IPL 2023: ವಯಸ್ಸು 36 ದಾಟಿದರೂ ಐಪಿಎಲ್‌ನಲ್ಲಿ ಅಬ್ಬರಿಸಲು ರೆಡಿಯಾದ 8 ಸ್ಟಾರ್‌ ಕ್ರಿಕೆಟಿಗರಿವರು..!

First Published Mar 11, 2023, 4:15 PM IST

ಬೆಂಗಳೂರು(ಮಾ.11): ಮಿಲಿಯನ್ ಡಾಲರ್ ಕ್ರಿಕೆಟ್ ಟೂರ್ನಿ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಯುವ ಕ್ರಿಕೆಟಿಗರದ್ದೇ ಕಾರುಬಾರು ಎನ್ನುವ ಮಾತಿದೆ. ಹಾಗಂತ ಹಿರಿಯ ಆಟಗಾರರು ಕಮ್ಮಿಯಿಲ್ಲ ಎನ್ನುವಂತೆ ಕೆಲವು ಆಟಗಾರರು ಮಿಂಚಿದ್ದಿದೆ. ಇದೀಗ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 36ರ ಗಡಿದಾಟಿದ 8 ಕ್ರಿಕೆಟಿಗರು ಪಾಲ್ಗೊಳ್ಳುತ್ತಿದ್ದಾರೆ. ಅಷ್ಟಕ್ಕೂ ಯಾರು ಆ ಆಟಗಾರರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

1. ಮಹೇಂದ್ರ ಸಿಂಗ್ ಧೋನಿ

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಅತಿಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಧೋನಿಗೀಗ 41 ವರ್ಷಗಳಾಗಿವೆ.
 

2.ವೃದ್ದಿಮಾನ್ ಸಾಹ:

ಗುಜರಾತ್ ಜೈಂಟ್ಸ್‌ ತಂಡದ ವಿಕೆಟ್‌ ಕೀಪರ್‌ ಬ್ಯಾಟರ್ ವೃದ್ದಿಮಾನ್ ಸಾಹಗೀಗ 38 ವರ್ಷಗಳು. ಹೀಗಿದ್ದು, ಐಪಿಎಲ್‌ನಲ್ಲಿ ಸಾಹ ತಮ್ಮ ಖದರ್ ತೋರಿಸಲು ಸಜ್ಜಾಗಿದ್ದಾರೆ.
 

3. ಫಾಫ್ ಡು ಪ್ಲೆಸಿಸ್:

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್‌ ಅವರಿಗೆ ಕೂಡಾ 38 ವರ್ಷಗಳಾಗಿದ್ದು, ತಂಡಕ್ಕೆ ಚೊಚ್ಚಲ ಕಪ್ ಗೆಲ್ಲಿಸಿಕೊಡುವ ಜವಾಬ್ದಾರಿಯ ಜತೆಗೆ ಆರಂಭಿಕನಾಗಿಯೂ ಯಶಸ್ವಿಯಾಗಬೇಕಾದ ಒತ್ತಡ ಫಾಫ್ ಮೇಲಿದೆ.
 

4. ದಿನೇಶ್ ಕಾರ್ತಿಕ್‌:

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‌ಗೀಗ 37 ವರ್ಷಗಳು. ಹೀಗಿದ್ದು, ಸಂಪೂರ್ಣ ಫಿಟ್‌ ಆಗಿರುವ ಡಿಕೆ, ವಿಕೆಟ್ ಕೀಪಿಂಗ್ ಜತೆಗೆ ಮ್ಯಾಚ್ ಫಿನಿಶರ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಲು ಎದುರು ನೋಡುತ್ತಿದ್ದಾರೆ. 
 

5. ಡೇವಿಡ್ ವೀಸಾ:

ನಮೀಬಿಯಾದ ಪ್ರತಿಭಾನ್ವಿತ ಆಲ್ರೌಂಡರ್ ಡೇವಿಡ್ ವೀಸಾ ಈ ಬಾರಿ ಕೋಲ್ಕತಾ ನೈಟ್ ರೈಡರ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ವೀಸಾಗೀಗ 37 ವರ್ಷಗಳಾಗಿದ್ದು, ವಿವಿಧ ಟಿ20 ಲೀಗ್ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
 

6. ಅಂಬಟಿ ರಾಯುಡು:

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಅತ್ಯಂತ ನಂಬಿಗಸ್ಥ ಬ್ಯಾಟರ್ ಅಂಬಟಿ ರಾಯುಡುವಿಗೀಗ 37 ವರ್ಷ. ಹೀಗಿದ್ದೂ ತಮ್ಮ ಬ್ಯಾಟಿಂಗ್ ಆರ್ಭಟ ಯಾವುದೇ ಯುವಕರಿಗೆ ಕಮ್ಮಿಯಿಲ್ಲವೆನ್ನುವಂತೆ ಆಡುತ್ತಿದ್ದಾರೆ.
 

7. ಡೇವಿಡ್ ವಾರ್ನರ್:

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಪೋಟಕ ಆರಂಭಿಕ ಬ್ಯಾಟರ್ ಡೇವಿಡ್ ವಾರ್ನರ್‌ಗೀಗ 36 ವರ್ಷಗಳು. ವಾರ್ನರ್‌ ಪವರ್‌ ಪ್ಲೇನಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಎದುರಾಳಿ ಬೌಲರ್‌ಗಳನ್ನು ಕಾಡುವ ಕ್ಷಮತೆ ಹೊಂದಿದ್ದಾರೆ.
 

8. ಶಿಖರ್ ಧವನ್‌:

ಪಂಜಾಬ್ ಕಿಂಗ್ಸ್‌ ತಂಡದ ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್‌ಗೀಗ 36 ವರ್ಷಗಳು. ಗಬ್ಬರ್‌ ಸಿಂಗ್ ಖ್ಯಾತಿಯ ಶಿಖರ್ ಧವನ್, ಯಾವುದೇ ಪಿಚ್‌ನಲ್ಲಿ ಬೇಕಿದ್ದರೂ ದೊಡ್ಡ ಇನಿಂಗ್ಸ್‌ ಆಡುವ ಸಾಮರ್ಥ್ಯ ಹೊಂದಿದ್ದಾರೆ.
 

click me!