ಟೀಂ ಇಂಡಿಯಾ ಸ್ಟೈಲೀಷ್ ಕ್ರಿಕೆಟಿಗ ಶುಭ್‌ಮನ್ ಗಿಲ್, ಈಗಾಗಲೇ ಹಲವು ಯುವತಿಯರ ಪಾಲಿನ ಡ್ರೀಮ್ ಬಾಯ್. ಕ್ರಿಕೆಟ್ ಆಟದಲ್ಲಿ ಮಾತ್ರವಲ್ಲದೇ ಮೈದಾನದಾಚೆಗೆ ತಮ್ಮ ಔಟ್‌ಲುಕ್ ಮೂಲಕವೂ ಮಿಂಚುತ್ತಿದ್ದಾರೆ.
ನಾವಿಂದು ಪ್ರತಿಭಾನ್ವಿತ ಯುವ ಕ್ರಿಕೆಟಿಗ ಶುಭ್‌ಮನ್ ಗಿಲ್ ಅವರ ಐಶಾರಾಮಿ ಬಂಗಲೆ ಹಾಗೂ ಆ ಬಂಗಲೆಯ ವಿಶೇಷತೆಗಳೇನು ಎನ್ನುವುದನ್ನು ಹಲವು ಫೋಟೋಗಳ ಮೂಲಕ ನೋಡೋಣ ಬನ್ನಿ.
ಗಿಲ್ ನೆಟ್ ವರ್ತ್:
ಕಳೆದೆರಡು ವರ್ಷಗಳಿಂದ ಟೀಂ ಇಂಡಿಯಾ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿರುವ ಶುಭ್‌ಮನ್ ಗಿಲ್ ಅವರ ನೆಟ್ ವರ್ತ್ ಬರೋಬ್ಬರಿ 32 ಕೋಟಿ ರುಪಾಯಿಗಳು. ಕ್ರಿಕೆಟ್ & ಜಾಹಿರಾತು ಮೂಲಕವೇ ಗಿಲ್ ಭರ್ಜರಿ ಸಂಪಾದನೆ ಮಾಡುತ್ತಿದ್ದಾರೆ.
ಗಿಲ್ ವಾರ್ಷಿಕ ಆದಾಯ:
ಬಲಗೈ ಬ್ಯಾಟರ್ ಶುಭ್‌ಮನ್ ಗಿಲ್ ಪ್ರತಿ ವರ್ಷ ಐಪಿಎಲ್ ಟೂರ್ನಿಯಿಂದ 8 ಕೋಟಿ ರುಪಾಯಿಗಳನ್ನು ಜೇಬಿಗಿಳಿಸಿಕೊಳ್ಳುತ್ತಾರೆ. ಇನ್ನು ಬಿಸಿಸಿಐ ಸೆಂಟ್ರಲ್ ಕಾಂಟ್ರ್ಯಾಕ್ಟ್‌ನಿಂದ 3 ಕೋಟಿ ರುಪಾಯಿ ಗಳಿಸುತ್ತಾರೆ. ಇನ್ನು ಮ್ಯಾಚ್ ಫೀ ಹಾಗೂ ಬ್ರ್ಯಾಂಡ್ ಪ್ರಮೋಷನ್ ಮೂಲಕವೂ ಕೋಟ್ಯಾಂತರ ರುಪಾಯಿಗಳನ್ನು ಗಿಲ್ ಗಳಿಸುತ್ತಾರೆ.
ಗಿಲ್ ಐಶಾರಾಮಿ ಬಂಗಲೆ:
ಶುಭ್‌ಮನ್ ಗಿಲ್ ಪಂಜಾಬ್‌ನಲ್ಲಿ ವಾಸವಿರುವ ಐಶಾರಾಮಿ ಬಂಗಲೆಯಲ್ಲಿ ಸಕಲ ಸೌಕರ್ಯಗಳನ್ನು ಒಳಗೊಂಡಿದೆ. ಮನೆಯಲ್ಲಿ ರಿಲ್ಯಾಕ್ಸ್ ಮಾಡಲು ಹಾಗೂ ಎಂಟರ್‌ಟೈನ್‌ಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಈ ಬಂಗಲೆ ಒಳಗೊಂಡಿದೆ.
ಶುಭ್‌ಮನ್ ಗಿಲ್ ಅವರ ಈ ಐಶಾರಾಮಿ ಬಂಗಲೆಯ ಸುತ್ತಲೂ ವಿಶಾಲವಾದ ಹುಲ್ಲಿನ ಹಾಸು ಹೊಂದಿದೆ. ಇದು ಗಿಲ್ ಮನೆಯ ಹೊರಗೆ ನೈಸರ್ಗಿಕ ಸೊಬಗು ಹೆಚ್ಚಿಸುವಂತೆ ಮಾಡಿದೆ.
ಡೈನಿಂಗ್ ಏರಿಯಾ:
ಶುಭ್‌ಮನ್ ಗಿಲ್ ಅವರ ಬಂಗಲೆಯಲ್ಲಿರುವ ಡೈನಿಂಗ್ ಏರಿಯಾ ಕೂಡಾ ಸಾಕಷ್ಟು ವಿಶಾಲವಾದ ಪ್ರದೇಶವನ್ನು ಹೊಂದಿದೆ. ಐಶಾರಾಮಿ ಇಂಟೀರಿಯರ್ ಅನ್ನು ಒಳಗೊಂಡಿದ್ದು, ಬಂಗಲೆಯ ಮೆರಗನ್ನು ಹೆಚ್ಚಿಸುವಂತಿದೆ.
ಶುಭ್‌ಮನ್ ಗಿಲ್ ಹೆಸರು ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಜತೆ ಥಳುಕು ಹಾಕಿಕೊಂಡಿತ್ತಾದರೂ ಇದುವರೆಗೂ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ