ದುಬೈ: ಭಾರತ ಹಾಗೂ ಪಾಕಿಸ್ತಾನ ತಂಡಗಳು ನಿರೀಕ್ಷೆಯಂತೆಯೇ 2025ರ ಏಷ್ಯಾಕಪ್ ಟೂರ್ನಿಯಲ್ಲಿ ಮೂರನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಹೀಗಿರುವಾಗಲೇ ಫೈನಲ್ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ನಾಯಕ ಸಲ್ಮಾನ್ ಅಲಿ ಅಘಾ, ಭಾರತ ತಂಡಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ.
ಇದೇ ಸೆಪ್ಟೆಂಬರ್ 28ರಂದು ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ಏಷ್ಯಾಕಪ್ ಫೈನಲ್ ನಿಗದಿಯಾಗಿದೆ. ಕ್ರಿಕೆಟ್ ಜಗತ್ತಿನ ಬದ್ದ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.
29
ಬಾಂಗ್ಲಾಗೆ ಸೋಲುಣಿಸಿದ ಪಾಕ್
ಸೆಪ್ಟೆಂಬರ್ 25ರಂದು ಒಂದು ರೀತಿ ವರ್ಚುವಲ್ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಪಾಕಿಸ್ತಾನ 11 ರನ್ ರೋಚಕ ಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದೆ.
39
ಫೈನಲ್ ಭವಿಷ್ಯ ನುಡಿದ ಪಾಕ್ ಕ್ತಾಪ್ಟನ್
ಇದೀಗ ಪಾಕಿಸ್ತಾನ ತಂಡವು ಫೈನಲ್ ಪ್ರವೇಶಿಸುತ್ತಿದ್ದಂತೆಯೇ, ಪಾಕ್ ನಾಯಕ ಸಲ್ಮಾನ್ ಅಲಿ ಅಘಾ, ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ್ದಲ್ಲೇ, ಫೈನಲ್ ಕುರಿತಂತೆ ಭವಿಷ್ಯ ನುಡಿದಿದ್ದಾರೆ.
ಬಾಂಗ್ಲಾದೇಶ ಎದುರು ಗೆಲುವು ದಾಖಲಿಸಿದ ಬಳಿಕ ಮಾತನಾಡಿದ ಸಲ್ಮಾನ್ ಅಲಿ ಅಘಾ, ಈ ರೀತಿ ಪಂದ್ಯವನ್ನು ಗೆಲ್ಲಬೇಕೆಂದರೆ, ಒಂದು ತಂಡವಾಗಿ ಆಡಬೇಕಾಗುತ್ತದೆ. ಎಲ್ಲರೂ ತುಂಬಾ ಚೆನ್ನಾಗಿ ಆಡಿದರು. ಬ್ಯಾಟಿಂಗ್‌ನಲ್ಲಿ ಕೊಂಚ ಸುಧಾರಣೆ ಕಂಡುಕೊಳ್ಳಬೇಕಿದೆ. ಆ ಬಗ್ಗೆ ಗಮನ ಹರಿಸುತ್ತೇವೆ ಎಂದಿದ್ದಾರೆ.
59
ಶಾಹೀನ್ ಅಫ್ರಿದಿ ಗುಣಗಾನ
ಇನ್ನು ಶಾಹೀನ್ ಅಫ್ರಿದಿ ಒಳ್ಳೆಯ ಆಟಗಾರರಾಗಿದ್ದು, ತಂಡ ಅವರಿಂದ ಏನನ್ನು ನಿರೀಕ್ಷೆ ಮಾಡುತ್ತಿತ್ತೋ ಅದನ್ನೇ ಮಾಡುತ್ತಿದ್ದಾರೆ. ಅವರ ಪ್ರದರ್ಶನದ ಬಗ್ಗೆ ನಮಗೆ ಖುಷಿ ಇದೆ ಎಂದು ಪಾಕ್ ನಾಯಕ ಹೇಳಿದ್ದಾರೆ.
69
ಹೊಸ ಚೆಂಡಿನಲ್ಲಿ ನಾವು ಬೆಸ್ಟ್
ನಾವು ಹೊಸ ಚೆಂಡಿನಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದೇವೆ. ನಾವು ಈ ರೀತಿಯೇ ಬೌಲಿಂಗ್ ಮಾಡಿದರೇ ಖಂಡಿತವಾಗಿಯೂ ನಾವು ಸುಲಭವಾಗಿ ಮ್ಯಾಚ್ ಗೆಲ್ಲಬಹುದು ಎಂದು ಸಲ್ಮಾನ್ ಅಘಾ ಹೇಳಿದ್ದಾರೆ.
79
ನಾವು ಯಾವುದೇ ತಂಡವನ್ನು ಬೇಕಿದ್ರೂ ಸೋಲಿಸುತ್ತೇವೆ
ಮುಂದುವರೆದ ಮಾತನಾಡಿದ ಅವರು ನಾವು ಯಾವುದೇ ತಂಡವನ್ನು ಸೋಲಿಸುವ ಕ್ಷಮತೆ ಹೊಂದಿದ್ದೇವೆ. ನಾವು ಭಾನುವಾರ ಕಮ್‌ಬ್ಯಾಕ್ ಮಾಡುತ್ತೇವೆ ಹಾಗೆಯೇ ಇದೇ ರೀತಿಯ ಫಲಿತಾಂಶ ತರಲು ಪ್ರಯತ್ನಿಸುತ್ತೇವೆ ಎಂದು ಸಲ್ಮಾನ್ ಅಘಾ ಹೇಳಿದ್ದಾರೆ.
89
ಭಾರತ ಸೋಲಿಸಲು ರೆಡಿ ಎನ್ನುವ ಸಂದೇಶ
ಈ ಮೂಲಕ ಏಷ್ಯಾಕಪ್ ಫೈನಲ್‌ನಲ್ಲಿ ನಾವು ಭಾರತ ತಂಡವನ್ನು ಸೋಲಿಸಲು ರೆಡಿಯಾಗಿದ್ದೇವೆ ಎನ್ನುವ ಸಂದೇಶ ರವಾನಿಸಿದ್ದಾರೆ. ಆದು ಅದು ಸುಲಭದ ಮಾತಲ್ಲ ಎನ್ನುವುದು ಪಾಕ್ ನಾಯಕನಿಗೂ ಗೊತ್ತಿದೆ.
99
ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟ ಭಾರತ
ಯಾಕೆಂದರೆ, ಈಗಾಗಲೇ ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಂ ಇಂಡಿಯಾ, ಬದ್ದ ಎದುರಾಳಿ ಪಾಕಿಸ್ತಾನ ಎದುರು ಗ್ರೂಪ್ ಹಂತದಲ್ಲಿ ಹಾಗೂ ಸೂಪರ್-4 ಹಂತದಲ್ಲಿ ಪಾಕಿಸ್ತಾನಕ್ಕೆ ಸೋಲುಣಿಸಿದ್ದು, ಇದೀಗ ಹ್ಯಾಟ್ರಿಕ್ ಗೆಲುವಿನೊಂದಿಗೆ 9ನೇ ಏಷ್ಯಾಕಪ್ ಗೆಲ್ಲುವ ವಿಶ್ವಾಸದಲ್ಲಿದೆ.