ಐಪಿಎಲ್ 2 ಕ್ವಾಲಿಫೈಯರ್ ಮೂಲಕ ಫೈನಲ್ ಪ್ರವೇಶಿಸುವ 2ನೇ ತಂಡ ಯಾವುದು? ಫೈನಲ್ ಪಂದ್ಯದಲ್ಲಿ ಈ ಬಾರಿ ಟ್ರೋಫಿ ಗೆಲ್ಲುವ ತಂಡ ಯಾವುದು? ಈ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಇದರ ನಡುವೆ ಎಕ್ಸ್ ಮಾಲೀಕತ್ವದ ಗ್ರೂಕ್ ಎಐ ನುಡಿದ ಭವಿಷ್ಯ ಏನು?
ಐಪಿಎಲ್ ಟೂರ್ನಿ (IPL 2026) ಅಂತಿಮ ಘಟ್ಟ ತಲುಪುತ್ತಿದೆ. ಇಂದು 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ (Gujarat Titans vs Rajasthan Royals) ಹೋರಾಟ ನಡೆಸಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್ (IPL Final) ಪಂದ್ಯದಲ್ಲಿ ಆರ್‌ಸಿಬಿ (RCB) ವಿರುದ್ಧ ಹೋರಾಟ ನಡೆಸಲಿದೆ. ಫೈನಲ್ ಪ್ರವೇಶಿಸುವ ತಂಡ ಯಾವುದು? ಫೈನಲ್ ಪಂದ್ಯದಲ್ಲಿ ಗೆಲ್ಲುವ ತಂಡ ಯಾವುದು ಅನ್ನೋ ಕುರಿತು ಹಲವರು ಭವಿಷ್ಯ ನುಡಿದಿದ್ದಾರೆ. ಈ ಕುರಿತು ಎಕ್ಸ್‌ನ ಗ್ರೊಕ್ ಎಐ ಸ್ಫೋಟಕ ಭವಿಷ್ಯ ನುಡಿದಿದೆ.
26
ಎಕ್ಸ್ ತಾಣದಲ್ಲಿ ಗ್ರೂಕ್ ಎಐಗೆ ಪ್ರಶ್ನೆ
ಎಕ್ಸ್ ತಾಣದಲ್ಲಿ ಗ್ರೊಕ್ ಎಐಗೆ ಪ್ರಶ್ನೆ ಕೇಳಲಾಗಿದೆ. ರಾಜಸ್ಥಾನ ರಾಯಲ್ಸ್, ಆರ್‌ಸಿಬಿ ಹಾಗೂ ಗುಜರಾತ್ ಟೈಟಾನ್ಸ್ ಈ ಮೂರು ತಂಡದಲ್ಲಿ ಈ ಬಾರಿ ಐಪಿಎಲ್ ಟ್ರೋಫಿ ಗೆಲ್ಲುವ ತಂಡದ ಫೋಟೋವನ್ನು ತೆಗೆದುಬಿಡಿ ಎಂದು ಪ್ರಶ್ನಿಸಲಾಗಿತ್ತು. ಇದಕ್ಕೆ ನೇರವಾಗಿ ಗ್ರೂಕ್ ಎಐ ಆರ್‌ಸಿಬಿ ಫೋಟೋ ರಿಮೂವ್ ಮಾಡಿ, ಈ ಬಾರಿ ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದಿದೆ. ಜೊತೆಗೆ ಕಾರಣನ್ನು ಹೇಳಿದೆ.
36
ಆರ್‌ಸಿಬಿ ಗೆಲುವಿಗೆ ಕಾರಣ ಹೇಳಿದ ಗ್ರೂಕ್ ಎಐ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ 2026 ಟ್ರೋಫಿ ಗೆಲ್ಲಲಿದೆ. ಬಲಿಷ್ಠ ತಂಡ, ಅನುಭವ, ಆರ್‌ಸಿಬಿ ತಂಡದ ಎನರ್ಜಿ, ರಾಜಸ್ಥಾನ ಹಾಗೂ ಗುಜರಾತ್ ತಂಡ ಅಪಾಯಕಾರಿಯಾಗಿದೆ. ಆದರೆ ಈ ಬಾರಿ ಆರ್‌ಸಿಬಿ ತಂಡಕ್ಕೆ ಮ್ಯಾಚ್ ಮಾಡಲು ಸಾಧ್ಯವಿಲ್ಲ. ಆರ್‌ಸಿಬಿ ಟ್ರೋಫಿ ಗೆಲ್ಲಲಿದೆ ಎಂದಿದೆ.
ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭದಿಂದ ಇಲ್ಲಿವರೆಗೂ ಆರ್‌ಸಿಬಿ ಗೆಲುವಿನ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ. ಇಡೀ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡಿದೆ. ತಂಡ ಬ್ಯಾಲೆನ್ಸಿಂಗ್ ಆಗಿದ್ದು, ಪ್ರತಿಯೊಬ್ಬರು ಕೊಡುಗೆ ನೀಡುತ್ತಿದ್ದಾರೆ. ಒಬ್ಬರನ್ನು ತಂಡ ನೆಚ್ಚಿಕೊಂಡಿಲ್ಲ.
56
ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಕುತೂಹಲ
ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದೆ. ಎರಡೂ ಬಲಿಷ್ಠ ತಂಡಗಳು. ಒಂದೆಡೆ ಗಿಲ್, ಬಟ್ಲರ್, ಸಾಯಿ ಸುದರ್ಶನ್ ಇದ್ದರೆ, ಮತ್ತೊಂದೆಡೆ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್, ಯಶಸ್ವಿ ಜೈಸ್ವಾಲ್, ರಿಯಾನ್ ಪರಾಗ್ ಅಬ್ಬರ ಇದೆ. ಹೀಗಾಗಿ ಇಂದು ಅತ್ಯಂತ ರೋಚಕ ಹೋರಾಟ ನಡೆಯಲಿದೆ.
66
ಮೇ.31ಕ್ಕೆ ಫೈನಲ್
ಮೇ.31ರಂದು ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್ ಫೈನಲ್ ಪಂದ್ಯ ನಡೆಯಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಬಗ್ಗು ಬಡಿದ ಆರ್‌ಸಿಬಿ ನೇರವಾಗಿ ಫೈನಲ್ ಪ್ರವೇಶಿಸಿದೆ. ಈಗಾಗಲೇ ಆರ್‌ಸಿಬಿ ಅಭಿಮಾನಿಗಳು ಅಹಮ್ಮದಾಬಾದ್‌ನತ್ತ ಪ್ರಯಾಣ ಬೆಳೆಸಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.