IPL 2026 ಟೂರ್ನಿಗೂ ಮುನ್ನ CSK ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್; 14 ಕೋಟಿಯ ಸ್ಟಾರ್ ಆಟಗಾರ ಔಟ್!

Published : Jan 25, 2026, 08:28 AM IST

2026ನೇ ಸಾಲಿನ IPL ಟೂರ್ನಿ ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹೀಗಿರುವಾಗಲೇ ಐದು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಬಿಗ್ ಶಾಕ್ ಎದುರಾಗಿದೆ. ತಂಡದ ಸ್ಟಾರ್ ಆಟಗಾರ ರಣಜಿ ಟ್ರೋಫಿ ಆಡುವ ವೇಳೆ ಗಂಭೀರ ಗಾಯ ಮಾಡಿಕೊಂಡಿದ್ದು, ಅವರು ಐಪಿಎಲ್ ಆಡುವ ಬಗ್ಗೆ ಪ್ರಶ್ನೆಗಳು ಏಳಲಾರಂಭಿಸಿವೆ. 

PREV
16
ಚೆನ್ನೈ ಸೂಪರ್‌ ಕಿಂಗ್ಸ್‌ಗೆ ದೊಡ್ಡ ಆಘಾತ

ಐಪಿಎಲ್ 2026 ಆರಂಭಕ್ಕೆ ಕೆಲವೇ ತಿಂಗಳು ಬಾಕಿ ಇರುವಾಗ, ಐದು ಬಾರಿಯ ಚಾಂಪಿಯನ್ ಸಿಎಸ್‌ಕೆಗೆ ಆಘಾತ ಎದುರಾಗಿದೆ. ಹರಾಜಿನಲ್ಲಿ 14.2 ಕೋಟಿಗೆ ಚೆನ್ನೈ ಸೂಪರ್ ಕಿಂಗ್ಸ್ ಪಾಲಾಗಿದ್ದ ಪ್ರತಿಭಾನ್ವಿತ ಕ್ರಿಕೆಟಿಗ ಪ್ರಶಾಂತ್ ವೀರ್ ಗಂಭೀರ ಗಾಯಗೊಂಡಿದ್ದಾರೆ. ಪ್ರತಿಷ್ಠಿತ ರಣಜಿ ಟ್ರೋಫಿ ಆಡುವಾಗ ಈ ಘಟನೆ ನಡೆದಿದೆ. ಉತ್ತರ ಪ್ರದೇಶದ ಈ ಆಲ್ರೌಂಡರ್ ಗಾಯದಿಂದ ಪಂದ್ಯದ ಮಧ್ಯದಲ್ಲೇ ಹೊರನಡೆದಿದ್ದು, ಇದು ಸಿಎಸ್‌ಕೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

26
ಸಿಎಸ್‌ಕೆ ತಂಡದ ದುಬಾರಿ ಆಟಗಾರ ಪ್ರಶಾಂತ್ ವೀರ್

ಸಿಎಸ್‌ಕೆಯ ದುಬಾರಿ ಆಟಗಾರ ಪ್ರಶಾಂತ್ ವೀರ್, ಲಖನೌದಲ್ಲಿ ಜಾರ್ಖಂಡ್ ವಿರುದ್ಧದ ರಣಜಿ ಪಂದ್ಯದಲ್ಲಿ ಗಾಯಗೊಂಡರು. ಫೀಲ್ಡಿಂಗ್ ಮಾಡುವಾಗ ಅವರ ಭುಜಕ್ಕೆ ಗಾಯವಾಗಿದೆ. ಗಾಯದ ತೀವ್ರತೆಯಿಂದ ಅವರು ಪಂದ್ಯದಿಂದ ಹೊರಗುಳಿಯಬೇಕಾಯಿತು. ಅವರ ಬದಲಿಗೆ ಗಂಭೀರ ಗಾಯದ ಬದಲಿ ನಿಯಮದಡಿ ಸ್ಪಿನ್ನರ್ ಶಿವಂ ಶರ್ಮಾ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.

36
ಪ್ರಶಾಂತ್ ವೀರ್ ಚೇತರಿಕೆಗೆ ಕನಿಷ್ಠ 3 ವಾರಗಳ ಅಗತ್ಯ

ಪ್ರಶಾಂತ್ ವೀರ್ ಚೇತರಿಸಿಕೊಳ್ಳಲು ಕನಿಷ್ಠ ಮೂರು ವಾರ ಬೇಕಾಗಬಹುದು. ಐಪಿಎಲ್ 2026 ಸೀಸನ್ ಮಾರ್ಚ್ 26 ರಂದು ಆರಂಭವಾಗಲಿದೆ. ಟೂರ್ನಿ ಆರಂಭಕ್ಕೆ ಸಮಯವಿರುವುದರಿಂದ ಅವರು ಫಿಟ್ ಆಗುತ್ತಾರೆಂದು ಸಿಎಸ್‌ಕೆ ಫ್ರಾಂಚೈಸಿ ನಿರೀಕ್ಷಿಸುತ್ತಿದೆ. ಒಂದು ವೇಳೆ ಹೆಚ್ಚಿನ ಪ್ರಮಾಣದಲ್ಲಿ ಗಾಯಗೊಂಡರೇ ಐಪಿಎಲ್‌ನ ಆರಂಭಿಕ ಕೆಲ ಪಂದ್ಯಗಳಿಂದಲೂ ಹೊರಗುಳಿಯುವ ಭೀತಿ ಎದುರಿಸುತ್ತಿದ್ದಾರೆ. 14.2 ಕೋಟಿ ರೂ.ಗೆ ಖರೀದಿಯಾದ ಈ ಆಟಗಾರನ ಮೇಲೆ ತಂಡವು ಹೆಚ್ಚಿನ ಭರವಸೆ ಇಟ್ಟಿದೆ. ಆದರೆ, ಮೂರು ವಾರಗಳ ವಿಶ್ರಾಂತಿಯ ನಂತರ ಅವರ ಫಿಟ್‌ನೆಸ್ ಹೇಗಿರುತ್ತದೆ ಎಂಬುದು ಕುತೂಹಲಕಾರಿಯಾಗಿದೆ.

46
ಬಿಸಿಸಿಐ ದೇಶಿ ಕ್ರಿಕೆಟ್‌ನ ಗಂಭೀರ ಗಾಯದ ನಿಯಮ ಬದಲಾವಣೆ

ಈ ಸೀಸನ್‌ನಿಂದ ದೇಶೀಯ ಕ್ರಿಕೆಟ್‌ನಲ್ಲಿ ಗಂಭೀರ ಗಾಯದ ಬದಲಿ ನಿಯಮ ಜಾರಿಯಾಗಿದೆ. ರಣಜಿ ಇತಿಹಾಸದಲ್ಲಿ ಈ ನಿಯಮವನ್ನು ಬಳಸಿರುವುದು ಇದು ಎರಡನೇ ಬಾರಿ. ಈ ಹಿಂದೆ ಬಂಗಾಳದ ಆಟಗಾರನೊಬ್ಬ ಗಾಯಗೊಂಡಾಗ ಇದನ್ನು ಬಳಸಲಾಗಿತ್ತು.

56
ಸಿಕ್ಕ ಅವಕಾಶ ಬಳಸಿಕೊಂಡ ಶಿವಂ ಶರ್ಮಾ

ಪ್ರಶಾಂತ್ ವೀರ್ ಬದಲಿಗೆ ಬಂದ ಶಿವಂ ಶರ್ಮಾ ತಮ್ಮ ಬೌಲಿಂಗ್‌ನಿಂದ ಗಮನ ಸೆಳೆದರು. ಅವರು 18.5 ಓವರ್‌ಗಳಲ್ಲಿ 66 ರನ್ ನೀಡಿ 2 ಪ್ರಮುಖ ವಿಕೆಟ್ ಪಡೆದರು.  

66
ಸಂಕಷ್ಟಕ್ಕೆ ಸಿಲುಕಿದ ಮಧ್ಯಪ್ರದೇಶ

ಜಾರ್ಖಂಡ್ ತನ್ನ ಮೊದಲ ಇನ್ನಿಂಗ್ಸ್ ಅನ್ನು 561/6 ಕ್ಕೆ ಡಿಕ್ಲೇರ್ ಮಾಡಿತು. ನಂತರ ಬ್ಯಾಟಿಂಗ್ ಆರಂಭಿಸಿದ ಉತ್ತರ ಪ್ರದೇಶ, ದಿನದಾಟದ ಅಂತ್ಯಕ್ಕೆ 32 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇನ್ನು ಪ್ರಶಾಂತ್ ವೀರ್ ಅನುಪಸ್ಥಿತಿಯಲ್ಲಿ ಮಧ್ಯಪ್ರದೇಶ ತಂಡವು ಯಾವ ರೀತಿ ಪ್ರದರ್ಶನ ತೋರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories