ಪಾಕಿಸ್ತಾನಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೆ ಎಂದ ಬಿಗ್ ಬಾಸ್ ಸ್ಪರ್ಧಿ!

First Published | Sep 7, 2020, 5:26 PM IST

ಬಿಗ್ ಬಾಸ್ 11 ನಲ್ಲಿ  ಕಾಣಿಸಿಕೊಂಡಿದ್ದ ಮಾಡೆಲ್‌ ಕಮ್‌ ನಟಿ ಅರ್ಷಿ ಖಾನ್ ಅತ್ಯಂತ ವಿವಾದಾತ್ಮಕ ಸ್ಪರ್ಧಿಗಳಲ್ಲಿ ಒಬ್ಬಳು. ಈಕೆ  ಬೋಲ್ಡ್‌  ಹೇಳಿಕೆಗಳಿಂದಾಗಿ  ಸಖತ್‌ ಫೇಮಸ್‌ ಆಗಿದ್ದಳು. ಒಮ್ಮೆ ತಾನು ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಜೊತೆ ಲೈಂಗಿಕ ಸಂಬಂಧ ಹೊಂದಿದ್ದೇನೆ ಎಂದೂ ಹೇಳಿಕೊಂಡಿದ್ದಾಳೆ.

ಬಿಗ್ ಬಾಸ್ ಸೀಸನ್‌ 11 ನಲ್ಲಿ ಕಾಣಿಸಿಕೊಂಡಿದ್ದಳು ಮಾಡೆಲ್ ಕಮ್‌ ನಟಿ ಅರ್ಷಿ ಖಾನ್.
ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಮೇಲಿನ ನಟಿಯ ಪ್ರೀತಿ ಇಂಟರ್‌ನೆಟ್‌ನ ಸೆನ್ಸೆಷನ್‌ ಆಗಿತ್ತು. 2015 ರಲ್ಲಿ ಹಿಂದೆ ಶಾಹಿದ್ ಅಫ್ರಿದಿ ಜೊತೆಗೆ ಲೈಂಗಿಕ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾಳೆ.
Tap to resize

'ಹೌದು, ನಾನು ಅಫ್ರಿದಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದೇನೆ! ಯಾರೊಂದಿಗಾದರೂ ಮಲಗಲು ನನಗೆ ಭಾರತೀಯ ಮಾಧ್ಯಮಗಳ ಅನುಮತಿ ಬೇಕೇ? ಇದು ನನ್ನ ವೈಯಕ್ತಿಕ ಜೀವನ. ನನಗೆ ಅದು ಪ್ರೀತಿ'ಎಂದು ಟ್ವೀಟ್‌ಗಳು ಮಾಡಿದ್ದಳು ಈ ನಟಿ.
ಇಡೀ ವಿಷಯದ ಬಗ್ಗೆ ಅಫ್ರಿದಿಯನ್ನು ಕೇಳಿದಾಗ, ಅವರು ಅಂತಹ ಕ್ಷುಲ್ಲಕ ವಿಷಯಗಳ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಅಥವಾ ಅಂತಹ 'ಮೂರ್ಖತನಗಳಿಗೆ' ಸಮಯವಿಲ್ಲ ಎಂದು ಹೇಳಿ ಅರ್ಷಿ ಖಾನ್ ಹೇಳಿಕೆಯ ಬಗ್ಗೆ ಮಾತಾನಾಡಲು ನಿರಾಕರಿಸಿದರು.
ಬಿಗ್ ಬಾಸ್ ಮನೆಯಲ್ಲಿ, ನಟಿ ಸಹ-ಸ್ಪರ್ಧಿ ಶಿಲ್ಪಾ ಶಿಂಧೆ ಜೊತೆ ಅಫ್ರಿದಿ ಬಗ್ಗೆ ಮಾತನಾಡುತ್ತಿದ್ದರು, ಮತ್ತು ಅವನನ್ನು 'ಮೆಹಬೂಬ್' (ಪ್ರೇಮಿ) ಎಂದು ಕರೆದಳು.
ಒಂದು ಶಾಕಿಂಗ್‌ ಸಂದರ್ಶನವೊಂದರಲ್ಲಿ ರಾಧೆ ಮಾ ಜೊತೆ ಭಾಗಿಯಾಗಿರುವ ಲೈಂಗಿಕ ಹಗರಣದ ಬಗ್ಗೆ ಮತ್ತು ಪೊಲೀಸ್ ಹೇಗೆ ಸೆಕ್ಸ್‌ ಬಯಸುತ್ತಾರೆ ಎಂಬುದರ ಕುರಿತು ಮಾತನಾಡುತ್ತಾರೆ ಅರ್ಷಿ ಖಾನ್.
ವೀಡಿಯೊದಲ್ಲಿ, "ರಾಧೆ ಮಾ ಲೈಂಗಿಕ ಹಗರಣದಲ್ಲಿ ಭಾಗಿಯಾಗಿದ್ದಾರೆ ಮತ್ತು ನಾನು ಮಾಧ್ಯಮಗಳ ಮುಂದೆ ಅನೇಕ ಬಾರಿ ಹೇಳಿದ್ದೇನೆ. ನಾನು ಕಾರ್ಯಕ್ರಮಕ್ಕಾಗಿ ಪುಣೆಗೆ ಹೋಗಿದ್ದೆ ಮತ್ತು ಬೆಳಿಗ್ಗೆ 12.45 ರ ಸುಮಾರಿಗೆ ನನ್ನ ಕೋಣೆಯಲ್ಲಿದ್ದೆ, ನಾನು ಪಾಕಿಸ್ತಾನಿ ಮುಸ್ಲಿಂ ಆಗಿದ್ದರಿಂದ 10 ಕ್ರೈಮ್‌ ವಿಭಾಗದ ಅಧಿಕಾರಿಗಳು ನನ್ನನ್ನು ಆರೆಸ್ಟ್‌ ಮಾಡಲು ಬಂದರು. ಅವರು ನನ್ನ ಐಡಿ ಪ್ರೂಫ್ ಮತ್ತು ಅಧಿಕೃತ ದಾಖಲೆಗಳನ್ನು ತೋರಿಸಲು ಕೇಳಿದರು. ಹಿರಿಯ ಇನ್ಸ್‌ಪೆಕ್ಟರ್ ಸಂದೀಪ್ ಪಾಟೀಲ್‌ಗೆ ನನ್ನ ಫೋನ್‌ವೊಂದರಲ್ಲಿ ರೆಕಾರ್ಡರ್ ಅನ್ನು ಸ್ವಿಚ್ ಮಾಡಿದ್ದೇನೆ ಎಂಬ ಅಂಶ ತಿಳಿದಿರಲಿಲ್ಲ. ಅವರು ನನ್ನಿಂದ 15 ಲಕ್ಷ ರೂಪಾಯಿ ಜೊತೆಗೆ ಲೈಂಗಿಕ ಬೇಡಿಕೆ ಇಟ್ಟರು' ಎಂದು ವೀಡಿಯೊದಲ್ಲಿ ಹೇಳಿದ್ದಾಳೆ ಬಿಗ್ ಬಾಸ್ ಸೀಸನ್‌ 11 ಸ್ಪರ್ಧಿ.
ಅರ್ಷಿಯ ಕುಟುಂಬ ಅಫ್ಘಾನಿಸ್ತಾನ ಮೂಲದವರು, ನಾಲ್ಕು ವರ್ಷದವಳಿದ್ದಾಗ ಭೋಪಾಲ್‌ಗೆ ವಲಸೆ ಬಂದರು. ತನ್ನ ಅಸಭ್ಯ ಫೋಟೋಗಳು ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಅವರು ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್‌ ಆದಳು. ಅರ್ಷಿ ಹಲವಾರು ನಗ್ನ ಫೋಟೋ ಶೂಟ್‌ಗಳನ್ನು ಹೊಂದಿದ್ದಾರೆ. ಪಾಕಿಸ್ತಾನದ ಕ್ರಿಕೆಟಿಗರ ಚಿತ್ರಗಳನ್ನು ತನ್ನ ಸ್ತನಗಳ ಮೇಲೆ ಅರ್ಶಿ ಪೋಸ್ಟ್ ಮಾಡಿದಾಗ ಮತ್ತು ಪಾಕಿಸ್ತಾನದ ಧ್ವಜವನ್ನು ತನ್ನ ಬಸ್ಟ್ ಮತ್ತು ಲೋಯರ್‌ ಬಾಡಿ ಮೇಲೆ ಪೈಂಟ್‌ ಮಾಡಿಸಿಕೊಂಡು ಫೋಟೋ ಶೂಟ್ ಮಾಡಿದ ನಂತರ ಲೈಮ್‌ ಲೈಟ್‌ಗೆ ಬಂದಳು ಈ ಮಾಡೆಲ್.

Latest Videos

click me!