ನಮ್ಮೂರಿಗೆ ರಸ್ತೆಯಿಲ್ಲ ಎಂದ World Cup ತಂದುಕೊಟ್ಟ ಗಡಿನಾಡ ಕನ್ನಡತಿ; 5 ನಿಮಿಷಕ್ಕೆ ಸ್ಯಾಂಕ್ಷನ್ ಮಾಡಿದ DCM!

Published : Feb 09, 2026, 03:42 PM IST

Deepika Tc News: ಭಾರತಕ್ಕೆ ವಿಶ್ವಕಪ್‌ ತಂದುಕೊಟ್ಟ ಅಂಧರ ಕ್ರಿಕೆಟ್‌ ತಂಡದ ಕ್ಯಾಪ್ಟನ್‌ ದೀಪಿಕಾ ಟಿಸಿ ಅವರು ಡಿಸಿಎಂ ಬಳಿ ರಸ್ತೆ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ. ಹೀಗೆ ಹೇಳಿ ಐದು ನಿಮಿಷಕ್ಕೆ ರಸ್ತೆ ಜಾರಿಯಾಗಿದೆ.

PREV
16
ದೀಪಿಕಾ ಊರು ಯಾವುದು?

ತುಮಕೂರಿನ ಶಿರಾ ತಾಲೂಕಿನ ಹುಡುಗಿ ದೀಪಿಕಾ ಟಿಎಸ್.‌ ಈಗ ದೀಪಿಕಾ ಊರು ಹೇಮಾವತಿ ಆಂಧ್ರಪ್ರದೇಶಕ್ಕೆ ಸೇರುತ್ತದೆ.

26
ದೃಷ್ಟಿ ಹೋಗಿದ್ದು ಯಾಕೆ?

ಐದು ತಿಂಗಳ ಮಗು ಆಗಿದ್ದಾಗ ಉಗುರಿನಲ್ಲಿ ಪರಚಿಕೊಂಡು ಕಣ್ಣು ಹೋಯಿತು. ನರ ವೀಕ್‌ ಇದ್ದರಿಂದ ಆಪರೇಶನ್‌ ಮಾಡಿಸಲು ಆಗೋದಿಲ್ಲ ಎಂದು ಹೇಳಿದ್ದರಂತೆ. 

36
ಊಟಕ್ಕೆ ಕಷ್ಟ

ದೀಪಿಕಾ ಅವರು ಊಟಕ್ಕೆ ಒದ್ದಾಡಿದ್ದಾರೆ. ಇಡೀ ಕುಟುಂಬ ಬಡತನದಲ್ಲಿ ಇಷ್ಟು ವರ್ಷ ಕಳೆದಿದೆ. ಕ್ರಿಕೆಟ್‌ನಿಂದ ಹಣ ಸಿಕ್ಕಿದರೆ, ಇಡೀ ತಿಂಗಳು ಮನೆಯವರಿಗೆ ಊಟ ಮಾಡೋಕೆ ರೇಶನ್‌ ಸಿಗುತ್ತದೆ ಎಂಬ ಆಸೆಯಿತ್ತಂತೆ. ಅದರಂತೆ ಅವರು ಕ್ರಿಕೆಟ್‌ ಆಡಿ ವರ್ಲ್‌ಕಪ್‌ ತಂದುಕೊಟ್ಟರು.

46
ಊರಿನ ರಸ್ತೆಯೂ ಇಲ್ಲ

ನಾನು ಆನಂದಪುರ ಜಿಲ್ಲೆಯಾಗಿದ್ದು, ಈಗ ಸತ್ಯಸಾಯಿಯಾಗಿದೆ. ನಮ್ಮ ಊಟು ಕರ್ನಾಟಕ, ಆಂಧ್ರಪ್ರದೇಶದ ಬಾರ್ಡರ್‌ನಲ್ಲಿ ಬರುವುದು. ನಾನು ಕರ್ನಾಕಟದಲ್ಲಿ ಓದಿದ್ದೇನೆ. ನಮ್ಮ ಊರಿನಲ್ಲಿ ರಸ್ತೆಯೂ ಇಲ್ಲ. ನಮ್ಮ ಊರಿನಲ್ಲಿರುವವರಿಗೆ ಊಟ-ತಿಂಡಿ ಕೂಡ ಸಿಗೋದಿಲ್ಲ ಎಂದು ಪವನ್‌ ಕಲ್ಯಾಣ್‌ ಮುಂದೆ ಹೇಳಿದ್ದಾರೆ.

56
ಐದೇ ನಿಮಿಷಕ್ಕೆ ಮಂಜೂರಿ

ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಅವರ ಬಳಿ ದೀಪಿಕಾ ಈ ವಿಚಾರವಾಗಿ ಮಾತನಾಡಿದ್ದರು. ದೀಪಿಕಾ ಅವರು ಸಮಸ್ಯೆ ಹೇಳಿಕೊಂಡು ಐದು ನಿಮಿಷಕ್ಕೆ ಓಕೆ ಎಂದಿದ್ದಾರೆ. ಅಷ್ಟೇ ಅಲ್ಲದೆ ರಸ್ತೆ ಮಂಜೂರಿ ಆಗಿದೆಯಂತೆ.

66
ಹಣದ ಆಸೆಯಿಂದಲೇ ಕ್ರಿಕೆಟ್‌ಗೆ ಬರುತ್ತಾರೆ

ಮ್ಯಾಚ್‌ನಲ್ಲಿ ಹಣ ಸಿಗುತ್ತದೆ ಎಂದು ಎಷ್ಟೋ ಹೆಣ್ಣು ಮಕ್ಕಳು ಕ್ರಿಕೆಟ್‌ ರಂಗಕ್ಕೆ ಬರುವುದುಂಟು. ಇದರಿಂದ ಮನೆಗೆ ಸಹಾಯ ಮಾಡಬಹುದು ಎಂಬ ಆಸೆ ಇದೆ. ಗಬ್ಬರ್‌ ಸಿಂಗ್‌ ಸಿನಿಮಾವನ್ನು ನಾನು ಎಷ್ಟು ಬಾರಿ ನೋಡಿದ್ದೀನೋ ಗೊತ್ತಿಲ್ಲ, ನನಗೆ ಅಷ್ಟು ಇಷ್ಟ ಆಗಿತ್ತು. ನೀವು ನಮ್ಮ ಸಮಸ್ಯೆಯನ್ನು ಬಗೆಹರಿಸ್ತೀರಿ ಎಂದು ನಂಬಿದ್ದೇನೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories