ಭಾರತದ ಪೌರತ್ವ ಆಫರ್ ತಿರಸ್ಕರಿಸಿದ್ದೇಕೆ? ಕಾರಣ ಬಿಚ್ಚಿಟ್ಟ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್

Published : Apr 19, 2026, 10:04 PM IST

ಭಾರತದ ಪೌರತ್ವ ಆಫರ್ ತಿರಸ್ಕರಿಸಿದ್ದೇಕೆ? ಕಾರಣ ಬಿಚ್ಚಿಟ್ಟ ಅಫ್ಘಾನ್ ಸ್ಪಿನ್ನರ್ ರಶೀದ್ ಖಾನ್, ಭಾರಿ ಚರ್ಚೆಗೆ ಗ್ರಾಸವಾಗಿದ್ದ ಈ ಕುತೂಹಲ ಮಾಹಿತಿಯನ್ನು ರಶೀದ್ ಖಾನ್ ಬಹಿರಂಗಪಡಿಸಿದ್ದಾರೆ. 

PREV
15
ರಶೀದ್ ಖಾನ್‌ಗೆ ಭಾರತದ ಪೌರತ್ವದ ಆಫರ್

ಆಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್, ಐಪಿಎಲ್ ಮೂಲಕ ಭಾರತೀಯರ ನೆಚ್ಚಿನ ಕ್ರಿಕೆಟಿಗರಾಗಿ ಹೊರಹೊಮ್ಮಿದ್ದಾರೆ. ಗುಜರಾತ್ ಟೈಟಾನ್ಸ್ ಪರ ಆಡುತ್ತಿರುವ ರಶೀದ್ ಖಾನ್ ಕೆಲ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ರಶೀದ್ ಖಾನ್‌ಗೆ ಭಾರತದ ಪೌರತ್ವ ನೀಡಬೇಕು ಅನ್ನೋ ಕೂಗು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಕೇಳಿಬಂದಿತ್ತು. ಇದರ ನಡುವೆ ಈ ಪ್ರಯತ್ನವೂ ನಡೆದಿತ್ತು ಅನ್ನೋ ಮಾಹಿತಿ ಬಯಲಾಗಿದೆ.

25
ರಶೀದ್ ಖಾನ್ ಪುಸ್ತಕದಲ್ಲಿ ಸ್ಫೋಟಕ ಮಾಹಿತಿ

ಭಾರತ ಮತ್ತು ಆಸ್ಟ್ರೇಲಿಯಾದಂತಹ ದೇಶಗಳು ತಮಗೆ ಪೌರತ್ವದ ಆಫರ್ ನೀಡಿದ್ದವು, ಆದರೆ ತಾನು ಅದನ್ನು ನಿರಾಕರಿಸಿದ್ದಾಗಿ ಹೇಳಿಕೊಂಡಿದ್ದಾರೆ. ಈ ವಿಚಾರ ಈಗ ಕ್ರಿಕೆಟ್ ಜಗತ್ತಿನಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ತಮ್ಮ ಹೊಸ ಪುಸ್ತಕ 'ರಶೀದ್ ಖಾನ್: ಫ್ರಮ್ ಸ್ಟ್ರೀಟ್ಸ್ ಟು ಸ್ಟಾರ್‌ಡಮ್ ಪುಸ್ತಕದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.

35
ಭಾರತೀಯ ಬೋರ್ಡ್‌ನಿಂದ ಬಂದಿತ್ತು ಆಫರ್

2023ರ ಐಪಿಎಲ್ ಸೀಸನ್ ವೇಳೆ ಭಾರತೀಯ ಕ್ರಿಕೆಟ್ ಬೋರ್ಡ್‌ನ ಹಿರಿಯ ಅಧಿಕಾರಿಯೊಬ್ಬರು ನನ್ನನ್ನು ಭೇಟಿಯಾಗಿದ್ದರು ಎಂದು ರಶೀದ್ ಹೇಳಿದ್ದಾರೆ. "'ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ, ಹಾಗಾಗಿ ನೀವೇಕೆ ಭಾರತದಲ್ಲೇ ಉಳಿದು ಇಲ್ಲಿ ಆಡಬಾರದು?' ಅಂತ ಅವರು ಕೇಳಿದರು. ಭಾರತದ ಪೌರತ್ವ ದಾಖಲೆಗಳನ್ನು ನೀಡುವುದಾಗಿಯೂ ಭರವಸೆ ನೀಡಿದರು," ಎಂದು ರಶೀದ್ ವಿವರಿಸಿದ್ದಾರೆ. "ಆದರೆ, ನಾನು ನಗುತ್ತಲೇ ಆ ಆಹ್ವಾನವನ್ನು ನಿರಾಕರಿಸಿದೆ. ನನ್ನ ದೇಶ ಅಫ್ಘಾನಿಸ್ತಾನ ಎಂದು ಸ್ಪಷ್ಟಪಡಿಸಿದೆ," ಎಂದು ರಶೀದ್ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ. ಇದೇ ರೀತಿ ಆಸ್ಟ್ರೇಲಿಯಾದಿಂದಲೂ ತಮಗೆ ಆಫರ್‌ಗಳು ಬಂದಿದ್ದವು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.

45
ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ

ಇದಕ್ಕೂ ಮುನ್ನ 2018ರಲ್ಲಿ, ರಶೀದ್ ಖಾನ್ ಸನ್‌ರೈಸರ್ಸ್ ಹೈದರಾಬಾದ್ ಪರ ಆಡುತ್ತಿದ್ದಾಗ, ಅವರ ಅದ್ಭುತ ಪ್ರದರ್ಶನಕ್ಕೆ ಮನಸೋತಿದ್ದ ಭಾರತೀಯ ಅಭಿಮಾನಿಗಳು, ಅವರಿಗೆ ಭಾರತೀಯ ಪೌರತ್ವ ನೀಡಬೇಕೆಂದು ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಯಾನವನ್ನೇ ನಡೆಸಿದ್ದರು. ಅಭಿಮಾನಿಗಳು ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಟ್ಯಾಗ್ ಮಾಡಿ ಪೋಸ್ಟ್‌ಗಳನ್ನು ಹಾಕಿದ್ದರು. ಈ ವಿಚಾರ ದೊಡ್ಡದಾಗುತ್ತಿದ್ದಂತೆ, ಅಫ್ಘಾನಿಸ್ತಾನದ ಅಂದಿನ ಅಧ್ಯಕ್ಷ ಅಶ್ರಫ್ ಘನಿ ಅವರೇ ಮಧ್ಯಪ್ರವೇಶಿಸಿದ್ದರು. ರಶೀದ್ ಖಾನ್ ನಮ್ಮ ದೇಶದ ಹೆಮ್ಮೆ, ಅವರನ್ನು ಬಿಟ್ಟುಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

55
ರಶೀದ್ ಖಾನ್ ಮುಳ್ಳು ಹಾದಿಯ ಪಯಣ

ನಂಗರ್‌ಹಾರ್‌ನ ಧೂಳು ತುಂಬಿದ ಬೀದಿಗಳಿಂದ ವಿಶ್ವಮಟ್ಟದ ಕ್ರಿಕೆಟಿಗನಾಗಿ ಬೆಳೆದ ರಶೀದ್ ಖಾನ್ ಅವರ ಜೀವನ, ಇಂದು ಅಫ್ಘಾನಿಸ್ತಾನ ಕ್ರಿಕೆಟ್‌ನ ಬೆಳವಣಿಗೆಯ ಸಂಕೇತವಾಗಿದೆ. 2020ರಲ್ಲಿ ಐಸಿಸಿಯ ದಶಕದ ಆಟಗಾರ ಪ್ರಶಸ್ತಿ ಗೆದ್ದಿರುವ ರಶೀದ್, ಎಷ್ಟೇ ದೊಡ್ಡ ಆಫರ್‌ಗಳು ಬಂದರೂ ಅಫ್ಘಾನಿಸ್ತಾನದ ಜೆರ್ಸಿಯಲ್ಲೇ ಆಡುವುದಾಗಿ ದೃಢ ನಿಲುವು ತಳೆದಿದ್ದಾರೆ.

ರಶೀದ್ ಖಾನ್ ಮುಳ್ಳು ಹಾದಿಯ ಪಯಣ

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories