ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ವೆಸ್ಟ್ ಇಂಡೀಸ್ ಆಟಗಾರ ರಾಬಿನ್ ಸಿಂಗ್!

First Published | Sep 17, 2024, 6:20 PM IST

ಬೆಂಗಳೂರು: ಭಾರತೀಯ ತಂಡಕ್ಕೆ ಹಲವು ಅದ್ಭುತಗಳನ್ನು ಮಾಡಿದ ರಾಬಿನ್ ಸಿಂಗ್  ಮಿಂಚಿನ ವೇಗದ ಓಟ ಮತ್ತು ಅತ್ಯುತ್ತಮ ಫೀಲ್ಡಿಂಗ್ ಮೂಲಕ ಭಾರತೀಯ ತಂಡಕ್ಕೆ ಬಲಿಷ್ಠ ಆಟಗಾರರಾಗಿ ಹೊರಹೊಮ್ಮಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ವೆಸ್ಟ್ ಇಂಡೀಸ್ ಆಟಗಾರ ಎಂಬ ಹೆಗ್ಗಳಿಕೆ ರಾಬಿನ್ ಸಿಂಗ್ ಅವರದ್ದು.

ಈಗ ನಾವು ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ  ಅವರ ಓಟದ ಬಗ್ಗೆ, ಕ್ಷೇತ್ರರಕ್ಷಣೆಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಿದ್ದೇವೆ. 90ರ ದಶಕದಲ್ಲಿ ಮಿಂಚಿನ ವೇಗದಲ್ಲಿ ಓಡಬಲ್ಲ ಭಾರತದ ಏಕೈಕ ದಂತಕಥೆ ರಾಬಿನ್ ಸಿಂಗ್ ಎಂದರೆ ಅತಿಶಯೋಕ್ತಿಯಲ್ಲ

1989 ರಿಂದ 2001 ರವರೆಗೆ ರಾಬಿನ್ ಸಿಂಗ್ ಭಾರತೀಯ ತಂಡವನ್ನು ಪ್ರತಿನಿಧಿಸಿದರು. ರಾಬಿನ್ ಸಿಂಗ್ ವೆಸ್ಟ್ ಇಂಡೀಸ್‌ನ ಟ್ರಿನಿಡಾಡ್ ಮತ್ತು ಟೊಬ್ಯಾಗೋದ ಪ್ರಿನ್ಸೆಸ್ ಟೌನ್‌ನಲ್ಲಿ ಜನಿಸಿದರು. ಈ ಮೂಲಕ ವೆಸ್ಟ್‌ ಇಂಡೀಸ್‌ನಲ್ಲಿ ಜನಿಸಿ ಭಾರತವನ್ನು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಮೊದಲ ಆಟಗಾರ ಎನ್ನುವ ಹೆಗ್ಗಳಿಕೆ ರಾಬಿನ್ ಸಿಂಗ್ ಅವರದ್ದು.

Tap to resize

1963ರಲ್ಲಿ ವೆಸ್ಟ್‌ ಇಂಡೀಸ್‌ನ ಪ್ರಿನ್ಸೆಸ್ ಟೌನ್‌ನಲ್ಲಿ ಜನಿಸಿದ ರಾಬಿನ್ ರಾಮ್‌ನರೈನ್ ಸಿಂಗ್, 1984ರಲ್ಲಿ ಭಾರತಕ್ಕೆ ವಲಸೆ ಬಂದರು. ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಕ್ರಿಕೆಟ್‌ನಲ್ಲಿ ಅಸಾಧಾರಣ ಪ್ರದರ್ಶನ ತೋರಿದ ರಾಬಿನ್ ಸಿಂಗ್, ನೋಡನೋಡುತ್ತಿದ್ದಂತೆಯೇ ಭಾರತದ ಪೌರತ್ವ ಪಡೆದು 1989ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ ಮೊದಲ ವೆಸ್ಟ್ ಇಂಡೀಸ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ ರಾಬಿನ್ ಸಿಂಗ್ ಭಾರತ ಪರ ಆಡಿದ್ದು ಏಕೈಕ ಟೆಸ್ಟ್ ಪಂದ್ಯ. ಅ ಟೆಸ್ಟ್ ಪಂದ್ಯದಲ್ಲಿ ರಾಬಿನ್ ಸಿಂಗ್ 15 ರನ್ ಮತ್ತು 12 ರನ್ ಗಳಿಸಿ ನಿರಾಸೆ ಅನುಭವಿಸಿದರು. ಮತ್ತೆ ರಾಬಿನ್ ಸಿಂಗ್ ಟೆಸ್ಟ್‌ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ.

ಟೆಸ್ಟ್ ಕ್ರಿಕೆಟ್ ಹೊರತುಪಡಿಸಿ ಏಕದಿನ ಕ್ರಿಕೆಟ್‌ನಲ್ಲಿ ತಮ್ಮ ಬ್ಯಾಟಿಂಗ್, ಅತ್ಯುತ್ತಮ ಫೀಲ್ಡಿಂಗ್, ವೇಗ ಮತ್ತು ಮಧ್ಯಮ ವೇಗದ ಬೌಲಿಂಗ್ ಮೂಲಕ ಭಾರತೀಯ ತಂಡದ ಅತ್ಯುತ್ತಮ ಆಟಗಾರ ಎನಿಸಿಕೊಂಡರು. 1999 ರ ಏಕದಿನ ಕ್ರಿಕೆಟ್ ವಿಶ್ವಕಪ್‌ನಲ್ಲೂ ಸ್ಥಾನ ಪಡೆದು ಮಿಂಚಿದ್ದರು.

ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿ ಭಾರತೀಯ ತಂಡದ ನಂಬಿಗಸ್ಥ ಆಟಗಾರ ಎನಿಸಿಕೊಂಡಿದ್ದರು. ಟೀಂ ಇಂಡಿಯಾ ಪರ  136 ಏಕದಿನ ಪಂದ್ಯಗಳಲ್ಲಿ ಆಡಿರುವ ರಾಬಿನ್ ಸಿಂಗ್ 2,336 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು 9 ಅರ್ಧಶತಕಗಳನ್ನು ಬಾರಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ರಾಬಿನ್ ಸಿಂಗ್ ಗರಿಷ್ಠ ಸ್ಕೋರ್ 100 ರನ್.

ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪರ ಬೌಲಿಂಗ್‌ನಲ್ಲೂ 69 ವಿಕೆಟ್ ಪಡೆದು ಮಿಂಚಿದ್ದಾರೆ. 2001ರಲ್ಲಿ ಕೊನೆಯ ಬಾರಿಗೆ ಟೀಂ ಇಂಡಿಯಾ ಪ್ರತಿನಿಧಿಸಿದ್ದ ರಾಬಿನ್ ಸಿಂಗ್, 2004 ರಲ್ಲಿ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು. ರಾಬಿ ಸಿಂಗ್ ತರಬೇತಿ ಶಿಬಿರವನ್ನು ಆರಂಭಿಸಿ ನಡೆಸುತ್ತಿದ್ದಾರೆ.  
 

ಭಾರತೀಯ ತಂಡದಲ್ಲಿ ಅತ್ಯುತ್ತಮ ಕೊಡುಗೆ ನೀಡಿದ ರಾಬಿನ್ ಸಿಂಗ್ ಫೀಲ್ಡಿಂಗ್ ಕೋಚ್ ಆಗಿ ತಂಡದಲ್ಲಿ ಸ್ಥಾನ ಪಡೆದರು. ರಾಬಿನ್ ಸಿಂಗ್ ಅವರ ಅತ್ಯುತ್ತಮ ತರಬೇತಿಯು ಅವರನ್ನು ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಸಿಪಿಎಲ್ ತಂಡಗಳಿಗೆ ಸಲಹೆಗಾರರನ್ನಾಗಿ ನೇಮಿಸಿತು. ಐಪಿಎಲ್‌ನಲ್ಲೂ ಮುಂಬೈ ಇಂಡಿಯನ್ಸ್ ತಂಡದಲ್ಲೂ ಸ್ಥಾನ ಪಡೆದು ಕೊಡುಗೆ ನೀಡಿದ್ದಾರೆ.


ಕ್ರಿಕೆಟಿಗ ಮತ್ತು ಕೋಚ್ ಆಗಿ ರಾಬಿನ್ ಸಿಂಗ್ ಅವರ ಕೊಡುಗೆಯು ಭಾರತೀಯ ತಂಡದಲ್ಲಿ ಅಚ್ಚಳಿಯದೇ ಉಳಿದಿದೆ. ಅದರಲ್ಲೂ ರಾಬಿನ್ ಸಿಂಗ್ ಅವರ ಕ್ಷೇತ್ರರಕ್ಷಣೆ ಹಲವು ಯುವ ಕ್ರಿಕೆಟಿಗರ ಪಾಲಿಗೆ ಇಂದಿಗೂ ಸ್ಪೂರ್ತಿ ಎನಿಸಿಕೊಂಡಿದೆ. 

Latest Videos

click me!