ರಾಜ್‌ಕೋಟ್: ಟೀಂ ಇಂಡಿಯಾ ಕ್ರಿಕೆಟಿಗ ವಿರಾಟ್ ಕೊಹ್ಲಿ, ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದು, ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲೇ ಭರ್ಜರಿ ಬ್ಯಾಟಿಂಗ್ ನಡೆಸುವ ಮೂಲಕ ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ. ಇದೀಗ ಕೊಹ್ಲಿಯ ಬಗ್ಗೆ ಮಾಜಿ ನಾಯಕ ಅಜಿಂಕ್ಯ ರಹಾನೆ ಮನಬಿಚ್ಚಿ ಮಾತನಾಡಿದ್ದಾರೆ.
ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಆಕರ್ಷಕ 93 ರನ್ ಸಿಡಿಸುವ ಮೂಲಕ ಹೊಸ ವರ್ಷದ ಮೊದಲ ಪಂದ್ಯದಲ್ಲೇ ತಮ್ಮ ಮಿಂಚಿನ ಆಟವನ್ನು ಮುಂದುವರೆಸಿದ್ದಾರೆ.
29
ಕೊಹ್ಲಿಗೆ ವಿಪರೀತ ಸೊಕ್ಕಿದೆ ಎನ್ನುವ ಅಪವಾದ
ಇನ್ನು ಮೈದಾನದೊಳಗೆ ಸದಾ ಆಕ್ರಮಣಾಕಾರಿ ಮನೋಭಾವ ಹೊಂದಿರುವ ವಿರಾಟ್ ಕೊಹ್ಲಿಗೆ ವಿಪರೀತ ಸೊಕ್ಕು ಇದೆ ಎನ್ನುವ ಆರೋಪ ಆಗಾಗ ಅವರ ಮೇಲೆ ಕೇಳಿ ಬರುತ್ತಲೇ ಇರುತ್ತದೆ.
39
ಕೊಹ್ಲಿ ಸಹ ಆಟಗಾರ ರಹಾನೆ ಮಾತು
ಈ ವಿಚಾರವಾಗಿ ವಿರಾಟ್ ಕೊಹ್ಲಿಯ ಸ್ನೇಹಿತ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ಅಜಿಂಕ್ಯ ರಹಾನೆ ಮೊದಲ ಬಾರಿಗೆ ಮೌನ ಮುರಿದಿದ್ದಾರೆ. ಅಂದಹಾಗೆ ಅಜಿಂಕ್ಯ ರಹಾನೆ ತಮ್ಮ ಬಹುತೇಕ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ವಿರಾಟ್ ಕೊಹ್ಲಿ ಜತೆಗೆ ಆಡಿದ್ದಾರೆ.
ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪದೇ ಪದೇ ಚರ್ಚೆಯಾಗುವ ಕೊಹ್ಲಿಯ ಅಹಂಕಾರದ ಕುರಿತಂತೆ ಮುಂಬೈ ಮೂಲದ ರಹಾನೆ ಮೊದಲ ಬಾರಿಗೆ ಬಹಿರಂಗವಾಗಿಯೇ ಸ್ಪಷ್ಟನೆ ನೀಡಿದ್ದಾರೆ.
59
ಕೊಹ್ಲಿಯನ್ನು ನಾನು ಹತ್ತಿರದಿಂದ ನೋಡಿದ್ದೇನೆ
ಕ್ರಿಕ್‌ಬಜ್ ಜತೆಗಿನ ಮಾತುಕತೆಯ ವೇಳೆ ರಹಾನೆ, 'ವಿರಾಟ್ ಕೊಹ್ಲಿಯ ಬಗ್ಗೆ ನಾವು ಎಷ್ಟು ಮಾತನಾಡಿದರೂ ಕಡಿಮೆಯೇ. ಯಾಕೆಂದರೆ ನಾನು ವಿರಾಟ್ ಕೊಹ್ಲಿಯನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ' ಎಂದಿದ್ದಾರೆ.
69
ಕೊಹ್ಲಿಯ ಗುಣಗಾನ ಮಾಡಿದ ರಹಾನೆ
'ಅವರು ಬ್ಯಾಟಿಂಗ್ ಮಾಡಲು ಇಳಿದಾಗ ನಾವು ಅವರ ಕ್ರಿಕೆಟ್ ಫ್ಯಾಷನ್ ಹಾಗೂ ಪಂದ್ಯ ಗೆಲ್ಲಿಸಬೇಕೆಂಬ ತುಡಿತವನ್ನು ಪ್ರತಿ ಬಾರಿಯು ನೋಡುತ್ತೇವೆ. ಆದರೆ ನನಗೆ ಅವರ ಆ್ಯಟಿಟ್ಯೂಡ್ ಇವೆಲ್ಲದಕ್ಕಿಂತ ಅದ್ಭುತ ಎಂದೆನಿಸುತ್ತದೆ' ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.
79
ಕೊಹ್ಲಿಯ ಆ್ಯಟಿಟ್ಯೂಡ್ ಕೊಂಡಾಡಿದ ಅಜಿಂಕ್ಯ
'ಕಲಿಯಬೇಕೆಂಬ ಆ್ಯಟಿಟ್ಯೂಡ್, ಕೊನೆಯ ಕ್ಷಣದವರೆಗೂ ಹೋರಾಡಬೇಕು ಎನ್ನುವ ಆ್ಯಟಿಟ್ಯೂಡ್‌ಗೆ ಸಾಟಿಯೇ ಇಲ್ಲ. ಜನರು ಕೊಹ್ಲಿಯನ್ನು ಅಹಂಕಾರಿ ಎನ್ನಬಹುದು. ಆದರೆ ಆತ ಹಾಗಿಲ್ಲ' ಎಂದು ಅಜಿಂಕ್ಯ ರಹಾನೆ ಹೇಳಿದ್ದಾರೆ.
89
ಕೊಹ್ಲಿ ಸಿದ್ದತೆ ಬಗ್ಗೆ ಮಾತಾಡಿದ ರಹಾನೆ
ಅವರು ಮಹತ್ವದ ಪಂದ್ಯಕ್ಕೂ ಎರಡು ದಿನಗಳ ಮೊದಲಿನಿಂದಲೇ ಜನರ ಜತೆ ಹಾಗೂ ಸಹ ಆಟಗಾರರ ಜತೆ ಹೆಚ್ಚು ಮಾತನಾಡುವುದಿಲ್ಲ. ಇದಕ್ಕೇ ಅಹಂ ಅಂದುಕೊಂಡರೆ ಅದು ತಪ್ಪಾಗುತ್ತದೆ. ಅದು ಅವರ ಸಿದ್ದತೆಯ ಭಾಗ ಎಂದು ಅಜಿಂಕ್ಯ ರಹಾನೆ ಸ್ಪಷ್ಟನೆ ನೀಡಿದ್ದಾರೆ.
99
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಗರಿಷ್ಠ ರನ್ ಸಾಧಕ ಕೊಹ್ಲಿ
2008ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ ವಿರಾಟ್ ಕೊಹ್ಲಿ, ಸದ್ಯ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟಾರೆ 28,068 ರನ್ ಬಾರಿಸುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದ್ದಾರೆ. ಸಚಿನ್ ತೆಂಡೂಲ್ಕರ್ ಮೊದಲ ಸ್ಥಾನದಲ್ಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.