ಸಂಜು ಸ್ಯಾಮ್ಸನ್ ಬೇಡವೇ ಬೇಡ, ಅಭಿಷೇಕ್ ಶರ್ಮಾ ಇರಲಿ! ಆತ ಡಕ್ ಆದ್ರೂ ಪರವಾಗಿಲ್ಲ ಎಂದ ಮಾಜಿ ಕ್ರಿಕೆಟಿಗ

Published : Feb 20, 2026, 06:21 PM IST

ಟಿ20 ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಕ್ಕೆ ಅಭಿಷೇಕ್ ಶರ್ಮಾರನ್ನೇ ತಂಡದಲ್ಲಿ ಉಳಿಸಿಕೊಳ್ಳಬೇಕು ಎಂದು ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ. ಸತತ ಮೂರು ಮ್ಯಾಚ್‌ಗಳಲ್ಲಿ ಡಕೌಟ್ ಆಗಿದ್ರೂ, ಚೋಪ್ರಾ ಅಭಿಷೇಕ್‌ಗೆ ಬೆಂಬಲ ಸೂಚಿಸಿದ್ದಾರೆ.

PREV
16
ಅಭಿಷೇಕ್ ಶರ್ಮಾ ಎಕ್ಸ್‌ ಫ್ಯಾಕ್ಟರ್ ಆಟಗಾರ

ಅಭಿಷೇಕ್ ಶರ್ಮಾ ಒಬ್ಬ 'ಎಕ್ಸ್-ಫ್ಯಾಕ್ಟರ್' ಆಟಗಾರ. ಇಂತಹ ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದು ಚೋಪ್ರಾ ಹೇಳಿದ್ದಾರೆ. ಸಂಜು ಸ್ಯಾಮ್ಸನ್‌ರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕೆಂಬ ವಾದವನ್ನು ಅವರು ತಳ್ಳಿಹಾಕಿದ್ದಾರೆ.

26
ಸತತ ಮೂರು ಪಂದ್ಯಗಳಲ್ಲಿ ಶೂನ್ಯ ಸುತ್ತಿರುವ ಅಭಿಷೇಕ್ ಶರ್ಮಾ

ಸತತ ವೈಫಲ್ಯಗಳ ನಡುವೆಯೂ ಅಭಿಷೇಕ್‌ನನ್ನು ಕೈಬಿಡಬಾರದು ಎಂದು ಚೋಪ್ರಾ ಹೇಳಿದ್ದಾರೆ. 'ಕೆಟ್ಟ ಸಮಯ ಯಾರಿಗೂ ಬರಬಹುದು. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲೂ ಆತ ಎರಡು ಬಾರಿ ಡಕೌಟ್ ಆಗಿದ್ದ. ಆದರೆ ನಂತರ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ್ದ' ಎಂದು ಚೋಪ್ರಾ ಸ್ಪಷ್ಟಪಡಿಸಿದ್ದಾರೆ.

36
ಇಂತಹ ಆಟಗಾರರನ್ನು ಬೇಗ ಕೈಬಿಡಬಾರದು

'ಇಂತಹ ಆಟಗಾರರನ್ನು ಬೇಗನೆ ತಂಡದಿಂದ ಕೈಬಿಡಬಾರದು. ಅಭಿಷೇಕ್ ಫಾರ್ಮ್‌ಗೆ ಬಂದರೆ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾನೆ' ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

46
ಈ ವರ್ಷವೇ 8 ಪಂದ್ಯಗಳಲ್ಲಿ ಐದು ಬಾರಿ ಶೂನ್ಯ ಸುತ್ತಿದ್ದಾರೆ

2026ರಲ್ಲಿ ಆಡಿದ ಎಂಟು ಟಿ20 ಪಂದ್ಯಗಳಲ್ಲಿ ಅಭಿಷೇಕ್ ಶರ್ಮಾ ಐದು ಬಾರಿ ಸೊನ್ನೆಗೆ ಔಟಾಗಿದ್ದಾರೆ. ಈ ವಿಶ್ವಕಪ್‌ನಲ್ಲಿ ಅವರು ಇನ್ನೂ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಅಭಿಷೇಕ್ ಶರ್ಮಾ ಆರಂಭದಲ್ಲಿ ಸಿಂಗಲ್ಸ್ ತೆಗೆದುಕೊಂಡು ಸ್ಟ್ರೈಕ್ ರೊಟೇಟ್ ಮಾಡಬೇಕು. ನಂತರದಲ್ಲಿ ಬಿರುಸಿನ ಆಟಕ್ಕೆ ಮುಂದಾಗಬೇಕು ಎಂದು ಆಕಾಶ್ ಚೋಪ್ರಾ ಸಲಹೆ ನೀಡಿದ್ದಾರೆ.

56
ಸಂಜು ಸ್ಯಾಮ್ಸನ್ ಫಾರ್ಮ್‌ನಲ್ಲಿಲ್ಲ ಎಂದ ಚೋಪ್ರಾ

ಅಭಿಷೇಕ್ ಶರ್ಮಾ ಬದಲಿಗೆ ಸಂಜು ಸ್ಯಾಮ್ಸನ್‌ರನ್ನು ತಂಡಕ್ಕೆ ಕರೆತರಬೇಕು ಎಂಬ ವಾದವನ್ನು ಕೂಡ ಆಕಾಶ್ ಚೋಪ್ರಾ ಒಪ್ಪಿಲ್ಲ. ಸಂಜು ಸ್ಯಾಮ್ಸನ್ ಕೂಡ ಉತ್ತಮ ಫಾರ್ಮ್‌ನಲ್ಲಿ ಇಲ್ಲ ಎನ್ನುವುದು ಅವರ ವಾದ.

66
ಸಂಜು ಸ್ಯಾಮ್ಸನ್ ವೇಗಿ ಮಾರ್ಕೊ ಯಾನ್ಸನ್ ಎದುರು ಪರದಾಡಬಹುದು

'ಸಂಜು ಸ್ಯಾಮ್ಸನ್ ಅಂತಹ ಅದ್ಭುತ ಫಾರ್ಮ್‌ನಲ್ಲಿಲ್ಲ. ಒಂದು ವೇಳೆ ಸಂಜು ತಂಡಕ್ಕೆ ಬಂದರೆ, ಮಾರ್ಕೊ ಯಾನ್ಸನ್‌ರಂತಹ ಬೌಲರ್‌ಗಳನ್ನು ದಂಡಿಸುತ್ತಾರೆ ಎಂದು ಖಚಿತವಾಗಿ ಹೇಳಲು ಸಾಧ್ಯವಿಲ್ಲ' ಎಂದು ಚೋಪ್ರಾ ಹೇಳಿದ್ದಾರೆ.

'ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ನಡೆದ ನ್ಯೂಜಿಲೆಂಡ್ ಸರಣಿಯಲ್ಲಿ ಸಂಜು ಐದು ಇನ್ನಿಂಗ್ಸ್‌ಗಳಿಂದ ಗಳಿಸಿದ್ದು ಕೇವಲ 46 ರನ್ ಮಾತ್ರ' ಎಂದು ಚೋಪ್ರಾ ನೆನಪಿಸಿದ್ದಾರೆ. ಈ ವಿಶ್ವಕಪ್‌ನಲ್ಲಿ ನಮೀಬಿಯಾ ವಿರುದ್ಧ ಆಡಿದ ಏಕೈಕ ಪಂದ್ಯದಲ್ಲಿ ಸಂಜು 8 ಎಸೆತಗಳಲ್ಲಿ 22 ರನ್ ಗಳಿಸಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories