ಜಡ್ಡು ವಿಕೆಟ್ ಪತನದ ಬಳಿಕ ಶ್ರೇಯಸ್‌ ಅಯ್ಯರ್ ಬ್ಯಾಟಿಂಗ್ ಮಾಡಲಿಳಿಯಲಿಲ್ಲವೇಕೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್‌..!

Published : Mar 12, 2023, 12:34 PM IST

ಅಹಮದಾಬಾದ್‌(ಮಾ.12): ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ. ಆದರೆ ಈ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಬಳಿಕ ಶ್ರೇಯಸ್‌ ಅಯ್ಯರ್ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯಬೇಕಿತ್ತು. ಜಡೇಜಾ ವಿಕೆಟ್ ಪತನವಾದರೂ ಶ್ರೇಯಸ್ ಅಯ್ಯರ್ ಯಾಕೆ ಕಣಕ್ಕಿಳಿದಿಲ್ಲ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ  

PREV
16
ಜಡ್ಡು ವಿಕೆಟ್ ಪತನದ ಬಳಿಕ ಶ್ರೇಯಸ್‌ ಅಯ್ಯರ್ ಬ್ಯಾಟಿಂಗ್ ಮಾಡಲಿಳಿಯಲಿಲ್ಲವೇಕೆ? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್‌..!

ಅಹಮದಾಬಾದ್‌ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 480 ರನ್‌ಗಳಿಗೆ ನಿಯಂತ್ರಿಸಿ ಮೊದಲ ಇನಿಂಗ್ಸ್‌ ಆರಂಭಿಸಿರುವ ಟೀಂ ಇಂಡಿಯಾ ದಿಟ್ಟ ಆರಂಭವನ್ನೇ ಪಡೆದುಕೊಂಡಿದೆ.
 

26

ಶುಭ್‌ಮನ್ ಗಿಲ್ ಬಾರಿಸಿದ ಸಮಯೋಚಿತ ಶತಕ ಹಾಗೂ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ನಾಲ್ಕನೇ ದಿನದಾಟದ ಲಂಚ್ ಬ್ರೇಕ್‌ ವೇಳೆಗೆ 4 ವಿಕೆಟ್ ಕಳೆದುಕೊಂಡು 362 ರನ್‌ ಬಾರಿಸಿದೆ 
 

36

ಆದರೆ ಮೂರನೇ ದಿನದಾಟದಲ್ಲಿ ಚೇತೇಶ್ವರ್ ಪೂಜಾರ ವಿಕೆಟ್ ಪತನದ ಬಳಿಕ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಮಾಡಲಿಳಿಯಬೇಕಿತ್ತು. ಆದರೆ ಜಡೇಜಾ ಮೈದಾನಕ್ಕಿಳಿದರು. ಆದರೆ ಜಡೇಜಾ ವಿಕೆಟ್ ಪತನದ ಬಳಿಕವೂ ಅಯ್ಯರ್ ಮೈದಾನಕ್ಕಿಳಿಯದೇ ಹೋದದ್ದು ಸಾಕಷ್ಟು ಅನುಮಾನಕ್ಕೀಡಾಗುವಂತೆ ಮಾಡಿತ್ತು.
 

46

ಇದೀಗ ಈ ಕುರಿತಂತೆ ಬಿಸಿಸಿಐ ಅಧಿಕೃತ ಮಾಹಿತಿಯನ್ನು ಪ್ರಕಟಿಸಿದ್ದು, " ಮೂರನೇ ದಿನದಾಟದ ವೇಳೆ ಶ್ರೇಯಸ್ ಅಯ್ಯರ್ ತಮಗೆ ಸೊಂಟ ನೋವು ಕಾಣಿಸಿಕೊಂಡಿದ್ದರ ಬಗ್ಗೆ ಮಾಹಿತಿ ನೀಡಿದರು. ಅವರೀಗ ಸ್ಕ್ಯಾನ್‌ ಮಾಡಿಸಿಕೊಳ್ಳಲು ತೆರಳಿದ್ದಾರೆ. ಬಿಸಿಸಿಐ ವೈದ್ಯಕೀಯ ಸಿಬ್ಬಂದಿ ಅವರ ಆರೋಗ್ಯದ ಮೇಲೆ ನಿಗಾಯಿಟ್ಟಿದ್ದಾರೆ ಎಂದು ತಿಳಿಸಿದೆ.

56

ಆದರೆ ಬಿಸಿಸಿಐ, ಶ್ರೇಯಸ್ ಅಯ್ಯರ್‌ ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡಲು ಕಣಕ್ಕಿಳಿಯುತ್ತಾರೆಯೇ ಅಥವಾ ಇಲ್ಲವೇ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ.

66

ಸದ್ಯ ನಾಲ್ಕನೇ ದಿನದಾಟದ ಲಂಚ್ ಬ್ರೇಕ್ ಬಳಿಕ ಟೀಂ ಇಂಡಿಯಾ, 134 ಓವರ್ ಅಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 386 ರನ್ ಬಾರಿಸಿದ್ದು ಇನ್ನು 94 ರನ್‌ಗಳ ಹಿನ್ನಡೆಯಲ್ಲಿದೆ. ವಿರಾಟ್ ಕೊಹ್ಲಿ 92 ಹಾಗೂ ಭರತ್ 43 ರನ್ ಬಾರಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories