ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅವರ ಟೀಮ್ ಇಂಡಿಯಾ ಸೇರುವ ಕನಸು ನನಸಾಗಿದೆ. ಬಿಸಿಸಿಐನಿಂದ ಸರ್ಪ್ರೈಸ್ ಬಾಕ್ಸ್‌ನಲ್ಲಿ ತಮ್ಮ 'ಪ್ಲೇಯರ್ ನಂಬರ್ 532' ಮತ್ತು 'ಜೆರ್ಸಿ ನಂಬರ್ 3' ಇರುವ ನೀಲಿ ಜೆರ್ಸಿಯನ್ನು ಪಡೆದ ಅವರು, ಈ ಭಾವುಕ ಕ್ಷಣದ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.
ಮೊದಲ ದಿನದಿಂದಲೇ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನದಲ್ಲಿ ಕಷ್ಟಪಟ್ಟ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರ ದೊಡ್ಡ ಕನಸು ಕೊನೆಗೂ ನನಸಾಗಿದೆ. ಭಾರತ ತಂಡವನ್ನು ಪ್ರತಿನಿಧಿಸುವ ಅವರ ಸುದೀರ್ಘ ಜರ್ನಿಯ ಅತ್ಯಂತ ಪ್ರಮುಖ ಮೈಲಿಗಲ್ಲು ಇಂದು ಪೂರ್ಣಗೊಂಡಿದೆ.
26
ಮಾತುಗಳಿಗೆ ನಿಲುಕದ ಭಾವುಕತೆ
ಟೀಮ್ ಇಂಡಿಯಾದ 'ಥ್ರೀ ಸ್ಟಾರ್' ನೀಲಿ ಜೆರ್ಸಿಯನ್ನು ಪಡೆದ ನಂತರ ವೈಭವ್ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. "ಈ ಫೀಲಿಂಗ್ ಅನ್ನು ನನ್ನಿಂದ ಮಾತುಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ನನ್ನ ಭಾವನೆಗಳನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ" ಎಂದು ಅವರು ಅತ್ಯಂತ ಭಾವುಕರಾಗಿ ನುಡಿದಿದ್ದಾರೆ.
36
ಪ್ಲೇಯರ್ ನಂಬರ್ 532 ಮತ್ತು ಜೆರ್ಸಿ ನಂಬರ್ 3
ವೈಭವ್ ಸೂರ್ಯವಂಶಿ ಅವರಿಗೆ ಟೀಮ್ ಇಂಡಿಯಾದಲ್ಲಿ 'ಪ್ಲೇಯರ್ ನಂಬರ್ 532' (Player-532) ಎಂಬ ಅಧಿಕೃತ ಸ್ಥಾನ ಸಿಕ್ಕಿದೆ. ಇನ್ನು ಮೈದಾನದಲ್ಲಿ ಅವರು '3' (03) ಸಂಖ್ಯೆಯ ಜೆರ್ಸಿ ಧರಿಸಿ ಅಬ್ಬರಿಸಲಿದ್ದಾರೆ. ಜೆರ್ಸಿಯ ಹಿಂಭಾಗದಲ್ಲಿ ಅವರ ಹೆಸರನ್ನು ಮುದ್ರಿಸಲಾಗಿದೆ.
ಬಿಸಿಸಿಐ ಹಂಚಿಕೊಂಡಿರುವ ವಿಡಿಯೋದಲ್ಲಿ ತೋರಿಸಿರುವಂತೆ, ಬಿಸಿಸಿಐ (BCCI) ಲೋಗೋ ಇರುವ ವಿಶೇಷ ಕಿಟ್ ಬಾಕ್ಸ್ ಅನ್ನು ಹೋಟೆಲ್ ಸಿಬ್ಬಂದಿ ಟ್ರಾಲಿಯ ಮೂಲಕ ವೈಭವ್ ಅವರ ರೂಮ್‌ಗೆ ತಲುಪಿಸುತ್ತಾರೆ. ಟೀಮ್ ಇಂಡಿಯಾ ಸಿಬ್ಬಂದಿ ಆಗಿರುವ ಕರ್ನಾಟಕದ ಉತ್ತರ ಕನ್ನಡದ ಕುಮಟಾ ಮೂಲದ ರಘು ಅವರು ವೈಭವ್ ಸೂರ್ಯವಂಶಿ ಅವರ ರೂಮ್‌ಗೆ ಜೆರ್ಸಿ ಇದ್ದ ಬಾಕ್ಸ್‌ಅನ್ನು ತಲುಪಿಸಿದ್ದಾರೆ. ಈ ಬಾಕ್ಸ್ ಅನ್ನು ತೆರೆಯುವಾಗ ವೈಭವ್ ಅವರ ಮುಖದಲ್ಲಿ ಕುತೂಹಲ ಎದ್ದು ಕಾಣುತ್ತಿತ್ತು.
56
ಜೆರ್ಸಿ ನೋಡಿ ಹೆಮ್ಮೆ ಪಟ್ಟ ವೈಭವ್
ಬಾಕ್ಸ್ ಓಪನ್ ಮಾಡಿ ಇಂಡಿಯನ್ ಜೆರ್ಸಿಯನ್ನು ಕೈಗೆತ್ತಿಕೊಂಡ ತಕ್ಷಣ ವೈಭವ್ ಅವರ ಮುಖದಲ್ಲಿ ಹೆಮ್ಮೆಯ ನಗು ಮೂಡಿದೆ. "ಈ ಟೀ ಶರ್ಟ್ ನೋಡಿದ ತಕ್ಷಣ ನನಗೆ ನಗು ತಡೆಯಲು ಸಾಧ್ಯವಾಗಲಿಲ್ಲ, ಅಷ್ಟೊಂದು ಖುಷಿಯಾಯಿತು. ಇದು ಕೇವಲ ಒಂದು ಕನಸಿನಂತೆ ಭಾಸವಾಗುತ್ತಿದೆ" ಎಂದು ಅವರು ಹೇಳಿದ್ದಾರೆ.
66
ನಂಬಲಾಗದ ಅದ್ಭುತ ಅನುಭವ
"ಕೆಲವೊಮ್ಮೆ ನಾವು ಎಂದಿಗೂ ಊಹಿಸದ ಅದ್ಭುತಗಳು ನಮ್ಮ ಜೀವನದಲ್ಲಿ ನಡೆದುಬಿಡುತ್ತವೆ. ಅದು ಸಂಭವಿಸಿದಾಗ ನಮಗೆ ಹೇಗೆ ರಿಯಾಕ್ಟ್ ಮಾಡಬೇಕೆಂದೇ ತಿಳಿಯುವುದಿಲ್ಲ. ನನ್ನ ಸ್ಥಿತಿಯೂ ಈಗ ಹಾಗೆಯೇ ಆಗಿದೆ" ಎನ್ನುತ್ತಾ ವೈಭವ್ ಸೂರ್ಯವಂಶಿ ಭಾರತ ತಂಡದ 'ಥ್ರೀ ಸ್ಟಾರ್' ಜೆರ್ಸಿ ಮುಟ್ಟಿ ಆನಂದಿಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.