Ind vs SL ಕೊನೆಯ ಕ್ಷಣದಲ್ಲಿ ಟೀಂ ಇಂಡಿಯಾಗೆ ಶಾಕ್‌, ಲಂಕಾ ಎದುರಿನ ಸರಣಿಗೂ ಮುನ್ನ ತಾರಾ ಕ್ರಿಕೆಟಿಗ ಔಟ್‌..!

Published : Jan 09, 2023, 03:33 PM IST

ಗುವಾಹಟಿ(ಜ.09): ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಕ್ಷಣಗಣನೆ ಆರಂಭವಾಗಿದೆ. ಲಂಕಾ ಎದುರು ತವರಿನಲ್ಲಿ 2-1 ಅಂತರದಲ್ಲಿ ಟಿ20 ಸರಣಿ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಟೀಂ ಇಂಡಿಯಾಗೆ ಇದೀಗ ಶಾಕ್ ಎದುರಾಗಿದ್ದು, ತಂಡದ ತಾರಾ ಆಟಗಾರ ಏಕದಿನ ಸರಣಿ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇದ್ದಾಗ ಸರಣಿಯಿಂದ ಹೊರಬಿದ್ದಿದ್ದಾರೆ.  

PREV
16
Ind vs SL ಕೊನೆಯ ಕ್ಷಣದಲ್ಲಿ ಟೀಂ ಇಂಡಿಯಾಗೆ ಶಾಕ್‌, ಲಂಕಾ ಎದುರಿನ ಸರಣಿಗೂ ಮುನ್ನ ತಾರಾ ಕ್ರಿಕೆಟಿಗ ಔಟ್‌..!

ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಜನವರಿ 10ರಿಂದ ಆರಂಭವಾಗಲಿದ್ದು, ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಸಿದ್ದತೆಯನ್ನು ಆರಂಭಿಸಲು ಟೀಂ ಇಂಡಿಯಾ ಸಿದ್ದವಾಗಿದೆ.

26

ಟಿ20 ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಂಡಿದ್ದ ಟೀಂ ಇಂಡಿಯಾ, ಇದೀಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಇದೆಲ್ಲದರ ನಡುವೆ ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ, ಇದೀಗ ಮತ್ತೊಮ್ಮೆ ಫಿಟ್ನೆಸ್ ಸಮಸ್ಯೆಯಿಂದಾಗಿ ಹೊರಬಿದ್ದಿದ್ದಾರೆ.
 

36

ಜಸ್ಪ್ರೀತ್ ಬುಮ್ರಾ, ಕೊನೆಯ ಕ್ಷಣದಲ್ಲಿ ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಕೂಡಿಕೊಂಡಿದ್ದರು. ಆದರೆ ಇದೀಗ ಮತ್ತೆ ಕೊನೆಯ ಕ್ಷಣದಲ್ಲಿ ಬುಮ್ರಾ, ಏಕದಿನ ಸರಣಿಯಿಂದ ಹೊರಬಿದ್ದಿದ್ದಾರೆ.

46

ಜಸ್ಪ್ರೀತ್ ಬುಮ್ರಾ, 2022ರ ಸೆಪ್ಟೆಂಬರ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಕೊನೆಯ ಬಾರಿಗೆ ಕಣಕ್ಕಿಳಿದಿದ್ದರು. ಇದಾದ ಬಳಿಕ ಫಿಟ್ನೆಸ್ ಸಮಸ್ಯೆಯಿಂದಾಗಿ ಬುಮ್ರಾ, ಏಷ್ಯಾಕಪ್ ಟೂರ್ನಿ, ಟಿ20 ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದರು.

56

ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ ಟೂರ್ನಿಯಲ್ಲಿ, ಟೀಂ ಇಂಡಿಯಾ ಬೌಲಿಂಗ್ ವಿಭಾಗ ಕೊಂಚ ಮೊನಚು ಕಳೆದುಕೊಂಡಂತೆ ಭಾಸವಾಗಿತ್ತು. ಇದೀಗ ಬುಮ್ರಾ ಸಂಪೂರ್ಣ ಫಿಟ್ ಆಗಲು ಬಿಸಿಸಿಐ ಮತ್ತಷ್ಟು ಕಾಲಾವಕಾಶ ನೀಡಲಾಗಿದೆ ಎನ್ನಲಾಗುತ್ತಿದೆ. 
 

66

ರೋಹಿತ್‌ ಶರ್ಮಾ(ನಾಯಕ), ಶುಭ್‌ಮನ್ ಗಿಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ಶ್ರೇಯಸ್‌ ಅಯ್ಯರ್, ಕೆ ಎಲ್ ರಾಹುಲ್‌, ಇಶಾನ್‌ ಕಿಶನ್, ಹಾರ್ದಿಕ್‌ ಪಾಂಡ್ಯ, ವಾಷಿಂಗ್ಟನ್‌ ಸುಂದರ್, ಯುಜುವೇಂದ್ರ ಚಹಲ್‌, ಕುಲ್ದೀಪ್‌ ಯಾದವ್, ಅಕ್ಷರ್‌ ಪಟೇಲ್, ಮೊಹಮ್ಮದ್ ಶಮಿ, ಸಿರಾಜ್‌, ಉಮ್ರಾನ್‌, ಅಶ್‌ರ್‍ದೀಪ್‌.

Read more Photos on
click me!

Recommended Stories