'ಸೀರೆಲಿ ಹುಡುಗೀರ ನೋಡಲೇಬಾರದು....': RCB ಡ್ರೀಮ್ ಗರ್ಲ್ ಪೆರ್ರಿಯ ದೇಸಿ ಲುಕ್ ವೈರಲ್

First Published | Mar 10, 2024, 5:47 PM IST

ಬೆಂಗಳೂರು: ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರ್ತಿ ಎಲೈಸಿ ಪೆರ್ರಿ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಬಂದಿದ್ದಾರೆ. ಇದೀಗ ಪೆರ್ರಿ ದೇಸಿ ಶೈಲಿಯ ಸೀರೆಯುಟ್ಟು ಅಭಿಮಾನಿಗಳ ಮನ ಕದ್ದಿದ್ದಾರೆ.
 

ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಆರ್‌ಸಿಬಿ ಸ್ಟಾರ್ ಆಟಗಾರ್ತಿ ಎಲೈಸಿ ಪೆರ್ರಿ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಬಂದಿದ್ದಾರೆ. ಇದೀಗ ಪೆರ್ರಿ ದೇಸಿ ಶೈಲಿಯ ಸೀರೆಯುಟ್ಟು ಅಭಿಮಾನಿಗಳ ಮನ ಕದ್ದಿದ್ದಾರೆ.
 

ಸೀರೆಲಿ ಹುಡುಗೀರ ನೋಡಲೇಬಾರದು ನಿಲ್ಲೊಲ್ಲ ಟೆಂಪ್ರೇಚರ್ ಎನ್ನುವ ಹಾಡು ಇದೀಗ ಆಸ್ಟ್ರೇಲಿಯಾ ಮೂಲದ ಆರ್‌ಸಿಬಿ ಆಟಗಾರ್ತಿ ಎಲೈಸಿ ಪೆರ್ರಿಗೆ ಸಕ್ಕತ್ತಾಗಿಯೇ ಹೊಂದಾಣಿಕೆಯಾಗುವಂತಿದೆ.

Tap to resize

ಆಸ್ಟ್ರೇಲಿಯಾದ ಅನುಭವಿ ಆಲ್ರೌಂಡರ್ ಹಾಗೂ ಸಹಜ ಸುಂದರಿಯಾಗಿರುವ ಎಲೈಸಿ ಪೆರ್ರಿ ಎರಡನೇ ಆವೃತ್ತಿಯ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಒಂದಿಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಬಂದಿದ್ದಾರೆ.

ಹೌದು, ಎಲೈಸಿ ಪೆರ್ರಿ ಆರ್‌ಸಿಬಿ ಪರ ತಮ್ಮ ಆಲ್ರೌಂಡ್ ಆಟದ ಮೂಲಕ ಮಿಂಚುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಪೆರ್ರಿ ಭರ್ಜರಿ ಸಿಕ್ಸರ್ ಸಿಡಿಸಿ ಮೈದಾನದಲ್ಲಿದ್ದ ಕಾರಿನ ಗಾಜು ನುಚ್ಚುನೂರು ಮಾಡಿದ್ದರು.

ಇದೀಗ ಎಲೈಸಿ ಪೆರ್ರಿ ಕಪ್ಪು ಬಣ್ಣದ ಸೀರೆ ಹಾಗೂ ಬಿಳಿ ಶರ್ಟ್ ತೊಟ್ಟು ಕಾಣಿಸಿಕೊಂಡಿದ್ದು, ಪಡ್ಡೆಹುಡುಗರ ನಿದ್ದೆಗೆಡಿಸಿದೆ. ಎಲೈಸಿ ಪೆರ್ರಿಯವರ ಈ ಹೊಸ ಲುಕ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದೆ.

ಆರ್‌ಸಿಬಿ ತಂಡದಲ್ಲಿರುವ ಹಲವು ವಿದೇಶಿ ಆಟಗಾರ್ತಿಯರು ಭಾರತೀಯ ಶೈಲಿಯ ಉಡುಪಿನಲ್ಲಿ ಮಿಂಚಿದ್ದಾರೆ. ಈ ಪೈಕಿ ಎಲೈಸಿ ಪೆರ್ರಿಯವರ ದೇಸಿ ಲುಕ್ ಅಭಿಮಾನಿಗಳ ಮನ ಗೆದ್ದಿದೆ.

ಆರ್‌ಸಿಬಿ ತಂಡವು ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಎದುರು ಅರುಣ್ ಜೇಟ್ಲಿ ಮೈದಾನದಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಈ ಪಂದ್ಯಕ್ಕೂ ಮುನ್ನ ಸ್ಮೃತಿ ಮಂಧನಾ ಪಡೆ ಕೊಂಚ ಜಾಲಿ ಮೂಡಿಗೆ ಜಾರಿದೆ.

ಆರ್‌ಸಿಬಿ ತಂಡವು 6 ಪಂದ್ಯಗಳಲ್ಲಿ 3 ಗೆಲುವು ಹಾಗೂ 3 ಸೋಲು ಸಹಿತ 6 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ಲೇ ಆಫ್‌ ಪ್ರವೇಶಿಸುವ ದೃಷ್ಟಿಯಿಂದ ಈ ಪಂದ್ಯದಲ್ಲಿ ಗೆಲುವು ಸಾಧಿಸುವುದು ಮಂಧನಾ ಪಡೆಗೆ ಮಹತ್ವದ್ದೆನಿಸಿದೆ.
 

Latest Videos

click me!