ಪಂಜಾಬ್ ಕಿಂಗ್ಸ್ ಕ್ರಿಕೆಟಿಗನ ಮನಸ್ಸು ಕದ್ರಾ ನಟಿ ಸಮ್ರೀನ್? ಲವ್ ಸ್ಟೋರಿ ಸುಳಿವು ನೀಡಿದ ಐಪಿಎಲ್

Published : Apr 06, 2026, 05:12 PM IST

ಪಂಜಾಬ್ ಕಿಂಗ್ಸ್ ಕ್ರಿಕೆಟಿಗನ ಮನಸ್ಸು ಕದ್ರಾ ನಟಿ ಸಮ್ರೀನ್? ಲವ್ ಸ್ಟೋರಿ ಸುಳಿವು ನೀಡಿದ ಐಪಿಎಲ್, ಖುದ್ದು ಕ್ರಿಕೆಟಿಗ ತಮ್ಮ ಇನ್‌ಸ್ಟಾದಲ್ಲಿ ಸ್ಟೋರಿ ಹಾಕಿದ್ದಾರೆ. ಕೈಕೈ ಹಿಡಿದಿರುವ ಫೋಟೋ ಇದೀಗ ಹಲವು ಸುಳಿವು ನೀಡಿದೆ. 

PREV
15
ನಟಿ ಸಿಮ್ರನ್ ಪ್ರೀತಿಯಲ್ಲಿ ಪಂಜಾಬ್ ಸ್ಟಾರ್

ಟೀಂ ಇಂಡಿಯಾ ಸ್ಟಾರ್ ವೇಗಿ, ಪಂಜಾಬ್ ಕಿಂಗ್ಸ್ ತಂಡದ ಕೀ ಪ್ಲೇಯರ್ ಲವ್ ಸ್ಟೋರಿಯೊಂದು ಬಹಿರಂಗವಾಗಿದೆ. ಕ್ರಿಕೆಟಿಗನ ಸೋಶಿಯಲ್ ಮೀಡಿಯಾ ಸ್ಟೋರಿಯಿಂದ ಲವ್ ಸ್ಟೋರಿ ಬಯಲಾಗಿದೆ. ಟೀಂ ಇಂಡಿಯಾ ಕ್ರಿಕೆಟಿಗನ ಮನಸ್ಸು ಕದ್ದಿದ್ದು ನಟಿ ಸಮ್ರೀನ್ ಕೌರ್ ಎಂದು ಹೇಳಲಾಗುತ್ತಿದೆ. ಅರ್ಶದೀಪ್ ಕೈ ಹಿಡಿದಿರುವ ಬೆಡಗಿ ನಟಿ ಸಿಮ್ರನ್ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

25
ಫೋಟೋ ನೀಡಿದ ಸುಳಿವು

ಪಂಜಾಬ್ ಕಿಂಗ್ಸ್ ತಂಡದ ಸ್ಟಾರ್, ಟೀಂ ಇಂಡಿಯಾ ವೇಗಿ ಅರ್ಶದೀಪ್ ಸಿಂಗ್ ಇನ್‌ಸ್ಟಾಗ್ರಾಂ ಸ್ಟೋರಿ ಪ್ರೀತಿ ಕತೆ ಹೇಳಿದೆ. ಮನಸ್ಸು ಕದ್ದ ಹುಡುಗಿಯ ಕೈಹಿಡಿದು ಕುಳಿತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅರ್ಶದೀಪ್ ಶೀಘ್ರದಲ್ಲೇ ಹೊಸ ಇನ್ನಿಂಗ್ಸ್ ಆರಂಭಿಸುತ್ತಿರುವುದು ಖಚಿತವಾಗಿದೆ. ಇದೀಗ ಹುಡುಗಿ ಯಾರು ಅನ್ನೋದು ಅಭಿಮಾನಿಗಳು ಬಹಿರಂಗಪಡಿಸಿದ್ದಾರೆ. ಇದು ನಟಿ ಸಮ್ರೀನ್ ಕೌರ್ ಎಂದಿದ್ದಾರೆ.

35
ಅರ್ಶದೀಪ್ ಸ್ಟೋರಿ ನೀಡಿದ ಸುಳಿವೇನು?

ಐಪಿಎಲ್ ಟೂರ್ನಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ಕೀ ಪ್ಲೇಯರ್ ಅರ್ಶದೀಪ್ ಸಿಂಗ್, ವಿರಾಮದಲ್ಲಿ ಸ್ಟೋರಿ ಪೋಸ್ಟ್ ಮಾಡಿದ್ದಾರೆ. ಎರಡು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮನಸ್ಸು ಕದ್ದು ಹುಡುಗಿಯ ಕೈಗಳ ಫೋಟೋ, ಮತ್ತೊಂದು ಅದೇ ಹುಡುಗಿಯ ಕಹಿಡಿದು ಕುಳಿತಿರುವ ಫೋಟೋ ಪೋಸ್ಟ್ ಮಾಡಿದ್ದಾರೆ.

45
ಯಾರು ಈ ಸಿಮ್ರೀನ್ ಕೌರ್

ಸಮ್ರೀನ್ ಕೌರ್ ಪಂಜಾಬಿ ನಟಿ. ಪಂಜಾಬ್ ಸಿನಿಮಾ ಕ್ಷೇತ್ರಕ್ಕೆ ಇತ್ತೀಚೆಗೆ ಕಾಲಿಟ್ಟು ಭಾರಿ ಸಂಚಲನ ಸೃಷ್ಟಿಸಿದ ನಟಿ. ತಮ್ಮ ಸೌಂದರ್ಯ, ನಟನೆ ಮೂಲಕ ಗಮನಸೆಳೆದಿದ್ದಾರೆ. ಮ್ಯೂಸಿಕ್ ಆಲ್ಬಮ್ ಮೂಲಕ ಪಂಜಾಬಿಗರ ಮನದಲ್ಲಿ ಜಾಗ ಗಿಟ್ಟಿಸಿಕೊಂಡ ಸಮ್ರೀನ್ ಕೌರ್ ಇದೀಗ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಅರ್ಶದೀಪ್ ಸಿಂಗ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿಬರುತ್ತಿದೆ.

55
ಬಾಲಿವುಡ್‌ನಲ್ಲೂ ಮಂಚಿರುವ ಸಮ್ರೀನ್

ಸಮ್ರೀನ್ ಕೌರ್ ಬಾಲಿವುಡ್‌ನಲ್ಲೂ ಮಂಚಿದ್ದಾರೆ. ರಣವೀರ್ ಸಿಂಗ್ ಅಭಿನಯದ 1983 ವರ್ಲ್ಡ್ ಕಪ್ ಸಿನಿಮಾದಲ್ಲಿ ಸಮ್ರೀನ್ ಪಾತ್ರ ನಿರ್ವಹಿಸಿದ್ದಾರೆ. ಅರ್ಶದೀಪ್ ಹಾಗೂ ಸಮ್ರೀನ್ ಕೌರ್ ಇಬ್ಬರು ಪಂಜಾಬ್ ಮೂಲದವರು. ಇದೀಗ ಇವರಿಬ್ಬರ ಸೀಕ್ರೆಟ್ ಡೇಟ್ ಬಹಿರಂಗವಾಗಿದೆ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ.

ಬಾಲಿವುಡ್‌ನಲ್ಲೂ ಮಂಚಿರುವ ಸಮ್ರೀನ್

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories