2026ರ ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಕೆನಡಾ ತಂಡ; ಈಗಾಗಲೇ ಅರ್ಹತೆ ಪಡೆದಿರೋ ತಂಡಗಳು ಯಾವುವು?

Published : Jun 23, 2025, 02:18 PM IST

ಆಂಟೇರಿಯೊ(ಕೆನಡಾ): 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ 20 ತಂಡಗಳು ಪಾಲ್ಗೊಳ್ಳುತ್ತಿದ್ದು ಇದೀಗ 13ನೇ ತಂಡವಾಗಿ ಕೆನಡಾ ತಂಡವು ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ

PREV
15

ಮುಂದಿನ ವರ್ಷ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿರುವ ಐಸಿಸಿ ಪುರುಷರ ಟಿ20 ವಿಶ್ವಕಪ್‌ಗೆ ಕೆನಡಾ ತಂಡ ಅರ್ಹತೆ ಗಿಟ್ಟಿಸಿಕೊಂಡಿದೆ.

25

ಈ ಮೂಲಕ ಒಟ್ಟು 13 ತಂಡಗಳು ಟೂರ್ನಿಗೆ ಪ್ರವೇಶ ಪಡೆದಂತಾಗಿದ್ದು, ಇನ್ನು 7 ತಂಡಗಳು ಅರ್ಹತಾ ಸುತ್ತಿನ ಮೂಲಕ ವಿಶ್ವಕಪ್‌ಗೆ ಕಾಲಿಡಲಿವೆ.

35

ಕಳೆದ ವರ್ಷವೂ ಟಿ20 ವಿಶ್ವಕಪ್‌ ಆಡಿದ್ದ ಕೆನಡಾ ಈ ಬಾರಿ ಆಫ್ರಿಕಾ ಅರ್ಹತಾ ಟೂರ್ನಿಯಲ್ಲಿ ಸತತ 5 ಗೆಲುವು ಸಾಧಿಸಿತು. ಕೊನೆ ಪಂದ್ಯದಲ್ಲಿ ಬಹಾಮಾಸ್‌ ವಿರುದ್ಧ ಜಯಗಳಿಸಿ ಟೂರ್ನಿ ಪ್ರವೇಶಿಸಿದೆ.

45

ಈಗಾಗಲೇ ಹಾಲಿ ಚಾಂಪಿಯನ್‌ ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಇಂಗ್ಲೆಂಡ್‌, ದ.ಆಫ್ರಿಕಾ, ಅಮೆರಿಕ, ವೆಸ್ಟ್‌ಇಂಡೀಸ್‌, ಐರ್ಲೆಂಡ್‌, ನ್ಯೂಜಿಲೆಂಡ್‌, ಪಾಕಿಸ್ತಾನ ತಂಡಗಳು ಟೂರ್ನಿಗೆ ಅರ್ಹತೆ ಪಡೆದಿವೆ. ಉಳಿದ 7 ತಂಡಗಳು ವಿವಿಧ ಖಂಡಗಳ ಅರ್ಹತಾ ಸುತ್ತಿನಲ್ಲಿ ಗೆದ್ದು ಟೂರ್ನಿಗೆ ಪ್ರವೇಶಿಸಲಿವೆ.

55

2024ರಲ್ಲಿ ನಡೆದ ಕಳೆದ ಬಾರಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿದ ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

Read more Photos on
click me!

Recommended Stories