ಐಪಿಎಲ್ ಟೂರ್ನಿಯಲ್ಲಿ ಬಿಸಿಸಿಐ ನಿಯಮ ಮತ್ತಷ್ಟು ಕಠಿಣಗೊಳಿಸಿದೆ. ಇದೀಗ 2ನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯಕ್ಕೂ ಮುನ್ನ ಪ್ಲೇಯರ್ಸ್ ಹಾಗೂ ಅಂಪೈರ್ಸ್ ಸ್ಮಾರ್ಟ್ ಸನ್‌ಗ್ಲಾಸ್ ಧರಿಸುವುದು ಬ್ಯಾನ್ ಮಾಡಿದೆ.
ಐಪಿಎಲ್ 2026ರ ಟೂರ್ನಿಯ ಅಂತಿಮ ಘಟ್ಟದಲ್ಲಿ ಬಿಸಿಸಿಐ ಖಡಕ್ ವಾರ್ನಿಂಗ್ ಜೊತೆ ಆಟಗಾರರ ಕೆಲ ನಿರ್ಬಂಧ ಹೇರಿದೆ. ಬಿಸಿಸಿಐ ಆ್ಯಂಟಿ ಕರಪ್ಶನ್ ಯೂನಿಟ್ ಇದೀಗ ಐಪಿಎಲ್ ಫ್ರಾಂಚೈಸಿ ಹಾಗೂ ಆಟಗಾರರಿಗೆ ಮಹತ್ವದ ಸೂಚನೆ ನೀಡಿದೆ. ಇನ್ನು ಕೇವಲ ಎರಡು ಪಂದ್ಯ ಮಾತ್ರ ಬಾಕಿ ಇದೆ. ಅದಕ್ಕೂ ಮೊದಲೇ ಬಿಸಿಸಿಐ ಆಟಗಾರರು, ತಂಡದ ಸ್ಟಾಫ್ ಸ್ಮಾರ್ಟ್ ಸನ್‌ಗ್ಲಾಸ್ ಧರಿಸುವುದು ಬ್ಯಾನ್ ಮಾಡಿದೆ.
26
ಸ್ಮಾರ್ಟ್ ಸನ್‌ಗ್ಲಾಸ್ ಯಾಕೆ ಬ್ಯಾನ್
ಹಲವು ಕಂಪನಿಗಳು ಪ್ರಮೋಶನ್ ಹೆಸರಿನಲ್ಲಿ ಆಟಗಾರರು, ತಂಡದ ಸಪೋರ್ಟ್ ಸ್ಟಾಫ್‌ಗೆ ಸ್ಮಾರ್ಟ್ ಸನ್‌ಗ್ಲಾಸ್ ಉಚಿತವಾಗಿ ನೀಡುತ್ತಿದೆ. ಈ ಸನ್‌ಗ್ಲಾಸ್‌ನಲ್ಲಿ ಲೈವ್ ಸ್ಟ್ರೀಮಿಂಗ್, ಆಡಿಯೋ, ವಿಡಿಯೋ ಕಾಲ್, ವೈಫೈ ನೆಟ್‌ವರ್ಕ್, ಮೊಬೈಲ್ ಡೇಟಾ ಸೇರಿದಂತೆ ಹಲವು ಸೌಲಭ್ಯಗಳಿವೆ. ಇದರಿಂದ ಮಹತ್ವದ ಮಾಹಿತಿ ಸೋರಿಕೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ಬಿಸಿಸಿಐ ಎಸಿಯು ವಿಭಾಗ ಸ್ಮಾರ್ಟ್ ಸನ್‌ಗ್ಲಾಸ್ ಬ್ಯಾನ್ ಮಾಡಿದೆ.
36
ಎಲ್ಲಾ ಕಮ್ಯೂನಿಕೇಶನ್ ಡಿವೈಸ್ ಬ್ಯಾನ್
ಸ್ಮಾರ್ಟ್ ಸನ್‌ಗ್ಲಾಸ್ ಮಾತ್ರವಲ್ಲ, ಯಾವುದೇ ಕಮ್ಯೂನಿಕೇಶನ್ ಡಿವೈಸ್, ಲೈವ್ ಸ್ಟ್ರೀಮಿಂಗ್, ಟೆಕ್ಸ್ಟ್ ಮೆಸೇಜ್, ಆಡಿಯೋ, ವಿಡಿಯೋ ಕಾಲ್ ಡಿವೈಸ್ ಗಳನ್ನು ಬಳಸುವಂತಿಲ್ಲ ಎಂದು ಇತ್ತೀಚೆಗಷ್ಟೇ ಬಿಸಿಸಿಐ ಹೊಸ ನಿಯಮ ಜಾರಿಗೆ ತಂದಿತ್ತು. ಇತ್ತೀಚೆಗೆ ರಾಜಸ್ಥಾನ ರಾಯಲ್ಸ್ ಆಟಗಾರ ರೋಮಿ ಬಿಂಧರ್ ಮೊಬೈಲ್ ಫೋನ್ ಬಳಸಿದ್ದ ಕಾರಣಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಲಾಗಿತ್ತು.
ಸ್ಮಾರ್ಟ್ ಡಿವೈಸ್‌ಗಳನ್ನು ಪಂದ್ಯ ಆರಂಭಕ್ಕೂ ಮೊದಲೇ ಸೆಕ್ಯೂರಿಟಿ ಬಳಿ ಡೆಪಾಸಿಟ್ ಮಾಡಬೇಕು. ಯಾವುದನ್ನು ತೆಗೆದುಕೊಂಡು ಹೋಗುವಂತಿಲ್ಲ. ಪ್ರತಿಯೊಂದು ನಿಯಮಗಳು ಕಠಿಣವಾಗುತ್ತಿದೆ. ಆಟಗಾರರು, ತಂಡದ ಸಪೋರ್ಟ್ ಸ್ಟಾಪ್ ಸೇರಿದಂತೆ ಎಲ್ಲರಿಗೂ ಅನ್ವಯವಾಗಲಿದೆ.
56
ಹೊಟೆಲ್ ರೂಂಗೆ ಅಪರಿಚಿತರ ಎಂಟ್ರಿ ಬ್ಯಾನ್
ಇತ್ತೀಚೆಗೆ ಐಪಿಎಲ್ ಟೂರ್ನಿಯಲ್ಲಿ ಹನಿ ಟ್ರಾಪ್ ಆತಂಕ ಎದುರಾಗಿತ್ತು. ಹೀಗಾಗಿ ಹೊಟೆಲ್ ರೂಂಗಳಿಗೆ ಅಪರಿಚಿತರ ಎಂಟ್ರಿಯನ್ನು ಬಿಸಿಸಿಐ ಬ್ಯಾನ್ ಮಾಡಿದೆ. ಪಾರ್ಟಿ ಸೇರಿದಂತೆ ಹಲವು ನೆಪದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪರಿಚಿತರಾಗಿರುವ, ತಂಡದ ಹೊರಗಿನವರು ಆಟಗಾರರ ರೂಂ ಎಂಟ್ರಿಕೊಡುವುದು ಬ್ಯಾನ್ ಮಾಡಲಾಗಿದೆ.
66
ಐಪಿಎಲ್ 2026 ನಿಯಮ ಉಲ್ಲಂಘನೆ
2026ರ ಐಪಿಎಲ್ ಟೂರ್ನಿಯಲ್ಲಿ ಕೆಲ ಆಟಗಾರರಿಂದ ನಿಯಮದ ಉಲ್ಲಂಘನೆಯಾಗಿದೆ. ಈ ಕುರಿತು ಬಿಸಿಸಿಐ ಆ್ಯಂಟಿ ಕರಪ್ಶನ್ ಯೂನಿಟ್ ಖಡಕ್ ವಾರ್ನಿಂಗ್ ನೀಡಿದೆ. ಆಟಗಾರರ ಮೇಲೆ ಬಿಸಿಸಿಐ ಹದ್ದಿನ ಕಣ್ಣಿಟ್ಟಿದೆ. ಐಪಿಎಲ್ ಮೇಲಿಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಬಿಸಿಸಿಐ ಫ್ರಾಂಚೈಸಿಗಳಿಗೆ ವಾರ್ನಿಂಗ್ ನೀಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.