ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಮುಕ್ತಾಯವಾದ ಬೆನ್ನಲ್ಲಿಯೇ ಯಜುವೇಂದ್ರ ಚಾಹಲ್ ಪತ್ನಿ ಧನಶ್ರೀ ವರ್ಮ ತಮ್ಮ ಟ್ರಿಪ್‌ನ ಹಾಟ್ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಟೀಮ್ ಇಂಡಿಯಾ ಕ್ರಿಕೆಟಿಗ ಯಜುವೇಂದ್ರ ಚಾಹಲ್ ಕ್ರಿಕೆಟ್ ಸರಣಿ ನಿಮಿತ್ತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದಾರೆ. ಆದರೆ, ಭಾರತ ತಂಡ ಟಿ20 ಸರಣಿಯಲ್ಲಿ 2-3 ರಿಂದ ಸೋಲು ಕಂಡಿದೆ.
214
ಯಜುವೇಂದ್ರ ಚಾಹಲ್ ಅವರೊಂದಿಗೆ ಪತ್ನಿ ಧನಶ್ರೀ ವರ್ಮಾ ಕೂಡ ವೆಸ್ಟ್ ಇಂಡೀಸ್ ಹಾಗೂ ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
314
ಡಾನ್ಸರ್ ಕೂಡ ಆಗಿರುವ ಧನಶ್ರೀ ವರ್ಮ ಸದ್ಯ ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಇದರ ನಡುವೆ ಪತಿಯ ಜತೆಗೆ ಪ್ರತಿ ಪ್ರವಾಸದಲ್ಲೂ ಸಾಥ್ ನೀಡಿದ್ದಾರೆ.
414
ತಮ್ಮ ಅಮೆರಿಕ ಪ್ರವಾಸದ ಪ್ರತಿ ಚಿತ್ರಗಳನ್ನು ಸೋಶಿಯಲ್ ಮೀಡಿಯಾ ಅದರಲ್ಲೂ ಇನ್ಸ್‌ಟಾಗ್ರಾಮ್‌ನಲ್ಲಿ ಅವರು ಹಂಚಿಕೊಳ್ಳುತ್ತಿದ್ದಾರೆ.
514
ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಅಮೆರಿಕದ ಲೌಡೆರ್‌ಹಿಲ್‌ನಲ್ಲಿ ಎರಡು ಟಿ20 ಪಂದ್ಯಗಳನ್ನು ಆಡಿದವು. ಈ ವೇಳೆ ಧನಶ್ರಿ ವರ್ಮ ವೀಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡಿದ್ದರು.
614
ಕ್ರಿಕೆಟ್ ಮೈದಾನದಲ್ಲಿ ತಮ್ಮ ಎರಡು ಹಾಟ್ ಫೋಟೋಗಳನ್ನು ಹಂಚಿಕೊಂಡಿರುವ ಆಕೆ, ಅಲ್ಲಿನ ಕ್ರಿಕೆಟ್ ಅಭಿಮಾನಿಗಳನ್ನು ಉದ್ದೇಶಿಸಿ ಬರೆದುಕೊಂಡಿದ್ದಾರೆ.
714
ಅಮೆರಿಕದ ಮಿಯಾಮಿಯಲ್ಲಿ ಕ್ರಿಕೆಟ್ ಇಷ್ಟು ಪ್ರಮಾಣದ ಅಭಿಮಾನಿಗಳು ಇದ್ದಾರೆ ಎನ್ನುವುದನ್ನು ನೋಡಿ ನನಗೆ ಬಹಳ ಅಚ್ಚರಿಯಾಗಿದೆ ಎಂದು ಬರೆದುಕೊಂಡಿದ್ದಾರೆ.
814
ಅದರೊಂದಿಗೆ ಅಮರಿಕದ ನ್ಯೂಯಾರ್ಕ್ ಸೇರಿದಂತೆ ಇತರ ನಗರಗಳಲ್ಲಿ ತಮ್ಮ ಪ್ರವಾಸದ ಚಿತ್ರಗಳನ್ನೂ ಕೂಡ ಧನಶ್ರೀ ವರ್ಮ ಹಂಚಿಕೊಂಡಿದ್ದಾರೆ.
914
ಇತ್ತೀಚೆಗೆ ತಮ್ಮ ಪತಿ ಯಜುವೇಂದ್ರ ಚಾಹಲ್ ಅವರ ಕುರಿತಾಗಿ ಇನ್ಸ್‌ಟಾಗ್ರಾಮ್ ಪೋಸ್ಟ್‌ಅನ್ನು ಅವರು ಶೇರ್ ಮಾಡಿದ್ದರು. ನಿಮ್ಮಂಥ ಸಹೃದಯ ವ್ಯಕ್ತಿಗಳಿಗೆ ಯಾವಾಗಲೂ ಒಳ್ಳೆಯದೇ ಆಗಬೇಕು ಎಂದು ಬರೆದಿದ್ದರು.
1014
ಧನಶ್ರೀ ವರ್ಮ ಹಾಗೂ ಯಜುವೇಂದ್ರ ಚಾಹಲ್ ಸ್ಪೆಷಲ್ ಜೋಡಿಯಾಗಿ ಹೆಸರುವಾಸಿಯಾಗಿದ್ದಾರೆ. ಧನಶ್ರೀ ವರ್ಮ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಜನಪ್ರಿಯರು.
1114
2020ರ ಡಿಸೆಂಬರ್‌ನಲ್ಲಿ ಯಜುವೇಂದ್ರ ಚಾಹಲ್ ಹಾಗೂ ಧನಶ್ರೀ ವರ್ಮ ವಿವಾಹವಾಗಿದ್ದರು. ಆ ನಂತರ ಧನಶ್ರೀ ಫಾಲೋವರ್ಸ್‌ಗಳಲ್ಲಿ ಅಪಾರ ಏರಿಕೆಯಾಗಿದೆ.