಡಿದರು. ಎರಡನೇ ಪಂದ್ಯದಲ್ಲೇ ಶತಕ ಬಾರಿಸಿ ಮಿಂಚಿದರು. ಈ ವರ್ಷದ ಫೆಬ್ರವರಿಯಲ್ಲಿ ಇಂಗ್ಲೆಂಡ್ ವಿರುದ್ಧ 54 ಎಸೆತಗಳಲ್ಲಿ 135 ರನ್ ಗಳಿಸಿ ಭಾರತೀಯ ಆಟಗಾರನ ಅತ್ಯಧಿಕ ವೈಯಕ್ತಿಕ ಟಿ20I ಸ್ಕೋರ್ ದಾಖಲೆ ನಿರ್ಮಿಸಿದರು. ಈ ಪಂದ್ಯಗಳು ಅವರಿಗೆ ಹೆಚ್ಚಿನ ರೇಟಿಂಗ್ ತಂದುಕೊಟ್ಟವು.