2021ರ ಐಪಿಎಲ್ ಆಡ್ತಾರ ಶ್ರೀಶಾಂತ್? ಮಹತ್ವದ ಮಾಹಿತಿ ಹಂಚಿಕೊಂಡ ವೇಗಿ!

First Published Dec 27, 2020, 8:32 PM IST

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಿಸಿಸಿಐನಿಂದ ನಿಷೇಧಕ್ಕೊಳಗಾಗಿದ್ದ ವೇಗಿ ಎಸ್ ಶ್ರೀಶಾಂತ್, ಇದೀಗ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಇತ್ತ ಶ್ರೀಗೆ ಕೋರ್ಟ್ ಕ್ಲೀನ್ ಚಿಟ್ ನೀಡಿದ ಬಳಿಕ ಬಿಸಿಸಿಐ ಶಿಕ್ಷೆ ಕಡಿತಗೊಳಿಸಿದೆ. ಇದೀಗ ಸೈಯದ್ ಮುಷ್ತಾಕ್ ಆಲಿ ಟೂರ್ನಿ ಮೂಲಕ 7 ವರ್ಷಗಳ ಬಳಿಕ ಕ್ರಿಕೆಟ್‌ಗೆ ಮರಳುತ್ತಿದ್ದಾರೆ. ಇದರ ಬೆನ್ನಲ್ಲೇ ಶ್ರೀಶಾಂತ್ ಮುಂದಿ ಐಪಿಎಲ್ ಟೂರ್ನಿ ಆಡೋ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
 

7 ವರ್ಷಗಳ ಶಿಕ್ಷೆ ಬಳಿಕ ಕೇರಳ ವೇಗಿ ಎಸ್ ಶ್ರೀಶಾಂತ್ ಇದೀಗ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಇದೀಗ ಜನವರಿ 10 ರಿಂದ ಆರಂಭಗೊಳ್ಳುತ್ತಿರುವ ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಶ್ರೀಶಾಂತ್ ಪಾಲ್ಗೊಳ್ಳುತ್ತಿದ್ದಾರೆ.
undefined
ಕೇರಳ ಕ್ರಿಕೆಟ್ ಶ್ರೀಶಾಂತ್‌ಗೆ ಅವಕಾಶ ಮಾಡಿಕೊಟ್ಟಿದೆ. 2013ರ ಐಪಿಎಲ್ ಟೂರ್ನಿ ಬಳಿಕ ಇದೇ ಮೊದಲ ಬಾರಿಗೆ ಶ್ರೀಶಾಂತ್ ವೃತ್ತಿಪರ ಕ್ರಿಕೆಟ್ ಆಡಲು ಸಜ್ಜಾಗಿದ್ದಾರೆ. ಇದು ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಕೆರಳಿದೆ.
undefined
ಇದರ ಬೆನ್ನಲ್ಲೇ ಶ್ರೀಶಾಂತ್ 2021ರ ಐಪಿಎಲ್ ಟೂರ್ನಿ ಆಡುವ ಕುರಿತು ಸುಳಿವು ನೀಡಿದ್ದಾರೆ. ಐಪಿಎಲ್ ಟೂರ್ನಿ ಆಡುವ ಕುರಿತು ಕರೆಗಳು ಬರುತ್ತಿದೆ. ಈ ಕುರಿತು ಕೆಲವರು ಮಾತುಕತೆ ಮುಂದಾಗಿದ್ದಾರೆ ಎಂದು ಶ್ರೀಶಾಂತ್ ಹೇಳಿದ್ದಾರೆ
undefined
ಸಂಜು ಸಾಮ್ಸನ್, ಟಿನು ಸೇರಿದಂತೆ ಕೇರಳ ತಂಡ ಈ ಬಾರಿ ಸೈಯದ್ ಮುಷ್ತಾಕ್ ಗೆದ್ದು ನನಗೆ ಕಮ್‌ಬ್ಯಾಕ್ ಗಿಫ್ಟ್ ನೀಡುವುದಾಗಿ ಹೇಳಿದ್ದಾರೆ ಎಂದು ಶ್ರೀಶಾಂತ್ ಹೇಳಿದ್ದಾರೆ.
undefined
ಸೈಯದ್ ಮುಷ್ತಾಕ್ ಆಲಿ ಟೂರ್ನಿ ಬಳಿ ಕೇರಳ ಪರ ರಣಜಿ ಟೂರ್ನಿ ಹಾಗೂ ಇರಾನಿ ಟ್ರೋಫಿ ಆಡಲು ಬಯಸುತ್ತೇನೆ. ಇದಕ್ಕಾಗಿ ಕಠಿಣ ಪ್ರಯತ್ನ ಮಾಡಲಿದ್ದೇನೆ ಎಂದು ಶ್ರೀ ಹೇಳಿದ್ದಾರೆ.
undefined
ಶ್ರೀಶಾಂತ್ ಇಲ್ಲಿಗೆ ನಿಲ್ಲಿಸಿಲ್ಲ. ಸದ್ಯ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ಭರವಸೆ ಇದೆ. ಹೀಗಾಗಿ 2023ರ ವಿಶ್ವಕಪ್ ಟೂರ್ನಿ ಆಡುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಶ್ರೀಶಾಂತ್ ಹೇಳಿದ್ದಾರೆ.
undefined
ಐಪಿಎಲ್ ಫ್ರಾಂಚೈಸಿ ಬಿಡ್ ಮಾಡಿದರೆ ಖಂಡಿತ ಐಪಿಎಲ್ ಟೂರ್ನಿ ಆಡಲು ಶ್ರೀಶಾಂತ್ ಸಜ್ಜಾಗಿದ್ದಾರ. ಇಷ್ಟೇ ಅಲ್ಲ ಅತ್ಯುತ್ತಮ ಪ್ರದರ್ಶನ ನೀಡುವ ಪಣತೊಟ್ಟಿದ್ದಾರೆ.
undefined
2013ರಲ್ಲಿ ರಾಜಸ್ಥಾನ ರಾಯಲ್ಸ್ ಪರ ಆಡಿದ್ದ ಶ್ರೀಶಾಂತ್ ಬಳಿಕ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ನಿಷೇಧಕ್ಕೊಳಾಗಿದ್ದರು. ಐಪಿಎಲ್ ಟೂರ್ನಿ 44 ಪಂದ್ಯಗಳಿಂದ ಶ್ರೀಶಾಂತ್ 40 ವಿಕೆಟ್ ಕಬಳಿಸಿದ್ದಾರೆ.
undefined
click me!