ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ IPL 2021; ದುಬೈನಲ್ಲಿ ಆಯೋಜಿಸಲು BCCI ಪ್ಲಾನ್!

First Published | May 23, 2021, 2:35 PM IST

ಕೊರೋನಾ ವೈರಸ್ ಕಾರಣ ಸ್ಥಗಿತಗೊಂಡಿರುವ ಐಪಿಎಲ್ 2021 ಟೂರ್ನಿಯನ್ನು ಸ್ಥಗಿತಗೊಳಿಸಲು ಬಿಸಿಸಿಐ ಪ್ಲಾನ್ ಮಾಡಿದೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಹಾಗೂ ಲಂಕಾ ವಿರುದ್ಧದ ನಿಗದಿತ ಓವರ್ ಸರಣಿ ಬಳಿಕ ಐಪಿಎಲ್ ಟೂರ್ನಿಗೆ ಪ್ಲಾನ್ ಸಿದ್ಧಗೊಂಡಿದೆ. ಸದ್ಯ ಭಾರತದ ಪರಿಸ್ಥಿತಿ ಸುಧಾರಿಸುವ ಲಕ್ಷಣವಿಲ್ಲ. ಹೀಗಾಗಿ ದುಬೈನಲ್ಲಿ ಟೂರ್ನಿ ಆಯೋಜನೆಗೊಳ್ಳಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಐಪಿಎಲ್ ಅಭಿಮಾನಿಗಳಿಗೆ ಗುಡ್‌ನ್ಯೂಸ್ ಇದೆ. ಸ್ಥಗಿತಗೊಂಡಿರುವ ಐಪಿಎಲ್ 2021 ಟೂರ್ನಿ ಮತ್ತೆ ಆಯೋಜಿಸಲು ಬಿಸಿಸಿಐ ಪ್ಲಾನ್ ಮಾಡಿದೆ. ಆದರೆ ಭಾರತದಲ್ಲಿ ಕೊರೋನಾ ಕಡಿಮೆಯಾಗದ ಕಾರಣ ದುಬೈನಲ್ಲಿ ಆಯೋಜಿಸಲು ಪ್ಲಾನ್ ಮಾಡಿದೆ.
undefined
ಸೆಪ್ಟೆಂಬರ್ -ಅಕ್ಟೋಬರ್ ತಿಂಗಳಲ್ಲಿ ದುಬೈನಲ್ಲಿ ಐಪಿಎಲ್ ಟೂರ್ನಿ ಮುಂದುವರಿಸಲು ಬಿಸಿಸಿಐ ಲೆಕ್ಕಾಚಾರ ಹಾಕಿಕೊಂಡಿದೆ. ಎಲ್ಲವೂ ಅಂಂದುಕೊಂಡಂತೆ ನಡೆದರೆ ಬಾಕಿ ಉಳಿದಿರುವ ಐಪಿಎಲ್ ಟೂರ್ನಿಗೆ UAE ಆತಿಥ್ಯ ವಹಿಸಲಿದೆ.
undefined

Latest Videos


14 ನೇ ಆವೃತ್ತಿ ಐಪಿಎಲ್ ಟೂರ್ನಿಯ 31 ಲೀಗ್ ಪಂದ್ಯಗಳು ಬಾಕಿ ಇವೆ. ಈ ಪಂದ್ಯಗಳನ್ನು ಬಿಸಿಸಿಐ ಬಳಿ ಇರುವ ಕ್ರಿಕೆಟ್ ವಿಂಡೋ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಲ್ಲಿ ಆಯೋಜಿಸಲು ತೀರ್ಮಾನಿಸಿದೆ.
undefined
ಭಾರತ ಹಾಗೂ ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಪಟೌಡಿ ಟೆಸ್ಟ್ ಸರಣಿ ಆಗಸ್ಟ್ 4 ರಿಂದ ಆರಂಭಗೊಳ್ಳಲಿದೆ. ಈ ವೇಳಾಪಟ್ಟಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿದೆ. ಈ ಸರಣಿ ಮುಗಿದ ಬಳಿಕ ಐಪಿಎಲ್ ಉಳಿದ ಪಂಂದ್ಯ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.
undefined
ಮೇ. 29 ರಂದು ಬಿಸಿಸಿಐ ಸಾಮಾನ್ಯ ಸಭೆ ನಡೆಯಲಿದೆ. ಈ ಸಭೆಯಲ್ಲಿ ಐಪಿಎಲ್ ಟೂರ್ನಿ ಭವಿಷ್ಯ ನಿರ್ಧಾರವಾಗಲಿದೆ. ಐಪಿಎಲ್ ಟೂರ್ನಿ ಪೂರ್ತಿಗೊಳಿಸಿ ನಷ್ಟದ ಹೊರೆ ಕಡಿಮೆ ಮಾಡಲು ಬಿಸಿಸಿಐ ಮುಂದಾಗಿದೆ.
undefined
ಕ್ರಿಕೆಟಿಗರಿಗೆ ಕಳೆದೊಂದು ವರ್ಷದಿಂದ ಸರಿಯಾಗಿ ಸರಣಿ, ದೇಶಿ ಕ್ರಿಕೆಟ್ ಇಲ್ಲದೆ ಕರಿಯರ್ ಹಾಳಾಗುತ್ತಿದೆ. ಹೀಗಾಗಿ ಐಪಿಎಲ್ ಟೂರ್ನಿ ಯುವ ಆಟಗಾರರಿಗೂ ವೇದಿಕೆಯಾಗಲಿದೆ. ಈ ಎಲ್ಲಾ ದೃಷ್ಟಿಕೋನದಿಂದ ಬಿಸಿಸಿಐ ಐಪಿಎಲ್ ಟೂರ್ನಿ ಆಯೋಜನೆಗೆ ಮುಂದಾಗಿದೆ.
undefined
2020ರ ಐಪಿಎಲ್ ಟೂರ್ನಿಯನ್ನು ದುಬೈನಲ್ಲಿ ಆಯೋಜಿಸಲಾಗಿತ್ತು. ಇದೇ ರೀತಿ 2021ರ 14ನೇ ಆವೃತ್ತಿ ಐಪಿಎಲ್ ಟೂರ್ನಿಯನ್ನು ದುಬೈನಲ್ಲೇ ಆಯೋಜಿಸಲು ಬಿಸಿಸಿಐ ಉತ್ಸುಕತೆ ತೋರಿದೆ. ಕಟ್ಟು ನಿಟ್ಟಿನ ಬಯೋಬಬಲ್ ಸರ್ಕಲ್ ಮೂಲಕ ಕಳೆದ ಬಾರಿ ಯಶಸ್ವಿಯಾಗಿ ಟೂರ್ನಿ ಆಯೋಜಿಸಲಾಗಿತ್ತು.
undefined
click me!