ಭಾರತ ಇಂಗ್ಲೆಂಡ್ 2ನೇ ಟಿ20, ತಂಡದಲ್ಲಿ ಸೂರ್ಯವಂಶಿಗೆ ಚಾನ್ಸ್ ಕುರಿತು ಮಹತ್ವದ ಅಪ್‌ಡೇಟ್ ಕೊಟ್ಟ ಕೋಚ್

Published : Jul 03, 2026, 10:10 PM IST

ಭಾರತ ಹಾಗೂ ಇಂಗ್ಲೆಂಡ್ ನಡುವಿನ 2ನೇ ಟಿ20 ಪಂದ್ಯ ನಾಳೆ(ಜು.4) ನಡೆಯಲಿದೆ. ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿದ ಟೀಂ ಇಂಡಿಯಾ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್, ವೈಭವ್ ಸೂರ್ಯವಂಶಿ ಚಾನ್ಸ್ ಕುರಿತು ಮಹತ್ವದ ಅಪ್‌ಡೇಟ್ ನೀಡಿದ್ದಾರೆ. 

PREV
16
ಮಾರ್ನೆ ಮಾರ್ಕೆಲ್ ನೀಡಿದ ಅಪ್‌ಡೇಟ್

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಇದೀಗ 2ನೇ ಟಿ20 ಪಂದ್ಯ ನಾಳೆ(ಜುಲೈ 04) ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿದೆ. ಪಂದ್ಯಕ್ಕೂ ಮೊದಲು ಉಭಯ ತಂಡ ಸುದ್ದಿಗೋಷ್ಠಿ ನಡೆಸಿದೆ. ಈ ಪೈಕಿ ಭಾರತದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ನಡೆಸಿದ ಸುದ್ದಿಗೋಷ್ಠಿ ಭಾರಿ ಸದ್ದು ಮಾಡುತ್ತಿದೆ. ಪ್ರಮುಖವಾಗಿ ವೈಭವ್ ಸೂರ್ಯವಂಶಿ ಕಣಕ್ಕಿಳಿಸುವ ಕುರಿತು ಹಲವು ಪ್ರಶ್ನೆಗಳು ಎದುರಾಗಿತ್ತು. ಪ್ರಶ್ನೆಗೆ ಉತ್ತರಿಸುತ್ತಾ ಮಾರ್ನೇ ಮಾರ್ಕೆಲ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.

26
ವೈಭವ್ ಸೂರ್ಯವಂಶಿಗೆ ಸ್ಥಾನ ಇದೆಯಾ

ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳು, ಮಾಜಿ ಕ್ರಿಕೆಟಿಗರು ವೈಭವ್ ಸೂರ್ಯವಂಶಿ ಟೀಂ ಇಂಡಿಯಾ ಪದಾರ್ಪಣೆಗೆ ಕಾಯುತ್ತಿದ್ದಾರೆ. ಆದರೆ ವೈಭವ್ ಸೂರ್ಯವಂಶಿ ನಾಳೆ ನಡೆಯಲಿರುವ 2ನೇ ಟಿ20 ಪಂದ್ಯದಲ್ಲಿ ಕಣಕ್ಕಿಳಿಯುವುದು ಅನುಮಾನವಾಗಿದೆ. ವೈಭವ್ ಸೂರ್ಯವಂಶಿ ಮತ್ತೆ ಬೆಂಚ್ ಕಾಯವುದು ಬಹುತೇಕ ಖಚಿತವಾಗಿದೆ. ಒಂದೆಡೆರು ಪಂದ್ಯಗಳ ಕಳಪೆ ಫಾರ್ಮ್‌ನಿಂದ ಹಿರಿಯರನ್ನು ಕೈಬಿಡುವುದು ಸೂಕ್ತವಲ್ಲ ಎಂದು ಮಾರ್ಕೆಲ್ ಹೇಳಿದ್ದಾರೆ.

36
ಆಟಗಾರರ ಮೇಲೆ ನಂಬಿಕೆ ಇಡುವುದು ನಮ್ಮ ಕರ್ತವ್ಯ

ಟೀಂ ಇಂಡಿಯಾ ಮ್ಯಾನೇಜ್ಮೆಂಟ್ ಅನುಭವಿ ಹಾಗೂ ತಂಡಕ್ಕಾಗಿ ಕೊಡುಗೆ ನೀಡಿದ ಆಟಗಾರರನ್ನು ಬೆಂಬಲಿಸಲಿದೆ. ಸಂಜು ಸ್ಯಾಮ್ಸನ್ ವಿಶ್ವಕಪ್ ಟಿ20 ಗೆಲುವಿನ ರೂವಾರಿ. ಅಭಿಷೇಕ್ ಶರ್ಮಾ ಟಿ20 ನಂಬರ್ 1 ಬ್ಯಾಟರ್ ಆಗಿ ಗುರುತಿಸಿಕೊಂಡಿದ್ದರು. ಕೆಲ ಪಂದ್ಯಗಳ ಕಳಪೆ ಪ್ರದರ್ಶನದಿಂದ ಆಟಗಾರರ ಕೈಬಿಡುವುದು ಸೂಕ್ತವಲ್ಲ. ಆಟಗಾರರ ಮೇಲೆ ನಂಬಿಕೆ ಇಟ್ಟು ಅವರಲ್ಲಿ ಆತ್ಮವಿಶ್ವಾಸ ತುಂಬುದು ನಮ್ಮ ಕರ್ತವ್ಯವಾಗಿ ಎಂದು ಮಾರ್ಕೆಲ್ ಹೇಳಿದ್ದಾರೆ.

46
ವೈಭವ್ ಸೂರ್ಯವಂಶಿ ಅದ್ಭುತ ಆಟಗಾರ

15ರ ಹರೆಯದ ವೈಭವ್ ಸೂರ್ಯವಂಶಿ ಅದ್ಭುತ ಆಟಗಾರ. ವೈಭವ್ ಅವಕಾಶಕ್ಕಾಗಿ ಟೀಂ ಇಂಡಿಯಾ ಬಾಗಿಲು ತಟ್ಟುತ್ತಿದ್ದಾನೆ. ಆತನ ಪಯಣ ರೋಮಾಂಚನಕಾರಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬರುವ ಹೈಪ್ ನೋಡಿ ಯಾರನ್ನು ಕೈಬಿಟ್ಟು ಮತ್ತೊರಬ್ಬನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ ಎಂದು ಮಾರ್ಕೆಲ್ ಹೇಳಿದ್ದಾರೆ. ಈ ಮೂಲಕ ವೈಭವ್ ಸೂರ್ಯವಂಶಿ ಅವತಾಶಕ್ಕಾಗಿ ಕಾಯಬೇಕು ಅನ್ನೋ ಸೂಚನೆಯನ್ನು ನೀಡಿದ್ದಾರೆ.

56
ವೈಭವ್ ಮೆಚ್ಚಿದ ಮಾರ್ನೆ ಮಾರ್ಕೆ

ವೈಭವ್ ಸೂರ್ಯವಂಶಿ ಐರ್ಲೆಂಡ್ ಸರಣಿಯಿಂದ ತಂಡದ ಜೊತೆಗಿದ್ದಾರೆ. ವೈಭವ್ ವಯಸ್ಸು ಕೇವಲ 15. ಆದರೆ ತಂಡದ ಹಿರಿಯ ಆಟಗಾರರು, ಸಿಬ್ಬಂದಿಗಳ ಜೊತೆ ಉತ್ತಮವಾಗಿ ಹೊಂದಿಕೊಂಡಿದ್ದಾರೆ. ನೆಟ್ ಪ್ರಾಕ್ಟೀಸ್ ವೇಳೆ ವೈಭವ್ ಸೂರ್ಯವಂಶಿ ಬ್ಯಾಟಿಂಗ್ ಶೈಲಿಗೆ ನಾವೆಲ್ಲರು ಖುಷಿಪಟ್ಟಿದ್ದೇವೆ. ಹಲವು ಬಾರಿ ಅಚ್ಚರಿಗೆ ಒಳಗಾಗಿದ್ದೇವೆ. ಸೂಕ್ತ ಸಮಯದಲ್ಲಿ ವೈಭವ್ ಸೂರ್ಯವಂಶಿ ಪಾದಾರ್ಪಣೆ ಮಾಡಲಿದ್ದಾರೆ ಎಂದಿದ್ದಾರೆ.

66
ವೈಭವ್ ಅವಕಾಶಕ್ಕಾಗಿ ಮಾಜಿ ಕ್ರಿಕೆಟಿಗರ ಪಟ್ಟು

ವೈಭವ್ ಸೂರ್ಯವಂಶಿಯನ್ನು ಬೆಂಚ್ ಕಾಯಿಸಿದೆ ಅವಕಾಶ ನೀಡಬೇಕು ಎಂದು ಸುನಿಲ್ ಗವಾಸ್ಕರ್ ಸೇರಿದಂತೆ ಮಾಜಿ ಕ್ರಿಕೆಟಿಗರು ಒತ್ತಾಯ ಹಾಕುತ್ತಲೇ ಇದ್ದಾರೆ. ಅವಕಾಶ ನೀಡದ ಕೋಚ್ ಗೌತಮ್ ಗಂಭೀರ್, ನಾಯಕ ಶ್ರೇಯಸ್ ಸೇರಿದಂತೆ ಮ್ಯಾನೇಜ್ಮೆಂಟ್ ವಿರುದ್ದ ಆಕ್ರೋಶಗಳು, ಟೀಕೆಗಳು ವ್ಯಕ್ತವಾಗಿತ್ತು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories