ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್-ಧನಶ್ರೀ ವರ್ಮಾ ನಡುವೆ ಡಿವೋರ್ಸ್ ಆಗಿ ಕೆಲ ತಿಂಗಳುಗಳೇ ಕಳೆದಿವೆ. ಈ ನಡುವೆ ಡಿವೋರ್ಸ್ ದಿನ ಚಹಲ್ ಧರಿಸಿದ್ದ 'ಶುಗರ್ ಡ್ಯಾಡಿ' ಟಿ ಶರ್ಟ್ ಕುರಿತಂತೆ ಮೊದಲ ಬಾರಿಗೆ ಧನಶ್ರೀ ಪ್ರತಿಕ್ರಿಯೆ ನೀಡಿದ್ದಾರೆ.
2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ, 2025ರ ಮಾರ್ಚ್ 20ರಂದು ಡಿವೋರ್ಸ್ ಪಡೆದುಕೊಳ್ಳುವ ಮೂಲಕ ಈ ಜೋಡಿ ಬೇರ್ಪಟ್ಟಿದ್ದಾರೆ.
28
ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟ ಬಳಿಕ 18 ತಿಂಗಳುಗಳ ಕಾಲ ಧನಶ್ರೀ ವರ್ಮಾ ಹಾಗೂ ಯುಜುವೇಂದ್ರ ಚಹಲ್ ಪ್ರತ್ಯೇಕವಾಗಿ ವಾಸವಿದ್ದರು. ಇದಾದ ಬಳಿಕ ಡಿವೋರ್ಸ್ ದಿನವೇ ಈ ಕೊನೆಯ ಕೊನೆಯ ಬಾರಿಗೆ ಮುಖಾಮುಖಿಯಾಗಿದ್ದರು.
38
ಬಾಂದ್ರಾದ ಕೌಟುಂಬಿಕ ನ್ಯಾಯಾಲಯಕ್ಕೆ ಬಂದಾಗ ಯುಜುವೇಂದ್ರ ಚಹಲ್ ಕಪ್ಪು ಟಿ ಶರ್ಟ್ ತೊಟ್ಟು ಬಂದಿದ್ದರು. ಈ ಟಿ ಶರ್ಟ್ ಮೇಲೆ 'Be Your Own Sugar Daddy' ಎನ್ನುವ ಟೆಕ್ಸ್ಟ್ ಎಲ್ಲರ ಗಮನ ಸೆಳೆದಿತ್ತು.
ಯುಜುವೇಂದ್ರ ಚಹಲ್ ಈ ರೀತಿಯ ಜೆರ್ಸಿ ತೊಟ್ಟು ಬಂದಿದ್ದನ್ನು ಗಮನಿಸಿದ ನೆಟ್ಟಿಗರು, ಧನಶ್ರೀ ವರ್ಮಾ ಚಹಲ್‌ಗೆ ಮೋಸ ಮಾಡಿದ್ದಾರೆ ಎಂದೆಲ್ಲಾ ಆರೋಪಿಸಿದ್ದರು. ಈ ವಿಚಾರವಾಗಿ ಧನಶ್ರೀ ವರ್ಮಾ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
58
ಅವರು ಮೊದಲಿಗೆ ಕೋರ್ಟ್‌ನಿಂದ ಹೊರಹೋದರು. ನನಗೆ ಅವರು ಯಾವ ಟಿ ಶರ್ಟ್ ಹಾಕಿಕೊಂಡು ಬಂದಿದ್ದರು ಎನ್ನುವುದನ್ನು ನಾನು ಗಮನಿಸಲಿಲ್ಲ. ಯಾಕೆಂದರೆ ನಾನು ಕೋರ್ಟ್‌ನೊಳಗೆ ಇದ್ದೆ ಎಂದು ಧನಶ್ರೀ ವರ್ಮಾ ಹೇಳಿದ್ದಾರೆ.
68
ಆ ರೀತಿಯೇನಾದರೂ ಮೆಸೇಜ್ ನೀಡಬೇಕೆಂದಿದ್ದರೇ, ವಾಟ್ಸ್‌ಅಪ್ ಮಾಡಬಹುದಿತ್ತಲ್ಲ, ಅದಕ್ಕಾಗಿ ಟಿ-ಶರ್ಟ್ ಯಾಕೆ ಹಾಕಿಕೊಂಡು ಬಂದು ಗಮನ ತಮ್ಮತ್ತ ಸೆಳೆದಿರಿ ಎಂದು ಧನಶ್ರೀ ವರ್ಮಾ, ಚಹಲ್‌ಗೆ ಪ್ರಶ್ನಿಸಿದ್ದಾರೆ.
78
ಕೋರ್ಟ್‌ನಲ್ಲಿ ಡಿವೋರ್ಸ್ ಕುರಿತಂತೆ ಅಂತಿಮ ತೀರ್ಪು ಹೊರಬರುವಾಗ ನಾನು ಕೋರ್ಟ್‌ನಲ್ಲಿಯೇ ಇದ್ದೆ. ಈ ತೀರ್ಪು ಆಲಿಸಲು ಮಾನಸಿಕವಾಗಿ ಮೊದಲೇ ಸಿದ್ದತೆ ನಡೆಸಿದ್ದೆ, ಆದರೂ ನಾನು ಒಂದು ಕ್ಷಣ ಭಾವುಕಳಾಗಿಬಿಟ್ಟೆ. ಎಲ್ಲರೆದುರು ನಾನು ಬಿಕ್ಕಿಬಿಕ್ಕಿ ಅಳಲಾರಂಭಿಸಿದೆ. ನನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲೇ ಇಲ್ಲ. ನಾನು ಅಳುತ್ತಿದ್ದರೂ ಚಹಲ್ ಅಲ್ಲಿಂದ ಹೊರಟುಬಿಟ್ಟರು ಎಂದು ಧನಶ್ರೀ ವರ್ಮಾ ಆ ದಿನವನ್ನು ಮೆಲುಕು ಹಾಕಿದ್ದಾರೆ.
88
ಇದಾದ ಬಳಿಕ ನಾನು ಕೋರ್ಟ್‌ನ ಹಿಂಬಾಗಿಲಿನಿಂದ ಮನೆಗೆ ವಾಪಾಸ್ಸಾದೆ. ಯಾಕೆಂದರೆ ನನಗೆ ಮೀಡಿಯಾಗಳನ್ನು ಎದುರಿಸಲು ಇಷ್ಟವಿರಲಿಲ್ಲ. ನಾನು ನಾರ್ಮಲ್ ಜೀನ್ಸ್ ಹಾಗೂ ಶರ್ಟ್ ತೊಟ್ಟು ಬಂದಿದ್ದೆ ಎಂದು ಧನಶ್ರೀ ವರ್ಮಾ ಹೇಳಿದ್ದಾರೆ.