ಬೆಂಗಳೂರು: ಟೀಂ ಇಂಡಿಯಾ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್ ಹಾಗೂ ಆಯೇಷಾ ಮುಖರ್ಜಿ ದಾಂಪತ್ಯ ಜೀವನ ಬಿರುಕುಬಿಟ್ಟಿದ್ದು, ಇದೀಗ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಹೀಗಿರುವಾಗಲೇ ಧವನ್ ತಮ್ಮ ಪುತ್ರನನ್ನು ನೋಡಲು ಇಂಗಿತ ವ್ಯಕ್ತಪಡಿಸಿದ್ದರು. ಆಸ್ಟ್ರೇಲಿಯಾದಲ್ಲಿರುವ ಮಗನನ್ನು ಭಾರತಕ್ಕೆ ಕರೆಸಲು ಪಟಿಯಾಲ ಹೌಸ್ ಕೋರ್ಟ್ ಮೊರೆ ಹೋಗಿದ್ದರು. ಇದೀಗ ಕೌಟುಂಬಿಕ ನ್ಯಾಯಲಯ ಧವನ್‌ಗೆ ಗುಡ್ ನ್ಯೂಸ್ ಕೊಟ್ಟಿದೆ. ಧವನ್ ಹಾಗೂ ಆಯೇಷಾ ಲವ್ ಸ್ಟೋರಿಯ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ ನೋಡಿ
ಟೀಂ ಇಂಡಿಯಾ ಕ್ರಿಕೆಟಿಗ ಶಿಖರ್ ಧವನ್ ಹಾಗೂ ಪತ್ನಿ ಆಯೇಷಾ ಮುಖರ್ಜಿ ನಡುವಿನ ವಿಚ್ಛೇದನಾ ಕಾನೂನು ಪ್ರಕ್ರಿಯೆ ಜಾರಿಯಲ್ಲಿದೆ.
210
ಇಬ್ಬರ ನಡುವೆ ಬಿನ್ನಾಭಿಪ್ರಾಯ ಬಂದು 2020ರಿಂದಲೂ ಪ್ರತ್ಯೇಕವಾಗಿ ವಾಸಿಸುತ್ತಿರುವ ಈ ಇಬ್ಬರು 2021ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
310
ಶಿಖರ್ ಧವನ್ ತಮ್ಮ ಪುತ್ರ ಜ್ವರಾವರ್ ಅವರನ್ನು 2020ರ ಆಗಸ್ಟ್ ಬಳಿಕ ಭೇಟಿ ಮಾಡಿಲ್ಲ. ಹೀಗಾಗಿ ಪುತ್ರನನ್ನು ನೋಡಲು ಧವನ್ ಕೋರ್ಟ್ ಮೊರೆ ಹೋಗಿದ್ದಾರೆ.
410
ಈಗ ಪಟಿಯಾಲ ಹೌಸ್ ಕೋರ್ಟ್‌ನಲ್ಲಿ ಧವನ್ ಪತ್ನಿ ಆಯೇಷಾಗೆ, 9 ವರ್ಷದ ಧವನ್ ಪುತ್ರನನ್ನ ಆತನ ಪೋಷಕರನ್ನು ಭೇಟಿ ಮಾಡಲು ಭಾರತಕ್ಕೆ ಕರೆತರಲು ಸೂಚಿಸಿದೆ
510
ಧವನ್, ಆಸ್ಟ್ರೇಲಿಯಾ ನಿವಾಸಿಯಾಗಿದ್ದ ಬೆಂಗಾಲಿ ಕುಟುಂಬದ ಆಯೇಷಾ ಮುಖರ್ಜಿಯನ್ನು ಹರ್ಭಜನ್ ಸಿಂಗ್ ಮೂಲಕ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದರು ಎನ್ನಲಾಗಿದೆ
610
ಆಯೇಷಾರನ್ನು ನೋಡುತ್ತಿದ್ದಂತೆಯೇ ಗಬ್ಬರ್ ಸಿಂಗ್ ಖ್ಯಾತಿಯ ಧವನ್ ಫಿದಾ ಆಗಿದ್ದಾರೆ. ಬಳಿಕ ಎಫ್‌ಬಿ ಫ್ರೆಂಡ್ ರಿಕ್ವೆಸ್ಟ್ ಕಳಿಸಿ, ಆ ಬಳಿಕ ಪರಿಚಯ, ಸ್ನೇಹವಾಗಿ, ಪ್ರೀತಿಗೆ ತಿರುಗಿದೆ
ಇದು ಶಿಖರ್ ಧವನ್ ಅವರ ಮೊದಲ ಹಾಗೂ ಆಯೇಷಾ ಮುಖರ್ಜಿಯವರ ಎರಡನೇ ವಿವಾಹವೆನಿಸಿತು. ಇದಕ್ಕೂ ಮೊದಲು ಆಯೇಷಾ, ಆಸ್ಟ್ರೇಲಿಯಾದ ಬ್ಯುಸಿನೆಸ್‌ಮನ್ ಅವರನ್ನು ಮದುವೆಯಾಗಿ, ಆ ಬಳಿಕ ವಿಚ್ಛೇದನ ಪಡೆದಿದ್ದರು.
910
ಶಿಖರ್ ಧವನ್ ಮದುವೆಯಾಗುವಾಗ ಆಯೇಷಾ ಮುಖರ್ಜಿ ಎರಡು ಮಕ್ಕಳ ತಾಯಿ ಎಂದು ಗೊತ್ತಿದ್ದು ಮದುವೆಯಾಗಿದ್ದರು. ಹಾಗೂ ಅವರೊಂದಿಗೆ ಸುಂದರವಾದ ದಾಂಪತ್ಯ ಜೀವನವನ್ನು ನಡೆಸುತ್ತಿದ್ದರು.
1010
ಶಿಖರ್ ಧವನ್ ಅವರನ್ನು ಮದುವೆಯಾಗುವ ಮುನ್ನ ಆಯೇಷಾ, ಆಸ್ಟ್ರೇಲಿಯಾ ಮೂಲದ ಬ್ಯುಸಿನೆಸ್‌ಮನ್ ಅವರಿಂದ ಎರಡು ಹೆಣ್ಣು ಮಕ್ಕಳ ತಾಯಿಯಾಗಿದ್ದರು. ಆ ಇಬ್ಬರು ಹೆಣ್ಣು ಮಕ್ಕಳ ಹೆಸರು ರೆಯಾ ಹಾಗೂ ಆಲಿಯಾ. ಇನ್ನು ಶಿಖರ್ ಧವನ್ ಅವರಿಂದ ಆಯೇಷಾ ಜ್ವರೋವರ್ ಎನ್ನುವ ಗಂಡು ಮಗುವನ್ನು ಪಡೆದಿದ್ದಾರೆ.