ಟೆಸ್ಟ್‌ ಆಡುವವರಿಗೆ ಬಂಪರ್‌: ಆಟಗಾರರ ವೇತನ 3 ಪಟ್ಟು ಹೆಚ್ಚಿಸಿದ BCCI..! ಪ್ರತಿ ಪಂದ್ಯಕ್ಕೆ ₹45 ಲಕ್ಷ ಬೋನಸ್

Published : Mar 10, 2024, 09:38 AM IST

ಇಂಗ್ಲೆಂಡ್ ಎದುರು ತವರಿನಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಜಯ ಸಾಧಿಸಿದ ಬೆನ್ನಲ್ಲೇ ಬಿಸಿಸಿಐ ಆಟಗಾರರಿಗೆ ಬಂಪರ್ ಬೋನಸ್ ಘೋಷಿಸಿದೆ. ಟೆಸ್ಟ್ ಕ್ರಿಕೆಟ್ ಉತ್ತೇಜಿಸುವ ಉದ್ದೇಶದಿಂದ ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದೆ. ಏನದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

PREV
18
ಟೆಸ್ಟ್‌ ಆಡುವವರಿಗೆ ಬಂಪರ್‌: ಆಟಗಾರರ ವೇತನ 3 ಪಟ್ಟು ಹೆಚ್ಚಿಸಿದ BCCI..! ಪ್ರತಿ ಪಂದ್ಯಕ್ಕೆ ₹45 ಲಕ್ಷ ಬೋನಸ್

ಬಿಸಿಸಿಐ ನುಡಿದಂತೆ ನಡೆದಿದೆ. 2022-23ರ ಕ್ರಿಕೆಟ್‌ ಋತುವಿನಿಂದಲೇ ಅನ್ವಯವಾಗುವಂತೆ, ಆಟಗಾರರು ಋತುವೊಂದರಲ್ಲಿ ಕನಿಷ್ಠ 7 ಅಥವಾ ಅದಕ್ಕಿಂತ ಹೆಚ್ಚು ಟೆಸ್ಟ್‌ಗಳನ್ನಾಡಿದರೆ, ಪ್ರತಿ ಪಂದ್ಯಕ್ಕೆ ಈಗಿರುವ 15 ಲಕ್ಷ ರು. ಸಂಭಾವನೆ ಜೊತೆಗೆ ಪ್ರತಿ ಪಂದ್ಯಕ್ಕೆ 45 ಲಕ್ಷ ರು. ಬೋನಸ್‌ ಸಿಗಲಿದೆ.
 

28

ಉದಾಹರಣೆಗೆ ಒಬ್ಬ ಆಟಗಾರ ಒಂದು ಋತುವಿನಲ್ಲಿ 10 ಟೆಸ್ಟ್‌ಗಳನ್ನು ಆಡಿದರೆ, ಆತನಿಗೆ ₹1.5 ಕೋಟಿ ಜೊತೆ ಬೋನಸ್‌ ರೂಪದಲ್ಲಿ ₹4.5 ಕೋಟಿ ಸೇರಿ ಒಟ್ಟು ₹6 ಕೋಟಿ ಸಿಗಲಿದೆ. ಇದರ ಜೊತೆಗೆ ಕೇಂದ್ರ ಗುತ್ತಿಗೆಯ ನಿಗದಿತ ವೇತನವೂ ಸಿಗಲಿದೆ.

38
Rohit Sharma

ರೋಹಿತ್‌ ಶರ್ಮಾ 2023-24ರ ಋತುವಿನಲ್ಲಿ ಭಾರತ ಆಡಿರುವ ಎಲ್ಲಾ 10 ಟೆಸ್ಟ್‌ಗಳಲ್ಲಿ ಆಡಿದ್ದಾರೆ. ಅವರಿಗೆ ₹6 ಕೋಟಿ ಪ್ಲಸ್‌ ಕೇಂದ್ರ ಗುತ್ತಿಗೆಯಲ್ಲಿ ‘ಎ+’ ದರ್ಜೆಯಲ್ಲಿರುವ ಕಾರಣ ₹7 ಕೋಟಿ ಸೇರಿ ಒಟ್ಟು ₹13 ಕೋಟಿ ಸಿಗಲಿದೆ.

48

ಇದಲ್ಲದೇ ಪ್ರತಿ ಟೀಂ ಇಂಡಿಯಾ ಪರ ಆಡುವ ಏಕದಿನ ಪಂದ್ಯಕ್ಕೆ ಪ್ರತಿ ಆಟಗಾರರು ತಲಾ ₹8 ಲಕ್ಷ, ಪ್ರತಿ ಅಂತಾರಾಷ್ಟ್ರೀಯ ಟಿ20 ಪಂದ್ಯಕ್ಕೆ ₹4 ಲಕ್ಷ ಸಂಭಾವನೆ ಸಿಗಲಿದೆ.

58

ಇಶಾನ್‌ ಕಿಶನ್‌, ಶ್ರೇಯಸ್‌ ಅಯ್ಯರ್‌, ದೀಪಕ್‌ ಚಹರ್‌ ಸೇರಿ ಇನ್ನೂ ಕೆಲ ಆಟಗಾರರು ಟೆಸ್ಟ್‌, ರಣಜಿ ಟ್ರೋಫಿ ಪಂದ್ಯಗಳನ್ನು ಕಡೆಗಣಿಸಿ ಐಪಿಎಲ್‌ಗೆ ಪ್ರಾಮುಖ್ಯತೆ ನೀಡಿದ ಬೆನ್ನಲ್ಲೇ, ಟೆಸ್ಟ್‌ ಕ್ರಿಕೆಟ್‌ನತ್ತ ಆಟಗಾರರನ್ನು ಆಕರ್ಷಿಸಲು ಈ ನಿರ್ಧಾರ ಕೈಗೊಂಡಿರುವುದಾಗಿ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿದ್ದಾರೆ.

68

ಒಂದು ಋತುವಿನಲ್ಲಿ ಕನಿಷ್ಠ 9 ಟೆಸ್ಟ್‌ಗಳು ನಡೆಯಲಿದ್ದು, ಒಬ್ಬ ಆಟಗಾರ 4 ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಇದ್ದರೆ ಆತನಿಗೆ ಈಗಿರುವಂತೆಯೇ ಪ್ರತಿ ಪಂದ್ಯಕ್ಕೆ ₹15 ಲಕ್ಷ ಸಿಗಲಿದೆ. ಮೀಸಲು ಆಟಗಾರನಾಗಿದ್ದರೆ ₹7.5 ಲಕ್ಷ ಸಿಗಲಿದೆ. ಈ ಆಟಗಾರರಿಗೆ ಬೋನಸ್‌ ಸಿಗುವುದಿಲ್ಲ.

78

ಒಂದು ವೇಳೆ ಆಟಗಾರನೊಬ್ಬ ಋತುವೊಂದರಲ್ಲಿ ಕನಿಷ್ಠ 5 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳನ್ನು ಆಡಿದರೆ ಆತನಿಗೆ ಪ್ರತಿ ಪಂದ್ಯಕ್ಕೆ 15 ಲಕ್ಷ ರು. ಸಂಭಾವನೆ ಜೊತೆ ಪ್ರತಿ ಪಂದ್ಯಕ್ಕೆ ₹30 ಲಕ್ಷ ಬೋನಸ್‌ ದೊರೆಯಲಿದೆ. ಮೀಸಲು ಆಟಗಾರನಾಗಿದ್ದರೆ ₹7.5 ಲಕ್ಷ ಸಂಭಾವನೆ ಹಾಗೂ ₹15 ಲಕ್ಷ ರು. ಬೋನಸ್‌ ಸಿಗಲಿದೆ.

88

ಇನ್ನು ಆಟಗಾರ ಕನಿಷ್ಠ 7 ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಇದ್ದರೆ ಆತನಿಗೆ ಪ್ರತಿ ಪಂದ್ಯಕ್ಕೆ ₹45 ಲಕ್ಷ ಬೋನಸ್‌, ಮೀಸಲು ಆಟಗಾರನಾಗಿದ್ದರೆ ₹22.5 ಲಕ್ಷ ಬೋನಸ್‌ ಸಿಗಲಿದೆ ಎಂದು ಜಯ್‌ ಶಾ ಮಾಹಿತಿ ನೀಡಿದ್ದಾರೆ.
 

Read more Photos on
click me!

Recommended Stories