Asia Cup ಅರ್ಧಕ್ಕೆ ಬಿಟ್ಟು ಬುಮ್ರಾ ತವರಿಗೆ ವಾಪಾಸ್ಸಾಗಿದ್ದೇಕೆ? ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ..!

First Published | Sep 4, 2023, 11:26 AM IST

ಪಲ್ಲೆಕೆಲೆ(ಸೆ.04): ಟಿಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ, ದಿಢೀರ್ ಎನ್ನುವಂತೆ ಏಷ್ಯಾಕಪ್ ಟೂರ್ನಿಯನ್ನು ಅರ್ಧಕ್ಕೆ ಬಿಟ್ಟು ತವರಿಗೆ ವಾಪಾಸ್ಸಾಗಿದ್ದಾರೆ. ಇದು ಕ್ರಿಕೆಟ್ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಬುಮ್ರಾ ತವರಿಗೆ ವಾಪಸ್ಸಾಗಿದ್ದೇಕೆ ಎನ್ನುವ ಕುತೂಹಲಕ್ಕೆ ತೆರೆ ಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ.
 

Asia Cup 2023 Pacer Jasprit Bumrah returns home for birth of first child set to miss Nepal clash kvn

ಮುಂಬರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸಿದ್ದತೆಯ ಭಾಗವಾಗಿ ಪೂರ್ಣಪ್ರಮಾಣದ ಟೀಂ ಇಂಡಿಯಾ ಏಷ್ಯಾಕಪ್ ಟೂರ್ನಿಯಲ್ಲಿ ಪಾಲ್ಗೊಂಡಿದೆ. ಹೀಗಿರುವಾಗಲೇ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ ಮೊದಲ ಪಂದ್ಯದ ಬಳಿಕ ತವರಿಗೆ ವಾಪಾಸ್ಸಾಗಿದ್ದಾರೆ.
 

ಹೌದು, ಸಾಕಷ್ಟು ಸಮಯದ ಬಳಿಕ ಐರ್ಲೆಂಡ್ ಪ್ರವಾಸದ ವೇಳೆಗೆ ಟೀಂ ಇಂಡಿಯಾ ಕೂಡಿಕೊಂಡಿದ್ದ ಬುಮ್ರಾ, ಇದಾದ ಬಳಿಕ ಏಷ್ಯಾಕಪ್ ತಂಡದಲ್ಲೂ ಸ್ಥಾನ ಪಡೆದಿದ್ದರು. ಪಾಕಿಸ್ತಾನ ಎದುರಿನ ಪಂದ್ಯದ ಬಳಿಕ ಬುಮ್ರಾ, ಮುಂಬೈಗೆ ವಾಪಸ್ಸಾಗಿದ್ದಾರೆ.

Tap to resize

ಪ್ರಮುಖ ವೇಗಿ ಬುಮ್ರಾ ದಿಢೀರ್ ಎನ್ನುವಂತೆ ತವರಿಗೆ ವಾಪಾಸ್ಸಾಗಿದ್ದು, ಟೀಂ ಇಂಡಿಯಾ ಕ್ರಿಕೆಟ್ ಅಭಿಮಾನಿಗಳ ಪಾಳಯದಲ್ಲಿ ಆತಂಕಕ್ಕೀಡಾಗುವಂತೆ ಮಾಡಿತ್ತು. ಯಾಕೆಂದರೆ ಬುಮ್ರಾ ಮತ್ತೆ ಗಾಯಗೊಂಡರೇನೋ ಎನ್ನುವ ಅನುಮಾನ ಕ್ರಿಕೆಟ್ ಅಭಿಮಾನಿಗಳನ್ನು ಕಾಡಲಾರಂಭಿಸಿತ್ತು.

ಜಸ್ಪ್ರೀತ್ ಬುಮ್ರಾ ತವರಿಗೆ ವಾಪಾಸ್ಸಾಗಲು ಪ್ರಮುಖ ಕಾರಣ, ಬುಮ್ರಾ ಪತ್ನಿ ಸಂಜನಾ ಗಣೇಶನ್ ಮೊದಲ ಮಗುವಿಗೆ ಜನ್ಮನೀಡುವ ನಿರೀಕ್ಷೆ ಇದ್ದಿದ್ದರಿಂದಾಗಿ, ಬುಮ್ರಾ ದಿಢೀರ್ ಎನ್ನುವಂತೆ ಲಂಕಾದಿಂದ ಮುಂಬೈಗೆ ವಾಪಸ್ಸಾಗಿದ್ದಾರೆ. 

ಮತ್ತೊಂದು ಸಿಹಿಸುದ್ದಿಯೇನೆಂದರೆ, ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಇದೀಗ ಇಂದು ಬೆಳಗ್ಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಬುಮ್ರಾ ಟ್ವೀಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಇದೀಗ ಇಂದು(ಸೆ.04) ನಡೆಯಲಿರುವ ನೇಪಾಳ ಎದುರಿನ ಪಂದ್ಯದಲ್ಲಿ ಜಸ್ಪ್ರೀತ್ ಬುಮ್ರಾ ಸೇವೆ ಅಲಭ್ಯವಾಗಲಿದ್ದು, ಬುಮ್ರಾ ಬದಲಿಗೆ ಅನುಭವಿ ವೇಗಿ ಮೊಹಮ್ಮದ್ ಶಮಿ ಅಥವಾ ಪ್ರಸಿದ್ದ್ ಕೃಷ್ಣ ಭಾರತ ತಂಡದಲ್ಲಿ ಸ್ಥಾನ ಪಡೆಯುವುದು ಬಹುತೇಕ ಖಚಿತ ಎನಿಸಿದೆ
 

ವೇಗಿ ಜಸ್ಪ್ರೀತ್ ಬುಮ್ರಾ, ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯದ ವೇಳೆಗೆ ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ

Latest Videos

click me!