ಏಷ್ಯಾಕಪ್ ಫೈನಲ್‌ನಲ್ಲಿ ಭಾರತ ಸೋಲಿಸಲು ಪಾಕ್‌ಗೆ ಮಾಸ್ಟರ್ ಪ್ಲಾನ್ ಹೇಳಿಕೊಟ್ಟ ಶೋಯೆಬ್ ಅಖ್ತರ್!

Published : Sep 26, 2025, 12:41 PM IST

ದುಬೈ: 2025ರ ಏಷ್ಯಾಕಪ್ ಟೂರ್ನಿಯ ಫೈನಲ್‌ನಲ್ಲಿ ಪ್ರಶಸ್ತಿಗಾಗಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಭಾರತವನ್ನು ಸೋಲಿಸಲು ಪಾಕಿಸ್ತಾನಕ್ಕೆ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಮಾಸ್ಟರ್ ಪ್ಲಾನ್ ಹೇಳಿಕೊಟ್ಟಿದ್ದಾರೆ. ಏನದು ನೋಡೋಣ ಬನ್ನಿ.

PREV
17
ಬಾಂಗ್ಲಾ ಮಣಿಸಿದ ಪಾಕ್ ಫೈನಲ್‌ಗೆ ಲಗ್ಗೆ

ಏಷ್ಯಾಕಪ್ ಟೂರ್ನಿಯ ಸೂಪರ್-4 ಹಂತದ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಒಂದು ರೀತಿ ವರ್ಚುವಲ್ ಸೆಮಿಫೈನಲ್ ಪಂದ್ಯ ಎನಿಸಿಕೊಂಡಿದ್ದ ಕಾದಾಟದಲ್ಲಿ ಪಾಕಿಸ್ತಾನ ತಂಡವು 11 ರನ್ ರೋಚಕ ಜಯ ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ.

27
ಏಷ್ಯಾಕಪ್ ಫೈನಲ್‌ಗೆ ವೇದಿಕೆ ಸಜ್ಜು

ಇದೀಗ ಏಷ್ಯಾಕಪ್‌ ಫೈನಲ್‌ನಲ್ಲಿ ಕ್ರಿಕೆಟ್‌ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಸೆಣಸಾಟ ನಡೆಸಲಿವೆ. ಈ ಪಂದ್ಯವು ಸೆಪ್ಟೆಂಬರ್ 28ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಡೆಯಲಿದೆ.

37
ಏಷ್ಯಾಕಪ್ ಇತಿಹಾಸದಲ್ಲಿ ಮೊದಲ ಸಲ ಇಂಡೋ-ಪಾಕ್ ಫೈನಲ್ ಫೈಟ್

ಅಂದಹಾಗೆ 41 ವರ್ಷಗಳ ಏಷ್ಯಾಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಏಷ್ಯಾಕಪ್ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಹೀಗಾಗಿ ಸಾಕಷ್ಟು ಕುತೂಹಲ ಗರಿಗೆದರಿವೆ.

47
ಪಾಕ್‌ ಮೇಲೆ ಸತತ ಎರಡು ಗೆಲುವು ದಾಖಲಿಸಿದ ಭಾರತ

ಈಗಾಗಲೇ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಬದ್ದ ಎದುರಾಳಿ ಪಾಕಿಸ್ತಾನ ಎದುರು ಗ್ರೂಪ್‌ ಹಂತದಲ್ಲಿ ಹಾಗೂ ಸೂಪರ್-4 ಹಂತದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ್ದು, ಇದೀಗ ಹ್ಯಾಟ್ರಿಕ್ ಗೆಲುವಿನೊಂದಿಗೆ 9ನೇ ಏಷ್ಯಾಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

57
ಭಾರತದ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಪಾಕ್

ಇನ್ನೊಂದೆಡೆ ಫೈನಲ್‌ನಲ್ಲಿ ಭಾರತ ಎದುರು ಸೇಡು ತೀರಿಸಿಕೊಳ್ಳಲು ಕಾಯುತ್ತಿರುವ ಪಾಕಿಸ್ತಾನಕ್ಕೆ, ಭಾರತವನ್ನು ಸೋಲಿಸಲು ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಮಾಸ್ಟರ್ ಪ್ಲಾನ್ ಹೇಳಿಕೊಟ್ಟಿದ್ದಾರೆ.

67
ಅಭಿಷೇಕ್ ಶರ್ಮಾ ಟಾರ್ಗೆಟ್ ಮಾಡಿ

ಪಾಕಿಸ್ತಾನ ಚಾನೆಲ್‌ವೊಂದರಲ್ಲಿ ಭಾಗವಹಿಸಿ ಮಾತನಾಡಿದ ಶೋಯೆಬ್ ಅಖ್ತರ್, ಅಭಿಷೇಕ್ ಶರ್ಮಾ ಟೀಂ ಇಂಡಿಯಾಗೆ ವಿಸ್ಪೋಟಕ ಆರಂಭ ಒದಗಿಸಿಕೊಡುತ್ತಿದ್ದಾರೆ. ಪಾಕಿಸ್ತಾನ ತಂಡವು ಆತನನ್ನು ಮೊದಲ ಎರಡು ಓವರ್‌ನೊಳಗೆ ಔಟ್ ಮಾಡಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

77
ಶೋಯೆಬ್ ಅಖ್ತರ್ ಮಾಸ್ಟರ್ ಪ್ಲಾನ್

ಪಾಕಿಸ್ತಾನವು 20 ಓವರ್ ಬೌಲಿಂಗ್ ಮಾಡಬೇಕಿಲ್ಲ, ಅಷ್ಟರೊಳಗಾಗಿ ಭಾರತವನ್ನು ಆಲೌಟ್ ಮಾಡಬೇಕು ಎನ್ನುವುದು ನೆನಪಿರಲಿ. ಆಗ ಭಾರತ ಗೇಮ್ ಪ್ಲಾನ್ ಚೇಂಜ್‌ ಮಾಡಲಿದೆ. ಮೊದಲ ಎರಡು ಓವರ್‌ನಲ್ಲೇ ಅಭಿಷೇಕ್ ಶರ್ಮಾ ಔಟ್ ಮಾಡಿದ್ರೆ, ಭಾರತದ ತಲೆನೋವು ಹೆಚ್ಚಲಿದೆ ಎಂದು ಅಖ್ತರ್ ಹೇಳಿದ್ದಾರೆ.

Read more Photos on
click me!

Recommended Stories