1. ರೋಹಿತ್ ಶರ್ಮಾ:
ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲ ಪಂದ್ಯದಲ್ಲಿ ಕೇವಲ 11 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದೀಗ ದುರ್ಬಲ ನೇಪಾಳ ಎದುರು ದೊಡ್ಡ ಇನಿಂಗ್ಸ್ ಆಡಲು ಹಿಟ್‌ಮ್ಯಾನ್ ಎದುರು ನೋಡುತ್ತಿದ್ದಾರೆ.
2. ಶುಭ್‌ಮನ್ ಗಿಲ್:
16ನೇ ಆವೃತ್ತಿಯ ಐಪಿಎಲ್ ಬಳಿಕ ಮಂಕಾಗಿರುವ ಮತ್ತೋರ್ವ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್, ಫಾರ್ಮ್‌ಗೆ ಮರಳಲು ಇದು ಸುವರ್ಣಾವಕಾಶವಾಗಿದೆ. ಗಿಲ್ ಕಳೆದ ಪಂದ್ಯದಲ್ಲಿ ಕೇವಲ 10 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು.
3. ವಿರಾಟ್ ಕೊಹ್ಲಿ:
ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಪಾಕ್ ಎದುರು ಕೇವಲ ಒಂದಂಕಿ(04) ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದರು. ಸೂಪರ್ 4 ಹಂತಕ್ಕೂ ಮುನ್ನ ಕೊಹ್ಲಿ ಲಯಕ್ಕೆ ಮರಳಲು ಎದುರು ನೋಡುತ್ತಿದ್ದಾರೆ.
4. ಶ್ರೇಯಸ್ ಅಯ್ಯರ್:
ದೀರ್ಘ ಸಮಯದ ಬಳಿಕ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಶ್ರೇಯಸ್ ಅಯ್ಯರ್ ಪಾಕ್ ಎದುರು ಕೇವಲ 14 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಇಂದು ನೇಪಾಳ ಎದುರು ದೊಡ್ಡ ಇನಿಂಗ್ಸ್ ಆಡುವ ನಿರೀಕ್ಷೆಯಲ್ಲಿದ್ದಾರೆ ಮುಂಬೈ ಕ್ರಿಕೆಟಿಗ.
5. ಇಶಾನ್ ಕಿಶನ್:
ಟೀಂ ಇಂಡಿಯಾ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್, ಏಕದಿನ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನದ ಮೂಲಕ ಮಿಂಚುತ್ತಿದ್ದು, ಕಳೆದ ಪಂದ್ಯದಲ್ಲಿ ಆಕರ್ಷಕ 82 ರನ್ ಸಿಡಿಸಿದ್ದರು. ಇಶಾನ್ ಕಿಶನ್ ತಮ್ಮ ಫಾರ್ಮ್ ಮುಂದುವರೆಸಿಕೊಂಡು ಹೋಗಲು ಹಾತೊರೆಯುತ್ತಿದ್ದಾರೆ.
6. ಹಾರ್ದಿಕ್ ಪಾಂಡ್ಯ:
ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಪಾಕ್ ಎದುರಿನ ಪಂದ್ಯದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್ ನಿಭಾಯಿಸಿದ್ದರು. ಪಾಂಡ್ಯ 87 ರನ್ ಬಾರಿಸಿ ಮಿಂಚಿದ್ದರು.
7. ರವೀಂದ್ರ ಜಡೇಜಾ:
ಟೀಂ ಇಂಡಿಯಾ ಮತ್ತೋರ್ವ ಆಲ್ರೌಂಡರ್ ಜಡೇಜಾ, ಕಳೆದ ಪಂದ್ಯದಲ್ಲಿ ಪಾಕ್ ಎದುರು ಕೇವಲ 14 ರನ್ ಬಾರಿಸಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರು. ಇಂದು ಅವಕಾಶ ಸಿಕ್ಕಿದರೆ ಮಿಂಚುವ ವಿಶ್ವಾಸದಲ್ಲಿದ್ದಾರೆ.
8. ಶಾರ್ದೂಲ್ ಠಾಕೂರ್:
ಟೀಂ ಇಂಡಿಯಾ ಮತ್ತೋರ್ವ ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಕಳೆದ ಪಂದ್ಯದಲ್ಲಿ ಕೇವಲ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇಂದು ಠಾಕೂರ್ ಬೌಲಿಂಗ್& ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ.
9. ಕುಲ್ದೀಪ್ ಯಾದವ್:
ಟೀಂ ಇಂಡಿಯಾ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಕಳೆದ ಪಂದ್ಯದಲ್ಲಿ ಬೌಲಿಂಗ್ ಮಾಡಲು ಮಳೆರಾಯ ಅವಕಾಶ ಮಾಡಿಕೊಟ್ಟಿರಲಿಲ್ಲ. ಇಂದು ನೇಪಾಳ ಬ್ಯಾಟರ್ ಕಾಡಲು ಕುಲ್ದೀಪ್ ಸಜ್ಜಾಗಿದ್ದಾರೆ.
10. ಮೊಹಮ್ಮದ್ ಶಮಿ:
ಜಸ್ಪ್ರೀತ್ ಬುಮ್ರಾ ತವರಿಗೆ ವಾಪಾಸ್ಸಾಗಿದ್ದರಿಂದ ಬುಮ್ರಾ ಬದಲಿಗೆ ಅನುಭವಿ ವೇಗಿ ಮೊಹಮ್ಮದ್ ಶಮಿ ಇಂದು ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನಿಸಿದೆ.
11. ಮೊಹಮ್ಮದ್ ಸಿರಾಜ್:
ಹೈದರಾಬಾದ್ ಮೂಲದ ಮಾರಕ ವೇಗಿ ಮೊಹಮ್ಮದ್ ಸಿರಾಜ್‌ಗೂ ಕೂಡಾ ಕಳೆದ ಪಂದ್ಯದಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. ಇದೀಗ ನೇಪಾಳ ಬ್ಯಾಟರ್‌ಗಳ ಎದುರು ಅಬ್ಬರಿಸಲು ಎದುರು ನೋಡುತ್ತಿದ್ದಾರೆ.