ಇವರೇ ನನ್ನ ಬದುಕನ್ನು ಬದಲಿಸಿದವರು ಎಂದ ಹಾರ್ದಿಕ್ ಪಾಂಡ್ಯ..! ಆದ್ರೆ ಅದು ಧೋನಿ/ಕೊಹ್ಲಿಯಲ್ಲ..!

Published : Jan 08, 2023, 06:40 PM IST

ರಾಜ್‌ಕೋಟ್‌(ಜ.08): ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಸೀಮಿತ ಓವರ್‌ಗಳ ಕ್ರಿಕೆಟ್‌ನ ಭವಿಷ್ಯದ ನಾಯಕ ಎಂದು ಬಿಂಬಿಸಲಾಗುತ್ತಿದೆ. ಇದೀಗ ಹಾರ್ದಿಕ್ ಪಾಂಡ್ಯ, ತಮ್ಮ ಬದುಕು ಬದಲಾಯಿಸಿದ ವ್ಯಕ್ತಿಯನ್ನು ಹೆಸರಿಸಿದ್ದಾರೆ. ಅಷ್ಟಕ್ಕೂ ಹಾರ್ದಿಕ್‌ ಪಾಂಡ್ಯ, ಹೇಳಿದ ಹೆಸರು ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿಯವರ ಹೆಸರಲ್ಲ ಎನ್ನುವುದು ಮತ್ತೊಂದು ಅಚ್ಚರಿ..  

PREV
17
ಇವರೇ ನನ್ನ ಬದುಕನ್ನು ಬದಲಿಸಿದವರು ಎಂದ ಹಾರ್ದಿಕ್ ಪಾಂಡ್ಯ..! ಆದ್ರೆ ಅದು ಧೋನಿ/ಕೊಹ್ಲಿಯಲ್ಲ..!

ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಂ ಇಂಡಿಯಾ, ಇತ್ತೀಚೆಗಷ್ಟೇ ಮುಕ್ತಾಯವಾದ ಶ್ರೀಲಂಕಾ ಎದುರಿನ ಮೂರು ಪಂದ್ಯಗಳ ಟಿ20 ಸರಣಿಯನ್ನು 2-1 ಅಂತರದಲ್ಲಿ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

27

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಭಾರತ ಟಿ20 ತಂಡದ ನಾಯಕನಾಗಿ, ಯುವ ಪಡೆಯನ್ನು ಕಟ್ಟಿಕೊಂಡು, ಟಿ20 ಸರಣಿ ಜಯಿಸುವಲ್ಲಿ ಪಾಂಡ್ಯ ಪಡೆ ಯಶಸ್ವಿಯಾಗಿದೆ. ಇದೀಗ ಪಾಂಡ್ಯ, ತಮ್ಮ ಬದುಕು ಬದಲಿಸಿದ್ದು ಯಾರು ಎನ್ನುವ ಗುಟ್ಟು ಬಿಚ್ಚಿಟ್ಟಿದ್ದಾರೆ.

37

ಕಳೆದ ವರ್ಷ ಗುಜರಾತ್ ಟೈಟಾನ್ಸ್ ತಂಡದ ನಾಯಕರಾಗಿ, ತಮ್ಮ ತಂಡವನ್ನು ನಾಯಕನಾದ ಮೊದಲ ವರ್ಷದಲ್ಲೇ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದ ಹಾರ್ದಿಕ್ ಪಾಂಡ್ಯ, ನಾಯಕತ್ವದ ವಿಚಾರದಲ್ಲಿ ನನ್ನಲ್ಲಿ ಸಾಕಷ್ಟು ಬದಲಾವಣೆ ತಂದಿದ್ದು ಆಶಿಶ್ ನೆಹ್ರಾ ಎಂದು ಹೇಳಿದ್ದಾರೆ.
 

47

ಹೌದು, ಟೀಂ ಇಂಡಿಯಾ ಮಾಜಿ ವೇಗಿ ಆಶಿಶ್ ನೆಹ್ರಾ ಮಾರ್ಗದರ್ಶನದಲ್ಲಿ, ಗುಜರಾತ್ ಟೈಟಾನ್ಸ್‌ ತಂಡವು 2022ರ ಐಪಿಎಲ್ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ಮೂಲಕ ಐಪಿಎಲ್‌ ಗೆದ್ದ ಭಾರತದ ಮೊದಲ ಕೋಚ್ ಎನ್ನುವ ಹಿರಿಮೆಯೂ ನೆಹ್ರಾ ಪಾಲಾಗಿತ್ತು.
 

57

ಗಾಯದ ಸಮಸ್ಯೆಯಿಂದ ಕೆಲಕಾಲ ರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದ ಆಶಿಶ್ ನೆಹ್ರಾ, 2022ರ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುವ ಮೂಲಕ ಮತ್ತೆ ಟೀಂ ಇಂಡಿಯಾಗೆ ಕಮ್‌ಬ್ಯಾಕ್ ಮಾಡುವಲ್ಲಿ ಹಾರ್ದಿಕ್ ಪಾಂಡ್ಯ ಯಶಸ್ವಿಯಾಗಿದ್ದರು.
 

67

ಹಾರ್ದಿಕ್ ಪಾಂಡ್ಯ, ಸದ್ಯ ಟೀಂ ಇಂಡಿಯಾದ ಭವಿಷ್ಯದ ನಾಯಕ ಎಂದೇ ಬಿಂಬಿಸಲಾಗುತ್ತಿದ್ದು, ಇದೇ ಜನವರಿ 10ರಿಂದ ಶ್ರೀಲಂಕಾ ವಿರುದ್ದ ಆರಂಭವಾಗಲಿರುವ ಮೂರು ಪಂದ್ಯಗಳ ಏಕದಿನ ಸರಣಿಗೆ ಟೀಂ ಇಂಡಿಯಾ ಉಪನಾಯಕರಾಗಿ ನೇಮಕವಾಗಿದ್ದಾರೆ.
 

77

ಆಶಿಶ್‌ ನೆಹ್ರಾ ನನ್ನ ಬದುಕಿನಲ್ಲಿ ದೊಡ್ಡ ಬದಲಾವಣೆಯನ್ನು ತಂದಿದ್ದಾರೆ. ನಾವು ಬೇರೆ ಬೇರೆ ವ್ಯಕ್ತಿತ್ವಗಳನ್ನು ಹೊಂದಿರಬಹುದು, ಆದರೇ ಕ್ರಿಕೆಟ್ ವಿಚಾರದಲ್ಲಿ ಒಂದೇ ರೀತಿಯ ಮನಸ್ಥಿತಿಯನ್ನು ಹೊಂದಿದ್ದೇವೆ. ಐಪಿಎಲ್‌ ವೇಳೆ ಅವರ ಜತೆ ಕೆಲಸ ಮಾಡಿದ್ದು, ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆ ತಂದಿದೆ ಎಂದು ಎನ್‌ಡಿಟಿವಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
 

Read more Photos on
click me!

Recommended Stories