ಕೊಹ್ಲಿ ಹುಟ್ಟಹಬ್ಬ ದಿನ INDvSA ಪಂದ್ಯ; ಈಡನ್ ಗಾರ್ಡನ್ಸಲ್ಲಿ ಕೇಕ್, 70 ಸಾವಿರ ಮಾಸ್ಕ್, ಸಿಡಿಮದ್ದು ಪ್ರದರ್ಶನ!

Published : Oct 30, 2023, 09:03 PM IST

ನವೆಂಬರ್ 5 ರಂದು ವಿರಾಟ್ ಕೊಹ್ಲಿ 35ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇದೇ ದಿನ ಈಡನ್ ಗಾರ್ಡನ್ಸ್‌ನಲ್ಲಿ ಭಾರತ ಸೌತ್ ಆಫ್ರಿಕಾ ಪಂದ್ಯ ನಡೆಯಲಿದೆ. ಇದೀಗ ಬಂಗಾಳ ಕ್ರಿಕೆಟ್ ಸಂಸ್ಥೆ ಕೊಹ್ಲಿ ಹುಟ್ಟು ಹಬ್ಬ ಅದ್ಧೂರಿಯಾಗಿ ಆಚರಿಸಲು ಸಜ್ಜಾಗಿದೆ.  ಕೊಹ್ಲಿ ಹುಟ್ಟು ಹಬ್ಬದ ದಿನ ಕ್ರೀಡಾಂಗಣಕ್ಕೆ ಆಗಮಿಸುವ ಅಭಿಮಾನಿಗಳಿಗೆ ಸ್ಪೆಷಲ್ ಗಿಫ್ಟ್ ಕೂಡ ಸಿಗಲಿದೆ.

PREV
18
ಕೊಹ್ಲಿ ಹುಟ್ಟಹಬ್ಬ ದಿನ  INDvSA ಪಂದ್ಯ; ಈಡನ್ ಗಾರ್ಡನ್ಸಲ್ಲಿ ಕೇಕ್, 70 ಸಾವಿರ ಮಾಸ್ಕ್, ಸಿಡಿಮದ್ದು ಪ್ರದರ್ಶನ!

ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟ ಮೂಲಕ ಸತತ 6 ಗೆಲುವು ದಾಖಲಿಸಿದೆ. ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿರುವ ಭಾರತ, ಸೆಮಿಫೈನಲ್ ಹಾದಿ ಕೂಡ ಸುಗಮವಾಗಿದೆ.

28

ಟೀಂ ಇಂಡಿಯಾ ಗೆಲುವಿನಲ್ಲಿ ಕೊಹ್ಲಿ ಕೂಡುಗೆ ಕೂಡ ಪ್ರಮುಖವಾಗಿದೆ. ಇದೀಗ ವಿರಾಟ್ ಕೊಹ್ಲಿ ತನ್ನ ಹುಟ್ಟು ಹಬ್ಬದ ದಿನವೇ ಕೋಲ್ಕಾತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಪಂದ್ಯ ಆಡುತ್ತಿದ್ದಾರೆ.

38

ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಪಂದ್ಯ ನವೆಂಬರ್ 5 ರಂದು ಕೋಲ್ಕಾತದಲ್ಲಿ ನಡೆಯಲಿದೆ. ಇದೇ ದಿನ ಕೊಹ್ಲಿ ತನ್ನ 35ನೇ ವರ್ಷದ ಹುಟ್ಟು ಹಬ್ಬ ಆಚರಿಸಲಿದ್ದಾರೆ.

48

ಕೊಹ್ಲಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಬಂಗಾಳ ಕ್ರಿಕೆಟ್ ಸಂಸ್ಥೆ ಮುಂದಾಗಿದೆ. ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ  ಇದಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ.

58

ನವೆಂಬರ್ 5 ರಂದು ಈಡನ್ ಗಾರ್ಡನ್ಸ್ ಆಗಮಿಸುವ ಅಭಿಮಾನಿಗಳಿಗೆ  ಕೊಹ್ಲಿ ಹುಟ್ಟು ಹಬ್ಬದ ವಿಶೇಷ ಕೇಕ್ ವಿತರಿಸಲಾಗುತ್ತದೆ. ಇಷ್ಟೇ ಅಲ್ಲ 70,000 ಕೊಹ್ಲಿ ಮುಖವಾಡಗಳನ್ನು ಹಂಚಲಾಗುತ್ತದೆ.

68

ಇನ್ನು ಕೊಹ್ಲಿ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಸಿಡಿಮದ್ದು ಪ್ರದರ್ಶನ ಕೂಡ ನಡೆಯಲಿದೆ. ಈಗಾಗಲೇ ಕೇಕ್ ಆರ್ಡರ್ ಮಾಡಲಾಗಿದೆ. ಈ ಕೇಕ್ ಕೊಹ್ಲಿಗೆ ಅತ್ಯಂತ ವಿಶೇಷವಾಗಲಿದೆ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ ಹೇಳಿದೆ.

78

ಕೊಹ್ಲಿ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಕ್ರಿಕೆಟ್ ಸಂಸ್ಥೆ ತಯಾರಿ ಮಾಡಿಕೊಂಡಿದೆ. ಇತ್ತ ಕೊಹ್ಲಿ ಸತತ 3ನೇ ಬಾರಿ ಐಸಿಸಿ ಟೂರ್ನಿ ನಡುವೆ ತಮ್ಮ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ.

88

ವಿಶ್ವಕಪ್ ಟೂರ್ನಿಯ 6 ಪಂದ್ಯದಲ್ಲಿ ಕೊಹ್ಲಿ 354 ರನ್ ಸಿಡಿಸಿದ್ದಾರೆ. 1 ಶತಕ ದಾಖಲಿಸಿದ್ದಾರೆ. ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಸೇರಿದಂತೆ ಬಲಿಷ್ಠ ತಂಡವನ್ನು ಮಣಿಸಿರುವ ಭಾರತ ಇದೀಗ ಸೌತ್ ಆಫ್ರಿಕಾ ಸವಾಲಿಗೆ ಸಜ್ಜಾಗಿದೆ.

Read more Photos on
click me!

Recommended Stories