ಮಿನಿ ಹರಾಜಿನ ಬೆನ್ನಲ್ಲೇ KKR ತಂಡಕ್ಕೆ ಬಿಗ್ ಶಾಕ್! ₹9.2 ಕೋಟಿ ನೀಡಿ ಖರೀದಿಸಿದ ಈ ಸ್ಟಾರ್ ಕ್ರಿಕೆಟಿಗ ಐಪಿಎಲ್ ಆಡೋದೇ ಡೌಟ್!

Published : Dec 18, 2025, 12:30 PM IST

ಬೆಂಗಳೂರು: 2026ರ ಐಪಿಎಲ್ ಮಿನಿ ಹರಾಜಿನಲ್ಲಿ ಮೂರು ಬಾರಿಯ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ ತಂಡವು ಹಲವು ಸ್ಟಾರ್ ಆಟಗಾರರನ್ನು ಖರೀದಿಸಿದೆ. ಆದರೆ ಈ ಪೈಕಿ ಓರ್ವ ಸ್ಟಾರ್ ಕ್ರಿಕೆಟಿಗ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಯಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ. 

PREV
110
ಸ್ಟಾರ್ ಆಟಗಾರರನ್ನು ಖರೀದಿಸಿದ ಕೆಕೆಆರ್!

ಅಬುಧಾಬಿಯಲ್ಲಿ ಡಿಸೆಂಬರ್ 16ರಂದು ನಡೆದ ಐಪಿಎಲ್ ಮಿನಿ ಹರಾಜಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವು ನಿರೀಕ್ಷೆಯಂತೆಯೇ ಹಲವು ಸ್ಟಾರ್ ಆಟಗಾರರನ್ನು ದೊಡ್ಡ ಮೊತ್ತಕ್ಕೆ ಖರೀದಿಸುವಲ್ಲಿ ಯಶಸ್ವಿಯಾಗಿದೆ.

210
ದೊಡ್ಡ ಪರ್ಸ್‌ನೊಂದಿಗೆ ಹರಾಜಿಗೆ ಬಂದಿದ್ದ ಕೆಕೆಆರ್

ಬರೋಬ್ಬರಿ 64.3 ಕೋಟಿ ರುಪಾಯಿ ಪರ್ಸ್‌ಗಳೊಂದಿಗೆ ಹರಾಜಿಗೆ ಆಗಮಿಸಿದ್ದ ಕೆಕೆಆರ್, ಕ್ಯಾಮರೋನ್ ಗ್ರೀನ್‌ಗೆ 25.2 ಕೋಟಿ ಹಾಗೂ ಮಥೀಶ್ ಪತಿರಣಗೆ 18 ಕೋಟಿ ರುಪಾಯಿ ನೀಡಿ ತನ್ನ ತೆಕ್ಕೆಗೆ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.

310
9.2 ಕೋಟಿ ರುಪಾಯಿಗೆ ಮುಸ್ತಾಫಿಜುರ್ ಕೆಕೆಆರ್ ಪಾಲು

ಇದಷ್ಟೇ ಅಲ್ಲದೇ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಸಿ ಕೊನೆಗೆ ಬಾಂಗ್ಲಾದೇಶದ ಅನುಭವಿ ವೇಗಿ ಮುಸ್ತಾಫಿಜುರ್ ರೆಹಮಾನ್ ಅವರಿಗೆ 9.2 ಕೋಟಿ ರುಪಾಯಿಗೆ ಖರೀದಿಸುವಲ್ಲಿ ಕೆಕೆಆರ್ ತಂಡವು ಯಶಸ್ವಿಯಾಯಿತು.

410
ಕೆಕೆಆರ್‌ಗೆ ಬಿಗ್ ಶಾಕ್!

ಆದರೆ ಹರಾಜಿನ ಬೆನ್ನಲ್ಲೇ ಕೆಕೆಆರ್‌ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಬಾಂಗ್ಲಾದೇಶದ ಮುಸ್ತಾಫಿಜುರ್ ರೆಹಮಾನ್ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳನ್ನು ಆಡುವುದು ಅನುಮಾನ ಎಂದು ವರದಿಯಾಗಿದೆ.

510
ಐಪಿಎಲ್‌ನ ಆರಂಭಿಕ ಪಂದ್ಯಗಳಿಗೆ ಮುಸ್ತಫಿಜುರ್ ಅಲಭ್ಯ?

ಇಂಡಿಯಾ ಟುಡೆ ವರದಿಯ ಪ್ರಕಾರ, ಮುಂಬರುವ ಏಪ್ರಿಲ್ 16ರಿಂದ 23ರವರೆಗೆ ಐಪಿಎಲ್ ಟೂರ್ನಿಗೆ ಅಲಭ್ಯರಾಗುವ ಸಾಧ್ಯತೆಯಿದೆ. ಆ ಸಮಯದಲ್ಲಿ ಬಾಂಗ್ಲಾದೇಶ ತಂಡವು ನ್ಯೂಜಿಲೆಂಡ್ ಎದುರು ಏಕದಿನ ಹಾಗೂ ಟಿ20 ಸರಣಿಯನ್ನು ಆಡಲಿದೆ.

610
ಕೆಕೆಆರ್‌ಗೆ ಹಿನ್ನಡೆ ಸಾಧ್ಯತೆ

ಒಂದು ವೇಳೆ ಮುಸ್ತಾಫಿಜುರ್ ರೆಹಮಾನ್ ಐಪಿಎಲ್‌ಗೆ ಅಲಭ್ಯರಾದರೇ, ಕೋಲ್ಕತಾ ನೈಟ್ ರೈಡರ್ಸ್ ಪಾಲಿಗೆ ಕೊಂಚ ಹಿನ್ನಡೆಯಾಗಿ ಪರಿಣಮಿಸುವ ಸಾಧ್ಯತೆಯಿದೆ. ಮುಸ್ತಾಫಿಜುರ್ ರೆಹಮಾನ್ ಡೆತ್ ಓವರ್ ಸ್ಪೆಷಲಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ.

710
ಇತಿಹಾಸ ಬರೆದ ಮುಸ್ತಾಫಿಜುರ್

ಐಪಿಎಲ್‌ ಮಿನಿ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್ 9.2 ಕೋಟಿಗೆ ಹರಾಜಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತಿಹೆಚ್ಚು ಮೊತ್ತಕ್ಕೆ ಬಿಡ್‌ ಆದ ಬಾಂಗ್ಲಾದೇಶಿ ಆಟಗಾರ ಎನ್ನುವ ದಾಖಲೆಗೆ ಪಾತ್ರರಾಗಿದ್ದಾರೆ.

810
ಕೆಕೆಆರ್ ಪರ ಆಡುತ್ತಿರುವ ನಾಲ್ಕನೇ ಬಾಂಗ್ಲಾದೇಶ ಕ್ರಿಕೆಟರ್

ಇದಷ್ಟೇ ಅಲ್ಲದೇ ಐಪಿಎಲ್‌ನಲ್ಲಿ ಕೆಕೆಆರ್ ಪರ ಆಡುತ್ತಿರುವ ನಾಲ್ಕನೇ ಬಾಂಗ್ಲಾದೇಶಿ ಕ್ರಿಕೆಟಿಗ ಎನ್ನುವ ಕೀರ್ತಿಗೂ ಮುಸ್ತಾಫಿಜುರ್ ರೆಹಮಾನ್ ಪಾತ್ರರಾಗಿದ್ದಾರೆ. ಈ ಮೊದಲು ಮೊಶ್ರಾಫೆ ಮೊರ್ತಾಜಾ, ಶಕೀಬ್ ಅಲ್ ಹಸನ್ ಹಾಗೂ ಲಿಟನ್ ದಾಸ್ ಕೆಕೆಆರ್ ತಂಡವನ್ನು ಪ್ರತಿನಿಧಿಸಿದ್ದರು.

910
ಹಲವು ಐಪಿಎಲ್ ತಂಡ ಪ್ರತಿನಿಧಿಸಿರುವ ಬಾಂಗ್ಲಾ ವೇಗಿ

ಮುಸ್ತಾಫಿಜುರ್ ರೆಹಮಾನ್ ಕೆಕೆಆರ್ ತಂಡವನ್ನು ಸೇರುವ ಮುನ್ನ ಐಪಿಎಲ್‌ನಲ್ಲಿ, ರಾಜಸ್ಥಾನ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

1010
60 ಐಪಿಎಲ್ ಮ್ಯಾಚ್ ಆಡಿರುವ ಮುಸ್ತಾಫಿಜುರ್

ಇದುವರೆಗೂ ಒಟ್ಟು 60 ಐಪಿಎಲ್ ಪಂದ್ಯಗಳನ್ನಾಡಿರುವ ಮುಸ್ತಾಫಿಜುರ್ ರೆಹಮಾನ್ ಒಟ್ಟಾರೆ 65 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಅಂದಹಾಗೆ ಈ ಬಾರಿಯ ಮಿನಿ ಹರಾಜಿನಲ್ಲಿ ಹರಾಜಾದ ಏಕೈಕ ಬಾಂಗ್ಲಾದೇಶಿ ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್.

Read more Photos on
click me!

Recommended Stories