ಭಾರತದ 84,330 ಕೋಟಿ ಆಸ್ತಿ ಒಡತಿಯ ಕಂಪೆನಿ ಜತೆ ಕ್ರಿಕೆಟ್ ಆಸ್ಟ್ರೇಲಿಯಾ ಟೈಯಪ್..!

First Published | Aug 16, 2023, 1:46 PM IST

ಬೆಂಗಳೂರು: 5 ಬಾರಿಯ ಏಕದಿನ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಭಾರತದ ಶ್ರೀಮಂತ ಮಹಿಳಾ ಉದ್ಯಮಿಯ ಕಂಪನಿಯ ಜತೆ ಲಕ್ಷಾಂತರ ಕೋಟಿ ರುಪಾಯಿ ಒಪ್ಪಂದಕ್ಕೆ ಸಹಿ ಹಾಕಿದೆ. ಅಷ್ಟಕ್ಕೂ ಯಾರು ಆ ಮಹಿಳಾ? ಇದರಿಂದ ಆಸ್ಟ್ರೇಲಿಯಾ ತಂಡಕ್ಕೇನು ಲಾಭ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಆಗಸ್ಟ್ 15ರಂದು ಇಡೀ ದೇಶವೇ ಸ್ವಾತಂತ್ರ್ಯ ದಿನಾಚರಣೆಯನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿತ್ತು. ಇದೇ ಸಂದರ್ಭದಲ್ಲೇ ಕ್ರಿಕೆಟ್ ಆಸ್ಟ್ರೇಲಿಯಾ ಜತೆ HCL ಕಂಪನಿಯು ಲಕ್ಷಾಂತರ ಕೋಟಿ ರುಪಾಯಿ ಒಪ್ಪಂದಕ್ಕೆ ಸಹಿ ಹಾಕಿದೆ. ಇದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ.

ಮುಂಬರುವ ದಿನಗಳಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾವು ತನ್ನ ಮುಂದಿನ ಹಂತದ ಡಿಜಿಟಲ್ ಟ್ರಾನ್ಸ್‌ಫರ್ಮೇಷನ್‌(ಡಿಜಿಟಲ್ ರೂಪಾಂತರ)ಗೆ ಮುಂದಾಗಿದ್ದು, HCL ಸಂಸ್ಥೆ ಜತೆಯು 2.01 ಬಿಲಿಯನ್ ಡಾಲರ್ ಮೊತ್ತಕ್ಕೆ ವೆರಿಝೊನ್ ಬ್ಯುಸಿನೆಸ್‌ ಜತೆ ಒಪ್ಪಂದ ಮಾಡಿಕೊಂಡಿದೆ.

Latest Videos


HCL Technologies ಸಂಸ್ಥೆ ಮುಖ್ಯಸ್ಥೆಯಾಗಿರುವ ರೋಷನಿ ನಾಡರ್ ಮಲ್ಹೋತ್ರಾ ಜತೆ ಇದೀಗ ಕ್ರಿಕೆಟ್ ಆಸ್ಟ್ರೇಲಿಯಾ ಒಪ್ಪಂದಕ್ಕೆ ಸಹಿ ಹಾಕಿದೆ. ಭಾರತದಲ್ಲಿ IT ಕಂಪನಿಯ ಮುಖ್ಯಸ್ಥರಾದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ರೋಷನಿ ನಾಡರ್ ಅವರದ್ದು. 

ರೋಷನಿ ನಾಡರ್ ಮಲ್ಹೋತ್ರ ಬೇರ್ಯಾರು ಅಲ್ಲ, ಕೇರಳ ಮೂಲದ ಪ್ರಖ್ಯಾತ ಉದ್ಯಮಿ ಹಾಗೂ HCL ಸಂಸ್ಥೆಯ ಸಂಸ್ಥಾಪಕರಾದ ಬಿಲೇನಿಯರ್ ಬ್ಯುಸಿನೆಸ್‌ಮನ್ ಆಗಿರುವ ಶಿವ್ ನಾಡರ್ ಅವರ ಏಕೈಕ ಪುತ್ರಿಯಾಗಿದ್ದಾರೆ.

ರೋಷನಿ ನಾಡರ್‌ ಲಕ್ಷಾಂತರ ಕೋಟಿ ಮೌಲ್ಯ ಹೊಂದಿರುವ  HCL Technologies ಸಂಸ್ಥೆಯನ್ನು ಮುನ್ನಡೆಸುವುದರ ಜತೆಗೆ ಶಿವ್ ನಾಡರ್‌ ಫೌಂಡೇಷನ್ ಟ್ರಸ್ಟಿಯಾಗಿ ಭಾರತದಾದ್ಯಂತ ಇರುವ ಶಾಲಾ ಕಾಲೇಜುಗಳಲ್ಲಿ ಶಿಕ್ಷಣ ಕುರಿತಂತೆ ಪ್ರೋತ್ಸಾಹ & ಜಾಗೃತಿ ಮೂಡಿಸುತ್ತಾ ಬಂದಿದ್ಧಾರೆ. 

ರೋಷನಿ ನಾಡರ್ ಅವರ ನಿವ್ವಳ ಮೌಲ್ಯ ಸುಮಾರು 84,330 ಕೋಟಿ ರುಪಾಯಿಗಳಾಗಿವೆ. ಈ ಕಾರಣಕ್ಕಾಗಿಯೇ ರೋಷನಿ ನಾಡರ್ ಮಲ್ಹೋತ್ರಾ ಭಾರತದ ಶ್ರೀಮಂತ ಮಹಿಳಾ ಉದ್ಯಮಿ ಎನಿಸಿಕೊಂಡಿದ್ದಾರೆ. ಬಹು ಶತಕೋಟಿ ಡಾಲರ್ ಟೆಕ್ ಸಂಸ್ಥೆಯ ಅಧ್ಯಕ್ಷೆಯಾಗಿರುವುದೇ ಆಕೆಯ ಪ್ರಾಥಮಿಕ ಸಂಪತ್ತಿನ ಮೂಲ ಎನಿಸಿದೆ.

ಹೊಸ ಒಪ್ಪಂದ ಮಾಡಿಕೊಂಡಿರುವ HCL ಸಂಸ್ಥೆಯು, ಕ್ರಿಕೆಟ್ ಆಸ್ಟ್ರೇಲಿಯಾಗೆ ವಿಶ್ವದಾದ್ಯಂತ ಇರುವ ಅಭಿಮಾನಿಗಳಿಗೆ, ಆಟಗಾರರಿಗೆ ಹಾಗೂ ತನ್ನ ಪಾಲುದಾರರಿಗೆ ವಿಭಿನ್ನವಾದ ಡಿಜಿಟಲ್ ಅನುಭವಗಳನ್ನು ಒದಗಿಸಲಿದೆ.

ಇನ್ನು ಈ ನೂತನ ಒಪ್ಪಂದದಿಂದಾಗಿ HCL ಸಂಸ್ಥೆಯು ಕ್ರಿಕೆಟ್ ಆಸ್ಟ್ರೇಲಿಯಾಗೆ ಆಟೋಮೇಷನ್‌, ಅನಾಲೆಟಿಕ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸ್ & ಮಷೀನ್ ಲರ್ನಿಂಗ್ಸ್‌ ಹಾಗೂ DevOps ಮೂಲಕ ಕ್ರಿಕೆಟ್ ಆಸ್ಟ್ರೇಲಿಯಾಗೆ ಲೈವ್ & ಪ್ಲೇಕ್ರಿಕೆಟ್‌ ಅಪ್ಲಿಕೇಶನ್‌ಗಳನ್ನಿ ಒದಗಿಸಲಿದೆ.
 

ಕ್ರಿಕೆಟ್‌ ಆಸ್ಟ್ರೇಲಿಯಾವು HCL ಸಂಸ್ಥೆಯ ಅತ್ಯಂತ ನಂಬಿಗಸ್ಥ ಗ್ರಾಹಕವಾಗಿದೆ. 2019ರಿಂದೀಚೆಗೆ HCL ಸಂಸ್ಥೆಯು ಡಿಜಿಟಲ್ ಟ್ರಾನ್ಸ್‌ಫರ್ಮೇಶನ್‌ ವಿಚಾರದಲ್ಲಿ ಉಭಯ ಸಂಸ್ಥೆಗಳು ಪಾಲುದಾರರಾಗಿದ್ದು, ಈ ಸಂಬಂಧ ಇದೀಗ ಮತ್ತಷ್ಟು ಬಲಗೊಂಡಂತಾಗಿದೆ.

HCL ಸಂಸ್ಥೆಯು ಕ್ರಿಕೆಟ್ ಆಸ್ಟ್ರೇಲಿಯಾಗೆ ಡಿಜಿಟಲ್ ಟ್ರಾನ್ಸ್‌ಫರ್ಮೇಶನ್‌ ಮಾಡುವ ಮೂಲಕ ನೆರವಾಗಲಿದೆ. ಇದು cricket.com.au, the Cricket Australia Live app, and MyCricket(ಈಗ PlayCricket) ಪ್ರಾಡೆಕ್ಟ್‌ಗಳನ್ನು ನಿರ್ವಹಿಸಲಿದೆ.  the Cricket Australia Live app ಆಸ್ಟ್ರೇಲಿಯಾದ ಪ್ರಮುಖ ಕ್ರೀಡಾ ಅಪ್ಲಿಕೇಶನ್ ಆಗಿ ಹೊರಹೊಮ್ಮಲಿದೆ.

HCL ಟೆಕ್ನಾಲಜಿಸ್ ಜತೆಗೆ ವೆರಿಝೋನ್ ಬ್ಯುಸಿನೆಸ್‌ 6 ವರ್ಷಗಳ ಅವಧಿಗೆ ಸುಮಾರು 2.01 ಬಿಲಿಯನ್ ಡಾಲರ್(201 ಕೋಟಿ ರುಪಾಯಿ) ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದೆ. ಈ ಡೀಲ್‌ ವೆರಿಝೋನ್‌ನ ಜಾಗತಿಕ ಕ್ಲೈಂಟ್‌ಗಳಿಗೆ ನಿರ್ವಹಿಸಲಾದ ನೆಟ್‌ವರ್ಕ್‌ ಸೇವೆಗಳನ್ನು ಒದಗಿಸುವುದು ಕೂಡಾ ಒಳಗೊಂಡಿದೆ.

click me!