1. ಸಚಿನ್ ತೆಂಡುಲ್ಕರ್: 870 ಕೋಟಿ ರುಪಾಯಿ
ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ್ದರೂ ಸಹಾ ಇಂದಿಗೂ ಸಂಪಾದನೆಯಲ್ಲಿ ತೆಂಡುಲ್ಕರ್ ಮಾಸ್ಟರ್. ಫಿಲಿಪ್ಸ್, ಬ್ರಿಟಾನಿಯಾ, ಬಿಎಂಡಬ್ಲ್ಯೂ, ಪೆಪ್ಸಿ, ಲ್ಯೂಮಿನೋಸ್, ಅಡಿಡಾಸ್, ಕೆನನ್, ಕ್ಯಾಸ್ಟ್ರೋಲ್ ಸೇರಿದಂತೆ ಹಲವು ಅಂತಾರಾಷ್ಟ್ರೀಯ ಕಂಪನಿಗಳ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಸಚಿನ್ ಈ ವರ್ಷದ ಸಂಪಾದನೆ ಬರೋಬ್ಬರಿ 870 ಕೋಟಿ ರುಪಾಯಿಗಳು.
2. ಮಹೇಂದ್ರ ಸಿಂಗ್ ಧೋನಿ: 840 ಕೋಟಿ ರುಪಾಯಿ
ಕ್ಯಾಪ್ಟನ್ ಕೂಲ್ ಖ್ಯಾತಿಯ ಮಹೇಂದ್ರ ಸಿಂಗ್ ಧೋನಿ 3 ಐಸಿಸಿ ಟ್ರೋಫಿ ಗೆದ್ದುಕೊಟ್ಟ ಏಕೈಕ ನಾಯಕ ಎನಿಸಿಕೊಂಡಿದ್ದಾರೆ. ಮಹಿ ರಿಬಾಕ್, ಟಿವಿಎಸ್ ಮೋಟರ್ಸ್, ಸೋನಿ ಬ್ರಾವಿಯಾ ಸೇರಿದಂತೆ ಹಲವು ಕಂಪನಿಗಳ ರಾಯಭಾರಿಯಾಗಿದ್ದು, 2021ರಲ್ಲೇ ಧೋನಿ ಸಂಪಾದನೆ ಬರೋಬ್ಬರಿ 840 ಕೋಟಿ ರುಪಾಯಿಗಳು.
3. ವಿರಾಟ್ ಕೊಹ್ಲಿ: 696 ಕೋಟಿ ರುಪಾಯಿ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಹಾಲಿ ಕ್ರಿಕೆಟಿಗ. ವಿರಾಟ್ ಕೊಹ್ಲಿಯ ಬ್ರ್ಯಾಂಡ್ ವ್ಯಾಲ್ಯೂ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತಿದೆ. ವಿರಾಟ್ ಕೊಹ್ಲಿ ಖ್ಯಾತ ಕ್ರೀಡಾ ಉತ್ಫನ್ನ ತಯಾರಿಕಾ ಕಂಪನಿಯಾದ ಪೂಮಾ, ಎಂ ಅರ್ ಎಫ್, ಕೋಲ್‌ಗೇಟ್, ಎಂಪಿಎಲ್ ಹೀಗೆ ಹಲವು ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದು, ಟೀಂ ಇಂಡಿಯಾ ನಾಯಕನ ಈ ವರ್ಷದ ಒಟ್ಟು ಸಂಪಾದನೆ ಬರೋಬ್ಬರಿ 696 ಕೋಟಿ ರುಪಾಯಿಗಳು
4. ರಿಕಿ ಪಾಂಟಿಂಗ್: 492 ಕೋಟಿ ರುಪಾಯಿ
ಆಸ್ಟ್ರೇಲಿಯಾ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕನೆಂದರೆ ಅದು ರಿಕಿ ಪಾಂಟಿಂಗ್. ಆಸ್ಟ್ರೇಲಿಯಾ ತಂಡಕ್ಕೆ ಸತತ 2 ಏಕದಿನ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ. ಕ್ರಿಕೆಟಿಗನಾಗಿ ಮಾತ್ರವಲ್ಲದೇ ವೀಕ್ಷಕ ವಿವರಣೆಗಾರನಾಗಿ ಹಾಗೂ ಕೋಚ್ ಆಗಿಯೂ ಪಂಟರ್ ಸಾಕಷ್ಟು ಆದಾಯ ಗಳಿಸುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ಆಗಿರುವ ಪಾಂಟಿಂಗ್ 2021ನೇ ಸಾಲಿನ ಸಂಪಾದನೆ ಬರೋಬ್ಬರಿ 492 ಕೋಟಿ ರುಪಾಯಿ.
5. ಬ್ರಿಯಾನ್ ಲಾರಾ: 454 ಕೋಟಿ ರುಪಾಯಿ
ಪ್ರಿನ್ಸ್ ಆಫ್ ಫೋರ್ಟ್ ಆಫ್ ಸ್ಪೇನ್ ಖ್ಯಾತಿಯ ವಿಂಡೀಸ್ ದಿಗ್ಗಜ ಕ್ರಿಕೆಟಿಗ ಬ್ರಿಯಾನ್ ಲಾರಾ ಸಂಪಾದನೆ ಕೂಡಾ ಕಮ್ಮಿಯೇನಿಲ್ಲ. 1990ರಿಂದ 2007ರ ಅವಧಿಯಲ್ಲಿ ಲಾರ ವೆಸ್ಟ್ ಇಂಡೀಸ್ ಪರ ಹಲವಾರು ಸ್ಮರಣೀಯ ಇನಿಂಗ್ಸ್‌ಗಳನ್ನು ಆಡಿದ್ದಾರೆ ಹಾಗೆಯೇ ಸಾಕಷ್ಟು ಸಂಪಾದನೆಯನ್ನು ಮಾಡಿದ್ದಾರೆ. ಕ್ರಿಕೆಟ್ ಕಾಮೆಂಟರಿ ಜತೆಗೆ ಗಾಲ್ಫ್‌ನಲ್ಲಿಯೂ ಲಾರಾ ಸಾಕಷ್ಟು ಹಣ ಸಂಪಾದನೆ ಮಾಡುತ್ತಾರೆ. ಸಚಿನ್ ಅವರಂತೆಯೇ ಲಾರಾ ಕೂಡಾ ಎಂ ಆರ್ ಎಫ್ ಜತೆ ದೀರ್ಘಕಾಲದ ನಂಟು ಹೊಂದಿದ್ದರು.