ಸೌರವ್ ಗಂಗೂಲಿ BCCI ಅಧ್ಯಕ್ಷರಾದ ಬಳಿಕ ತೆಗೆದುಕೊಂಡ 3 ಅತಿದೊಡ್ಡ ತೀರ್ಮಾನಗಳಿವು...!

Published : Oct 12, 2022, 03:25 PM IST

ಬೆಂಗಳೂರು: ಭಾರತ ಕ್ರಿಕೆಟ್ ತಂಡ ಯಶಸ್ವಿ ನಾಯಕರಲ್ಲಿ ಒಬ್ಬರೆನಿಸಿಕೊಂಡಿದ್ದ ಸೌರವ್ ಗಂಗೂಲಿ, ಕ್ರಿಕೆಟ್ ಆಡಳಿತದ ವಿಚಾರದಲ್ಲೂ ತಮ್ಮ ದಿಟ್ಟ ನಿಲುವುಗಳನ್ನು ತಳೆಯುವ ಮೂಲಕ ಆಡಳಿತಾಧಿಕಾರಿಯಾಗಿ ಸೈ ಎನಿಸಿಕೊಂಡಿದ್ದರು. ಬಿಸಿಸಿಐ ಅಧ್ಯಕ್ಷರಾವಧಿಯ ಸಂಧ್ಯಾಕಾಲದಲ್ಲಿರುವ ದಾದಾ ಅವರ ತಮ್ಮ ಅಧಿಕಾರವಧಿಯಲ್ಲಿ ತೆಗೆದುಕೊಂಡ ಮೂರು ದಿಟ್ಟ ತೀರ್ಮಾನಗಳ ಕಂಪ್ಲೀಟ್ ಡೀಟೈಲ್ಸ್‌ ಇಲ್ಲಿದೆ ನೋಡಿ.  

PREV
17
ಸೌರವ್ ಗಂಗೂಲಿ BCCI ಅಧ್ಯಕ್ಷರಾದ ಬಳಿಕ ತೆಗೆದುಕೊಂಡ 3 ಅತಿದೊಡ್ಡ ತೀರ್ಮಾನಗಳಿವು...!

ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ 2019ರಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಇದಾದ ಬಳಿಕ ತಾವೊಬ್ಬ ಒಳ್ಳೆಯ ನಾಯಕ ಮಾತ್ರವಲ್ಲದೇ, ಅತ್ಯುತ್ತಮ ಆಟಗಾರ ಎನ್ನುವುದನ್ನು ಬಿಸಿಸಿಐ ಅಧ್ಯಕ್ಷರಾಗಿ ಸಾಬೀತುಪಡಿಸಿದ್ದಾರೆ.

27

1. ಬಿಸಿಸಿಐ ಅಧ್ಯಕ್ಷರಾದ ಬಳಿಕ ಭಾರತದಲ್ಲಿ ಮೊದಲ ಬಾರಿಗೆ ಹಗಲು-ರಾತ್ರಿ ಪಂದ್ಯ ಆಯೋಜಿಸಿದ ದಾದಾ:
ಜಗತ್ತಿನ ಹಲವು ರಾಷ್ಟ್ರಗಳು ಪಿಂಕ್ ಬಾಲ್ ಟೆಸ್ಟ್ ಪಂದ್ಯವನ್ನು ಆಡಲು ಆರಂಭಿಸಿ ವರ್ಷಗಳೇ ಕಳೆದರು, ಭಾರತದಲ್ಲಿ ಹಗಲು-ರಾತ್ರಿ ಟೆಸ್ಟ್‌ ಪಂದ್ಯಕ್ಕೆ ಒಪ್ಪಿಗೆ ಸಿಕ್ಕಿರಲಿಲ್ಲ.

37

ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಬಳಿಕ, ಭಾರತ ತಂಡವನ್ನು ಪಿಂಕ್ ಬಾಲ್ ಟೆಸ್ಟ್‌ ಪಂದ್ಯವನ್ನಾಡಲು ಮನವೊಲಿಸಿದರು. ಪರಿಣಾಮ 2019ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ, ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನದಲ್ಲಿ ಮೊದಲ ಬಾರಿಗೆ ತವರಿನಲ್ಲಿ ಪಿಂಕ್ ಬಾಲ್ ಟೆಸ್ಟ್‌ ಪಂದ್ಯವನ್ನಾಡಿತು.

47

2. ಕೋವಿಡ್ ಭೀತಿಯ ನಡುವೆಯೇ ಐಪಿಎಲ್ ನಡೆಸಿ ಸೈ ಎನಿಸಿಕೊಂಡ ದಾದಾ  
ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಮರು ವರ್ಷವೇ ಕೋವಿಡ್ ಹೆಮ್ಮಾರಿ ಜಗತ್ತನ್ನೇ ಕಾಡಿತು. ದೃತಿಗೆಡದ ಸೌರವ್ ಗಂಗೂಲಿ ಕೋವಿಡ್ ಭೀತಿಯ ನಡುವೆಯೂ ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿಯನ್ನು ಆಯೋಜಿಸಿ ಕ್ರಿಕೆಟ್‌ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದರು.

57

2020ರ ಸಂಪೂರ್ಣ ಐಪಿಎಲ್ ಟೂರ್ನಿಯನ್ನು ದಾದಾ ಯುಎಇನಲ್ಲಿ ನಡೆಸಿ ಸೈ ಎನಿಸಿಕೊಂಡರೆ, 2021ರ ಐಪಿಎಲ್‌ನ ಅರ್ಧಭಾಗವನ್ನು ಯುಎಇನಲ್ಲಿ ಆಯೋಜಿಸಿ ಯಶಸ್ವಿಯಾದರು. ಇನ್ನು 2022ರ ಐಪಿಎಲ್‌ ಅನ್ನು ಭಾರತದ ಆಯ್ದ ಸ್ಟೇಡಿಯಂನಲ್ಲಿ ಯಾವುದೇ ತೊಂದರೆಯಾಗದಂತೆ ನಡೆಸಿ ಟೂರ್ನಿ ಯಶಸ್ವಿಯಾಗುವಂತೆ ನೋಡಿಕೊಂಡರು.
 

67

“Yeah, absolutely. April, May we’ll have another one [IPL 2021 season]. The UAE was only for the IPL. We will host England in India. We will host the domestic cricket in India. Ranji Trophy, we will create bio-bubble and we will do it,” Ganguly was quoted as saying to India Today.

3. ದೇಶಿ ಕ್ರಿಕೆಟಿಗರ ವೇತನ ಹೆಚ್ಚು ಮಾಡಿದ ಸೌರವ್ ಗಂಗೂಲಿ:
ಭಾರತದಲ್ಲಿ ಅಸಂಖ್ಯಾತ ಪ್ರತಿಭಾವಂತ ಕ್ರಿಕೆಟಿಗರಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ದೇಶಿ ಕ್ರಿಕೆಟ್‌ನ ವಾತಾವರಣ ಉತ್ತಮವಾಗಿರುವುದರಿಂದಲೇ, ಭಾರತ ಇಂದು ವಿಶ್ವದ ಬಲಿಷ್ಠ ತಂಡಗಳಲ್ಲಿ ಒಂದು ಎನಿಸಿದೆ.

77

ದೇಶಿ ಕ್ರಿಕೆಟ್‌ನಲ್ಲಿನ ಆಟಗಾರರ ಪ್ರತಿಭೆ ಪ್ರೋತ್ಸಾಹಿಸಲು, ಬಿಸಿಸಿಐ ಅಧ್ಯಕ್ಷರಾದ ಸೌರವ್ ಗಂಗೂಲಿ, ದೇಶಿ ಕ್ರಿಕೆಟ್ ಆಟಗಾರರ ವೇತನವನ್ನು ಗಣನೀಯವಾಗಿ ಹೆಚ್ಚಿಸಿದರು. 

Read more Photos on
click me!

Recommended Stories