ಅಥಿಯಾ ಶೆಟ್ಟಿ- ಸಾರಾ ತೆಂಡುಲ್ಕರ್ : ಕ್ರಿಕೆಟ್ ಸ್ಟಾರ್ಸ್‌ನ ಗರ್ಲ್‌ಫ್ರೆಂಡ್ಸ್‌!

First Published | Sep 23, 2021, 4:55 PM IST

ಐಪಿಎಲ್‌ನ  ಕೆಲವು ಆಟಗಾರರು ತಮ್ಮ ಆಟದಿಂದ ಎಲ್ಲರ ಗಮನ ಸೆಳೆಯುವುದರ ಜೊತೆಗೆ ತಮ್ಮ ವೈಯಕ್ತಿಕ ಜೀವನದ ಬಗ್ಗೆಯೂ ಸುದ್ದಿ ಮಾಡುತ್ತಾರೆ. ವೈಯಕ್ತಿಕ ಜೀವನದಲ್ಲಿ ಆಟಗಾರ ಹೇಗೆ? ಅವನು ಯಾರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರಾ? ಅವರ ಗರ್ಲ್‌ಫ್ರೆಂಡ್‌ ಯಾರು? ಎಂದು ತಮ್ಮ ನೆಚ್ಚಿನ ಕ್ರಿಕೆಟರ್ಸ್‌ನ  ಪರ್ಸನಲ್‌  ವಿಷಯಗಳನ್ನು  ಅಭಿಮಾನಿಗಳು   ತಿಳಿದುಕೊಳ್ಳಲು ಬಯಸುತ್ತಾರೆ. ಅಂತಹ   ಐಪಿಎಲ್ ಸ್ಟಾರ್ಸ್‌ನ ರೂಮರ್ಡ್‌ ಗರ್ಲ್‌ಫ್ರೆಂಡ್‌ ಇಲ್ಲಿದ್ದಾರೆ.

ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್: ಟೀಂ ಇಂಡಿಯಾ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಓಪನರ್ ಶುಭಮನ್ ಗಿಲ್ ಮತ್ತು ಸಚಿನ್ ತೆಂಡುಲ್ಕರ್ ಮಗಳು ಸಾರಾ ತೆಂಡುಲ್ಕರ್ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಶುಭ್‌ಮನ್ ಮತ್ತು ಸಾರಾ  ಒಂದೇ ಕ್ಯಾಪ್ಷನ್‌ ಜೊತೆ  ತಮ್ಮ ಫೋಟೋವನ್ನು ಹಂಚಿಕೊಂಡ ಕ್ಷಣದಿಂದ ಈ  ಸಂಬಂಧದ ವದಂತಿಗಳನ್ನು ಹುಟ್ಟು ಕೊಂಡಿವೆ. 

ಕೆಎಲ್ ರಾಹುಲ್ ಮತ್ತು ಅಥಿಯ ಶೆಟ್ಟಿ: ಟೀಮ್‌ ಇಂಡಿಯಾದ ಫೇಮಸ್‌ ಆಟಗಾರ ಹಾಗೂ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಅವರು ಸುನೀಲ್ ಶೆಟ್ಟಿಯವರ ಪುತ್ರಿ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳು ಬಹಳ ಕಾಲದಿಂದ ಪ್ರಚಲಿತದಲ್ಲಿದೆ. ಇತ್ತೀಚೆಗೆ, ಭಾರತ ತಂಡದ ಇಂಗ್ಲೆಂಡ್ ಪ್ರವಾಸದ ವೇಳೆ ಅಥಿಯಾ ಸಹ ಕೆ ರಾಹುಲ್ ಜೊತೆಯಲ್ಲಿದ್ದರು.

Tap to resize

ನವದೀಪ್ ಸೈನಿ ಮತ್ತು ಪೂಜಾ ಬಿಜಾರ್ನಿಯಾ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಫಾಸ್ಟ್ ಬೌಲರ್‌ ನವದೀಪ್ ಸೈನಿ ಪೂಜಾ ಬಿಜಾರ್ನಿಯಾ ಜೊತೆ ಸಂಬಂಧ ಹೊಂದಿದ್ದಾರೆ ಎಂಬ ವದಂತಿಗಳಿವೆ. ಕಳೆದ ವರ್ಷ ಸೈನಿ ವ್ಯಾಲೆಂಟೈನ್‌ ಡೇಯಂದು ಪೂಜಾಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದರು. ನವದೀಪ್ ತನ್ನ ಗರ್ಲ್‌ಫ್ರೆಂಡ್‌ ಜೊತೆಗಿನ ಫೋಟೋವನ್ನು ಪೋಸ್ಟ್ ಮಾಡಿ ಆಕೆಯನ್ನು ಅಭಿನಂದಿಸಿದ್ದರು

ರಿಷಭ್ ಪಂತ್ ಮತ್ತು ಇಶಾ ನೇಗಿ: ದೆಹಲಿ ಕ್ಯಾಪಿಟಲ್ಸ್‌ನ ರಿಷಭ್ ಪಂತ್ ಇತರ ಆಟಗಾರರಿಗಿಂತ ಭಿನ್ನ. ಅವರ ಸಂಬಂಧದ ಬಗ್ಗೆ ಎಂದಿಗೂ ಅವರು ಮುಚ್ಚೆ ಮರೆಮಾಡಿಲ್ಲ. ಅವರು ಯಾವಾಗಲೂ ಇಶಾ ನೇಗಿ ಜೊತೆಗಿನ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಾರೆ. ಇಬ್ಬರೂ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ.

ಸ್ಯಾಮ್ ಕುರ್ರನ್ ಮತ್ತು ಇಸಾಬೆಲ್ಲಾ ಸೈಮಂಡ್ಸ್: ಸಿಎಸ್‌ಕೆ ತಂಡದ ವಿದೇಶಿ  ಆಟಗಾರ ಸ್ಯಾಮ್ ಕುರ್ರನ್ ಇಸಾಬೆಲ್ಲಾ ಸೈಮಂಡ್ಸ್ ವಿಲ್ಮಾಟ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ವರದಿಯಾಗಿದೆ. ಇಬ್ಬರೂ ದೀರ್ಘಕಾಲದವರೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಇಶಾನ್ ಕಿಶನ್ ಮತ್ತು ಅದಿತಿ ಹುಂಡಿಯಾ: ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಪ್ರಮುಖ ಆಟಗಾರರಲ್ಲಿ ಒಬ್ಬರಾದ ಇಶಾನ್ ಕಿಶನ್ ತಮ್ಮ ಲೇಡಿ ಲವ್‌ ಕಾರಣದಿಂದ ಸದಾ ಸುದ್ದಿಯಲ್ಲಿರುತ್ತಾರೆ. ಅವರು ಮಾಡೆಲ್ ಆದಿತಿ ಹುಂಡಿಯಾ ಜೊತೆ ಸಂಪರ್ಕ ಹೊಂದಿದ್ದಾರೆಂದು ವದಂತಿಗಳಿವೆ. ಅದಿತಿ ಫ್ಯಾಷನ್ ಮತ್ತು ಗ್ಲಾಮರ್ ಪ್ರಪಂಚದಲ್ಲಿ ಚಿರಪರಿಚಿತ ಮುಖ.

ಪೃಥ್ವಿ ಶಾ ಮತ್ತು ಪ್ರಾಚಿ ಸಿಂಗ್: ದೆಹಲಿ ಕ್ಯಾಪಿಟಲ್ಸ್ ಆರಂಭಿಕ ಆಟಗಾರ ಪೃಥ್ವಿ ಶಾ ನಟಿ ಪ್ರಾಚಿ ಸಿಂಗ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ಪ್ರಾಚಿ ಸಿಂಗ್ ಕಲರ್ಸ್ ಟಿವಿ ಶೋ 'ಉಡಾನ್' ನಲ್ಲಿ ಕಾಣಿಸಿಕೊಂಡರು. ಅವರು ಅನೇಕ ಬಾರಿ ಸಾಮಾಜಿಕ ಮಾಧ್ಯಮದಲ್ಲಿ  ಪರಸ್ಪರರ ಫೋಟೋಗಳನ್ನು ಲೈಕ್‌ ಮಾಡಿದ್ದಾರೆ ಮತ್ತು ಮತ್ತು ಕಾಮೆಂಟ್ ಮಾಡುತ್ತಾರೆ. ಇದು ಇವರು ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂಬ ವಂದತಿಗೆ ಕಾರಣವಾಗಿದೆ.

Latest Videos

click me!