ಚಹಲ್ ಜತೆ ಡಿವೋರ್ಸ್ ಬಳಿಕ ಮೊದಲ ಬಾರಿಗೆ ಮೌನ ಮುರಿದ ಧನಶ್ರೀ ವರ್ಮಾ; ಅಷ್ಟಕ್ಕೂ ಕೊನೆಯ ದಿನ ಕೋರ್ಟ್‌ನಲ್ಲಿ ನಡೆದಿದ್ದೇನು?

Published : Aug 20, 2025, 11:42 AM IST

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ನಡುವೆ ಡಿವೋರ್ಸ್ ಆಗಿ ಒಂದು ತಿಂಗಳೇ ಕಳೆದಿದೆ. ಇದೀಗ ಈ ಘಟನೆಯ ಕುರಿತಂತೆ ಧನಶ್ರೀ ವರ್ಮಾ ಮೊದಲ ಬಾರಿಗೆ ಮೌನ ಮುರಿದಿದ್ದಾರೆ.

PREV
17

ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ 2020ರ ಡಿಸೆಂಬರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದಕ್ಕೂ ಮೊದಲು ಕೆಲ ತಿಂಗಳಿನಿಂದ ಡೇಟಿಂಗ್ ನಡೆಸಿದ್ದ ಜೋಡಿ, ಕೊನೆಗೂ 2020ರ ವರ್ಷಾಂತ್ಯದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

27

ಸಾಮಾಜಿಕ ಜಾಲತಾಣಗಳಲ್ಲಿ ಈ ಜೋಡಿ ಸಾಕಷ್ಟು ಸಕ್ರಿಯರಾಗಿದ್ದರು. ಆದರೆ ಮದುವೆಯಾಗಿ ಕೇವಲ 5 ವರ್ಷಗಳಾಗುವಷ್ಟರಲ್ಲಿ ಈ ಜೋಡಿಯ ದಾಂಪತ್ಯದಲ್ಲಿ ಬಿರುಕು ಉಂಟಾಗಿ ಡಿವೋರ್ಸ್‌ಗೆ ಕೌಟುಂಬಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.

37

ಇದು ಅವರ ಅಭಿಮಾನಿ ವಲಯದಲ್ಲಿ ಸಾಕಷ್ಟು ಅಚ್ಚರಿಗೆ ಕಾರಣವಾಗಿತ್ತು. 2025ರ ಫೆಬ್ರವರಿಯಲ್ಲಿ ಮುಂಬೈನ ಬಾಂಧ್ರಾ ಕೌಂಟುಬಿಕ ನ್ಯಾಯಾಲಯದಲ್ಲಿ ಈ ಜೋಡಿ ಪರಸ್ಪರ ಸಮ್ಮತಿ ಮೇರೆಗೆ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದರು.

47

18 ತಿಂಗಳುಗಳ ಕಾಲ ಪ್ರತ್ಯೇಕವಾಗಿ ವಾಸವಿದ್ದ ಈ ಜೋಡಿ ಕೊನೆಗೂ ಮಾರ್ಚ್ 20, 2025ರಂದು ಅಧಿಕೃತವಾಗಿ ವಿಚ್ಛೇದನಾ ಪಡೆದುಕೊಂಡರು. ಮಾಧ್ಯಮಗಳ ವರದಿ ಪ್ರಕಾರ, ಚಹಲ್, ಧನಶ್ರೀಗೆ 4.75 ಕೋಟಿ ರುಪಾಯಿ ಜೀವನಾಂಶ ನೀಡಿದ್ದಾರೆ ಎಂದೆಲ್ಲಾ ವರದಿಯಾಗಿದೆ.

57

ಇದೀಗ ಡಿವೋರ್ಸ್‌ ಪಡೆದ ಕೊನೆಯ ದಿನ ಕೋರ್ಟ್‌ನಲ್ಲಿ ಏನೆಲ್ಲಾ ಆಯಿತು ಎನ್ನುವುದರ ಬಗ್ಗೆ ಧನಶ್ರೀ ವರ್ಮಾ ಮೌನ ಮುರಿದಿದ್ದಾರೆ. ಕೋರ್ಟ್‌ನಲ್ಲಿ ಡಿವೋರ್ಸ್ ಕುರಿತಂತೆ ಅಂತಿಮ ತೀರ್ಪು ಹೊರಬರುವಾಗ ನಾನು ಕೋರ್ಟ್‌ನಲ್ಲಿಯೇ ಇದ್ದೆ

67

ಈ ತೀರ್ಪು ಆಲಿಸಲು ಮಾನಸಿಕವಾಗಿ ಮೊದಲೇ ಸಿದ್ದತೆ ನಡೆಸಿದ್ದೆ, ಆದರೂ ನಾನು ಒಂದು ಕ್ಷಣ ಭಾವುಕಳಾಗಿಬಿಟ್ಟೆ. ಎಲ್ಲರೆದುರು ನಾನು ಬಿಕ್ಕಿಬಿಕ್ಕಿ ಅಳಲಾರಂಭಿಸಿದೆ. ನನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗಲೇ ಇಲ್ಲ. ನಾನು ಅಳುತ್ತಿದ್ದರೂ ಚಹಲ್ ಅಲ್ಲಿಂದ ಹೊರಟುಬಿಟ್ಟರು ಎಂದು ಧನಶ್ರೀ ವರ್ಮಾ ಆ ದಿನವನ್ನು ಮೆಲುಕು ಹಾಕಿದ್ದಾರೆ.

77

ಧನಶ್ರೀಯಿಂದ ಡಿವೋರ್ಸ್ ಪಡೆದ ಬಳಿಕ ಯುಜುವೇಂದ್ರ ಚಹಲ್, ಆರ್‌ಜೆ ಮಹ್ವಾಶ್‌ ಜತೆ ಕಾಣಿಸಿಕೊಂಡಿದ್ದರು. ಆದರೆ ಈ ಜೋಡಿ ಇದುವರೆಗೂ ತಮ್ಮ ರಿಲೇಷನ್‌ಶಿಪ್‌ ಬಗ್ಗೆ ಕನ್ಫರ್ಮ್‌ ಮಾಡಿಲ್ಲ.

Read more Photos on
click me!

Recommended Stories