30 ಎಸೆತಗಳಲ್ಲಿ ಶತಕ; ರೋಹಿತ್‌ ದಾಖಲೆ ಮುರಿದ ಅಭಿಷೇಕ್‌ ಶರ್ಮಾ ಬ್ಯಾಟಿಂಗ್‌ ಸೀಕ್ರೆಟ್‌ ಬಯಲು!

Published : Sep 18, 2026, 01:18 PM IST

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೇವಲ 30 ಎಸೆತಗಳಲ್ಲಿ ಸೆಂಚುರಿ ಸಿಡಿಸಿ ಅಭಿಷೇಕ್ ಶರ್ಮಾ ವಿಶ್ವದಾಖಲೆ ಬರೆದಿದ್ದಾರೆ. ಪಂಜಾಬ್ ಮೂಲದ ಈ ಯುವ ಆಟಗಾರನ ಸ್ಫೋಟಕ ಬ್ಯಾಟಿಂಗ್ ಹಿಂದಿನ ಸಕ್ಸಸ್ ಸೀಕ್ರೆಟ್ ಈಗ ಕ್ರೀಡಾ ವಲಯದಲ್ಲಿ ಹಾಟ್ ಟಾಪಿಕ್ ಆಗಿದೆ.

PREV
16
ಆಫ್ಘಾನಿಸ್ತಾನ ಬೌಲರ್‌ಗಳನ್ನು ಚೆಂಡಾಡಿದ ಅಭಿಷೇಕ್ ಶರ್ಮಾ

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಯುವ ಓಪನರ್ ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಮಳೆಗರೆದು ಅಫ್ಘಾನಿಸ್ತಾನದ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿದರು. ಈ ಪಂದ್ಯದಲ್ಲಿ ಭಾರತ 127 ರನ್‌ಗಳ ಬೃಹತ್ ಗೆಲುವು ದಾಖಲಿಸಿ, 3-0 ಅಂತರದಲ್ಲಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಅಭಿಷೇಕ್ ನೀಡಿದ ಭರ್ಜರಿ ಆರಂಭದಿಂದ ಭಾರತ ಬೃಹತ್ ಮೊತ್ತ ಕಲೆಹಾಕಿತು. ಗುರಿ ಬೆನ್ನತ್ತಿದ ಅಫ್ಘಾನಿಸ್ತಾನವನ್ನು ಭಾರತೀಯ ಬೌಲರ್‌ಗಳು ಕೇವಲ 92 ರನ್‌ಗಳಿಗೆ ಆಲೌಟ್ ಮಾಡಿದರು.

26
ರೋಹಿತ್ ದಾಖಲೆ ಮುರಿದ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಸೀಕ್ರೆಟ್

ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಆಡಿದ ಇನ್ನಿಂಗ್ಸ್ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಸದಾ ನೆನಪಿನಲ್ಲಿ ಉಳಿಯುತ್ತದೆ. ಕೇವಲ 30 ಎಸೆತಗಳಲ್ಲಿ ಸೆಂಚುರಿ ಪೂರೈಸಿದ ಈ ಯುವ ಬ್ಯಾಟರ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ವೇಗದ ಶತಕ ಸಿಡಿಸಿದ ಆಟಗಾರ ಎಂಬ ದಾಖಲೆ ಬರೆದರು. 2017ರಲ್ಲಿ ಶ್ರೀಲಂಕಾ ವಿರುದ್ಧ ರೋಹಿತ್ ಶರ್ಮಾ 35 ಎಸೆತಗಳಲ್ಲಿ ಬಾರಿಸಿದ್ದ ಅತಿ ವೇಗದ ಸೆಂಚುರಿ ದಾಖಲೆಯನ್ನು ಅಭಿಷೇಕ್ ಈಗ ಮುರಿದಿದ್ದಾರೆ. ಒಟ್ಟು 34 ಎಸೆತಗಳಲ್ಲಿ 108 ರನ್ ಚಚ್ಚಿದ ಅಭಿಷೇಕ್ ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡರು.

36
ನಿತೀಶ್, ಬಿಷ್ಣೋಯ್ ಮ್ಯಾಜಿಕ್; 92 ರನ್‌ಗೆ ಅಫ್ಘಾನ್ ಆಲೌಟ್

ಭಾರತ ನೀಡಿದ ಬೃಹತ್ ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ ಆರಂಭದಲ್ಲೇ ತೀವ್ರ ಒತ್ತಡಕ್ಕೆ ಸಿಲುಕಿತು. ಮೊದಲ ಎರಡು ಓವರ್‌ಗಳಲ್ಲೇ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆ ನಂತರ ಭಾರತದ ಬೌಲರ್‌ಗಳಾದ ನಿತೀಶ್ ಕುಮಾರ್ ರೆಡ್ಡಿ ಮತ್ತು ರವಿ ಬಿಷ್ಣೋಯ್ ತಲಾ 3 ವಿಕೆಟ್ ಕಬಳಿಸಿ ಅಫ್ಘಾನಿಸ್ತಾನವನ್ನು ಕೇವಲ 92 ರನ್‌ಗಳಿಗೆ ಆಲೌಟ್ ಮಾಡಿದರು. ಸಂಜು ಸ್ಯಾಮ್ಸನ್ ಕೂಡ ಹಾಫ್ ಸೆಂಚುರಿ ಬಾರಿಸಿ ಮಿಂಚಿದರು. ಈ ಅದ್ಭುತ ಪ್ರದರ್ಶನಕ್ಕಾಗಿ ಅಭಿಷೇಕ್ ಶರ್ಮಾ 'ಪ್ಲೇಯರ್ ಆಫ್ ದಿ ಮ್ಯಾಚ್' ಹಾಗೂ 'ಪ್ಲೇಯರ್ ಆಫ್ ದಿ ಸೀರೀಸ್' ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡರು.

46
ತಮ್ಮ ಬ್ಯಾಟಿಂಗ್ ಸೀಕ್ರೆಟ್ ಬಿಚ್ಚಿಟ್ಟ ಅಭಿಷೇಕ್ ಶರ್ಮಾ

ಪಂದ್ಯ ಮುಗಿದ ಬಳಿಕ ತಮ್ಮ ಫಿಯರ್‌ಲೆಸ್ ಬ್ಯಾಟಿಂಗ್ ಹಿಂದಿನ ಸೀಕ್ರೆಟ್ ಅನ್ನು ಅಭಿಷೇಕ್ ಶರ್ಮಾ ಬಿಚ್ಚಿಟ್ಟರು. "ಪ್ರತಿ ಸರಣಿಗೂ ಮುನ್ನ ನಾನು ಒಂದು ನಿರ್ದಿಷ್ಟ ಪ್ರಕ್ರಿಯೆಯನ್ನು ಫಾಲೋ ಮಾಡುತ್ತೇನೆ. ಯಾವ ಬೌಲರ್‌ಗಳನ್ನು ಟಾರ್ಗೆಟ್ ಮಾಡಬೇಕು, ಪವರ್‌ಪ್ಲೇಯನ್ನು ಹೇಗೆ ಗರಿಷ್ಠವಾಗಿ ಬಳಸಿಕೊಳ್ಳಬೇಕು ಎಂಬುದರ ಬಗ್ಗೆ ಸ್ಪಷ್ಟ ಪ್ಲಾನಿಂಗ್ ಮಾಡಿಕೊಳ್ಳುತ್ತೇನೆ. ಮೈದಾನದಲ್ಲಿ ನನ್ನನ್ನು ನಾನು ಯಾವುದೇ ಮೂಲೆಗೂ ಸೀಮಿತಗೊಳಿಸಿಕೊಳ್ಳುವುದಿಲ್ಲ. ಚೆಂಡನ್ನು ನೋಡಿ ಫ್ರೀಯಾಗಿ ಹಿಟ್ ಮಾಡುವುದೇ ನನ್ನ ಸಿಂಪಲ್ ಮಂತ್ರ. ಬಲವಂತವಾಗಿ ಶಾಟ್ ಹೊಡೆಯದೆ ನನ್ನ ನ್ಯಾಚುರಲ್ ಗೇಮ್ ಎಂಜಾಯ್ ಮಾಡುತ್ತೇನೆ" ಎಂದು ವಿವರಿಸಿದರು.

56
ಕ್ಯಾಪ್ಟನ್, ಕೋಚ್ ಬೆಂಬಲವೇ ಈ ಸ್ಫೋಟಕ ಆಟಕ್ಕೆ ಕಾರಣ

ತಮ್ಮ ಈ ಆಕ್ರಮಣಕಾರಿ ಆಟದ ಹಿಂದೆ ಟೀಮ್ ಮ್ಯಾನೇಜ್‌ಮೆಂಟ್ ನೀಡಿದ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ಅಭಿಷೇಕ್ ಹೇಳಿದರು. ಭಾರತದ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ತಮಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ ಎಂದರು.

66
ಯುವರಾಜ್ ಸಿಂಗ್ ಗರಡಿಯಲ್ಲಿ ಪಳಗಿರುವ ಅಭಿಷೇಕ್ ಶರ್ಮಾ

"ನಾವು ಕಳೆದ ಎರಡು ವರ್ಷಗಳಿಂದ ಒಂದೇ ವಿಧಾನವನ್ನು ಫಾಲೋ ಮಾಡುತ್ತಿದ್ದೇವೆ. ಒಂದೆರಡು ಸರಣಿಗಳಲ್ಲಿ ವಿಫಲವಾದ ಮಾತ್ರಕ್ಕೆ ನಮ್ಮ ಮೈಂಡ್‌ಸೆಟ್ ಬದಲಾಗುವುದಿಲ್ಲ. ವಿಶ್ವಕಪ್‌ಗೂ ಮುನ್ನ ಪ್ರತಿ ಪಂದ್ಯದಲ್ಲೂ ಪ್ರಾಬಲ್ಯ ಮೆರೆಯುವುದೇ ನಮ್ಮ ಗುರಿ. ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಪಾಸಿಟಿವ್ ವಾತಾವರಣ ಹಾಗೂ ಮ್ಯಾನೇಜ್‌ಮೆಂಟ್ ನೀಡಿದ ಭರವಸೆಯಿಂದಲೇ ರಿಸ್ಕ್ ತೆಗೆದುಕೊಂಡು ಈ ಮಟ್ಟದಲ್ಲಿ ಆಡಲು ಸಾಧ್ಯವಾಗುತ್ತಿದೆ" ಎಂದು ಅಭಿಷೇಕ್ ತಿಳಿಸಿದರು. ಅಂದಹಾಗೆ ಟೀಂ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಟ್ರೈನಿಂಗ್‌ನಲ್ಲಿ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಸ್ಟೈಲ್ ಸಂಪೂರ್ಣವಾಗಿ ಬದಲಾಗಿರುವುದು ಎಲ್ಲರಿಗೂ ಗೊತ್ತೇ ಇದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories