ICC World Cup 2023: ಸೆಮೀಸ್‌ ಲೆಕ್ಕಾಚಾರ ಹೇಗೆ? ಯಾವ 4 ತಂಡಕ್ಕಿದೆ ಸೆಮೀಸ್‌ಗೇರುವ ಚಾನ್ಸ್?

Published : Oct 30, 2023, 03:53 PM IST

ಬೆಂಗಳೂರು(ಅ.30): 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಲೀಗ್ ಹಂತದ ಪಂದ್ಯಗಳು ನಿರ್ಣಾಯಕ ಹಂತ ತಲುಪಿವೆ. ಇಲ್ಲಿಯವರೆಗೆ ಸದ್ಯ 29 ಪಂದ್ಯಗಳು ಮುಕ್ತಾಯವಾಗಿದ್ದು ಯಾವ ತಂಡವೂ ಅಧಿಕೃತವಾಗಿ ಸೆಮೀಸ್ ಪ್ರವೇಶಿಸಿಲ್ಲ ಹಾಗೂ ಅದೇ ರೀತಿ ಯಾವ ತಂಡವು ಅಧಿಕೃತವಾಗಿ ಸೆಮೀಸ್ ರೇಸ್‌ನಿಂದ ಹೊರಬಿದ್ದಿಲ್ಲ. ನಾವಿಂದು ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಪಾಲ್ಗೊಂಡಿರುವ 10 ತಂಡಗಳ ಪೈಕಿ ಯಾವ ತಂಡಕ್ಕೆ ಸೆಮೀಸ್‌ಗೇರುವ ಅವಕಾಶ ಹೆಚ್ಚಿದೆ ಎನ್ನುವುದನ್ನು ನೋಡೋಣ ಬನ್ನಿ

PREV
19
ICC World Cup 2023: ಸೆಮೀಸ್‌ ಲೆಕ್ಕಾಚಾರ ಹೇಗೆ? ಯಾವ 4 ತಂಡಕ್ಕಿದೆ ಸೆಮೀಸ್‌ಗೇರುವ ಚಾನ್ಸ್?

ಎಲ್ಲಾ 10 ತಂಡಗಳು ಇನ್ನೂ ಸೆಮೀಸ್‌ ರೇಸ್‌ನಲ್ಲಿವೆ. ಅಂತಿಮ-4ರಲ್ಲಿ ಭಾರತ ಬಹುತೇಕ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದರೂ, ಅಧಿಕೃತಗೊಂಡಿಲ್ಲ. ಬಾಕಿ ಇರುವ 3 ಪಂದ್ಯಗಳಲ್ಲಿ ಕನಿಷ್ಠ 1ರಲ್ಲಿ ಗೆದ್ದರೆ ಸೆಮೀಸ್‌ ಪ್ರವೇಶ ಅಧಿಕೃತಗೊಳ್ಳಲಿದೆ. 

29

ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ 6 ಪಂದ್ಯಗಳನ್ನು ಗೆದ್ದು 12 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಈ ಮೂಲಕ ಈಗಾಗಲೇ ಸೆಮೀಸ್‌ ರೇಸ್‌ಗೆ ಒಂದು ಕಾಲು ಇಟ್ಟಾಗಿದೆ.
 

39

ಒಂದೊಮ್ಮೆ 3ರಲ್ಲೂ ಸೋತರೂ ನೆಟ್‌ ರನ್‌ರೇಟ್‌ ಆಧಾರದಲ್ಲಿ ಸೆಮೀಸ್‌ಗೇರಬಹುದು. ಭಾರತ ತನ್ನ ಮುಂದಿನ ಮೂರು ಪಂದ್ಯಗಳಲ್ಲಿ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಹಾಗೂ ನೆದರ್‌ಲೆಂಡ್ಸ್ ತಂಡವನ್ನು ಎದುರಿಸಲಿದೆ.
 

49
South Africa

ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು 6 ಪಂದ್ಯಗಳನ್ನಾಡಿ 5 ಗೆಲುವು ಹಾಗೂ ಒಂದು ಸೋಲು ಸಹಿತ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಲ್ಲಿದೆ. ಇನ್ನುಳಿದ  3 ಪಂದ್ಯಗಳ ಪೈಕಿ ಕನಿಷ್ಠ 1 ಅಥವಾ 2 ಗೆಲುವು ಸಾಧಿಸಿದರೆ ಅನಾಯಾಸವಾಗಿ ಸೆಮೀಸ್ ಪ್ರವೇಶಿಸಲಿದೆ.

59

ನ್ಯೂಜಿಲೆಂಡ್‌ ಹಾಗೂ ಆಸ್ಟ್ರೇಲಿಯಾ ತಲಾ 6 ಪಂದ್ಯಗಳನ್ನಾಡಿ 4 ಗೆಲುವು ಎರಡು ಸೋಲು ಸಹಿತ ತಲಾ 8 ಅಂಕ ಹೊಂದಿದ್ದು, ಬಾಕಿ ಇರುವ ಪಂದ್ಯಗಳನ್ನು ಗೆದ್ದರೆ ಸಲೀಸಾಗಿ ಸೆಮೀಸ್‌ಗೇರಲಿವೆ. ಕಿವೀಸ್ ಹಾಗೂ ಆಸೀಸ್ ಸೆಮೀಸ್‌ಗೇರುವ ಸಾಧ್ಯತೆ ದಟ್ಟವಾಗಿದೆ
 

69

ಒಂದು ವೇಳೆ ಶ್ರೀಲಂಕಾ ಕ್ರಿಕೆಟ್ ತಂಡವು ತನ್ನ ಪಾಲಿನ ನಾಲ್ಕೂ ಪಂದ್ಯಗಳನ್ನು ಗೆದ್ದು, ಕಿವೀಸ್‌ ಅಥವಾ ಆಸೀಸ್‌ ಒಂದು ಅಥವಾ ಎರಡರಲ್ಲಿ ಸೋತರೆ ಆಗ ಅಗ್ರ-4ರಲ್ಲಿ ಬದಲಾವಣೆ ಆಗಬಹುದು. 
 

79

ಪಾಕಿಸ್ತಾನ, ಅಫ್ಘಾನಿಸ್ತಾನ, ನೆದರ್‌ಲೆಂಡ್ಸ್‌ ತಲಾ 4 ಅಂಕ ಹೊಂದಿದ್ದು, ಈ ತಂಡಗಳು ಬಾಕಿ ಇರುವ ಎಲ್ಲಾ ಪಂದ್ಯಗಳನ್ನು ಗೆದ್ದು ಹಲವು ಪಂದ್ಯಗಳ ಫಲಿತಾಂಶಗಳು ತಮ್ಮ ಪರ ಬಂದರಷ್ಟೇ ಸೆಮೀಸ್‌ ಪ್ರವೇಶಿಸಬಹುದು. 
 

89

ಬಾಂಗ್ಲಾ, ಇಂಗ್ಲೆಂಡ್‌ಗೆ ಸೆಮೀಸ್‌ ಬಾಗಿಲು ಬಹುತೇಕ ಬಂದ್‌ ಆಗಿದ್ದರೂ, ಗಣಿತೀಯವಾಗಿ ಇನ್ನೂ ಅವಕಾಶವಿರುವಂತೆ ಕಾಣುತ್ತಿದೆಯಷ್ಟೇ. ಆದರೆ ಈ ಎರಡು ತಂಡಗಳು ಸೆಮೀಸ್‌ ಪ್ರವೇಶಿಸಬೇಕಿದ್ದರೇ ಪವಾಡವೇ ನಡೆಯಬೇಕಿದೆ.

99

ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು 6 ಪಂದ್ಯಗಳನ್ನಾಡಿ ಕೇವಲ ಒಂದು ಗೆಲುವು ಸಹಿತ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ಬಾಂಗ್ಲಾದೇಶ ತಂಡವು ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.
 

Read more Photos on
click me!

Recommended Stories