17ನೇ ಸೀಸನ್ ಐಪಿಎಲ್ ಮುಗಿದಿದೆ. ಕೆಕೆಆರ್ ಚಾಂಪಿಯನ್ ಆಗಿದೆ. ಈ ಸಲದ ಕಲರ್ ಫುಲ್ ಟೂರ್ನಿಯಿಂದ ಟೀಂ ಇಂಡಿಯಾಗೆ ಆದ ಪ್ರಯೋಜನವೇನು ಅನ್ನೋ ಪ್ರಶ್ನೆ ಎದ್ದಿದೆ.
ಈ ಐಪಿಎಲ್ ಮೂಲಕ ಐವರು ಭಾರತೀಯ ಆಲ್ರೌಂಡರ್ಸ್ ಬೆಳಕಿಗೆ ಬಂದಿದ್ದಾರೆ. ಆ ಐವರು ಭವಿಷ್ಯದಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯೋದು ಪಕ್ಕಾ. ಯಾಕಂದ್ರೆ ಆ ಐವರು ಯಂಗ್ ಸ್ಟರ್ಗಳಲ್ಲಿ ಅದ್ಭುತ ಟಾಲೆಂಟ್ ಇದೆ.
1. ಅಭಿಷೇಕ್ ಶರ್ಮಾ
ಸನ್ ರೈಸರ್ಸ್ ಹೈದ್ರಾಬಾದ್ ಓಪನರ್ ಅಭಿಷೇಕ್ ಶರ್ಮಾ, ಈ ಐಪಿಎಲ್‌ನಲ್ಲಿ 204ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿ 484 ರನ್ ಹೊಡೆದಿದ್ದಾರೆ. 200ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟಿಂಗ್ ಮಾಡಿದ ಕೆಲವೇ ಕೆಲ ಆಟಗಾರರಲ್ಲಿ ಅಭಿಷೇಕ್ ಟಾಪ್‌ನಲ್ಲಿದ್ದಾರೆ.
ಪಂಜಾಬ್ ಪುತ್ತರ್, ಸೆಕೆಂಡ್ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಬೌಲಿಂಗ್ ಮಾಡಿದ್ದು, ಎರಡು ವಿಕೆಟ್ ಪಡೆದಿದ್ದರು. 23 ವರ್ಷದ ಅಭಿಷೇಕ್, ತಾನೊಬ್ಬ ಉತ್ತಮ ಆಲ್ರೌಂಡರ್ ಅನ್ನೋದನ್ನ ಪ್ರೂವ್ ಮಾಡಿದ್ದು, ಶೀಘ್ರದಲ್ಲೇ ಟೀಂ ಇಂಡಿಯಾಗೆ ಎಂಟ್ರಿ ಕೊಡಲಿದ್ದಾರೆ.
2. ರಿಯಾನ್ ಪರಾಗ್
ಆಲ್ರೌಂಡರ್ ರಿಯಾನ್ ಪರಾಗ್, ಈ ಸೀಸನ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಕಳೆದ ನಾಲ್ಕೈದು ಸೀಸನ್ನಲ್ಲಿ ಹೊಡೆದಿದ್ದ ರನ್‌ಗಳನ್ನ ಈ ಒಂದು ಸೀಸನ್ನಲ್ಲಿ ಹೊಡೆದಿದ್ದಾರೆ.
ಮಿಡಲ್ ಆರ್ಡರ್ ಬ್ಯಾಟರ್, 573 ರನ್ ಹೊಡೆಯೋ ಮೂಲಕ, ಈ ಸೀಸನ್ನಲ್ಲಿ ಗರಿಷ್ಠ ರನ್ ಹೊಡೆದ ಮೂರನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಸೀಸನ್ನಲ್ಲಿ ಒಂದೆರಡು ಪಂದ್ಯದಲ್ಲಿ ಮಾತ್ರ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತು ಅಷ್ಟೆ.
3. ನಿತೀಶ್ ಕುಮಾರ್ ರೆಡ್ಡಿ
ಈ ಐಪಿಎಲ್ನಲ್ಲಿ ಎಮರ್ಜಿಂಗ್ ಪ್ಲೇಯರ್ ಅವಾರ್ಡ್ ಪಡೆದ ಸನ್ ರೈಸರ್ಸ್ ತಂಡದ ನಿತೀಶ್ ಕುಮಾರ್ ರೆಡ್ಡಿ, ಈ ಸಲ ಬೆಳಕಿಗೆ ಬಂದ ಹೊಸ ಪ್ರತಿಭೆ.
ಫಾಸ್ಟ್ ಬೌಲರ್ ಕಮ್ ಬ್ಯಾಟರ್ ಆಗಿರುವ ರೆಡ್ಡಿ, 303 ರನ್ ಹೊಡೆದಿದ್ದಾರೆ. ಕೆಲ ಪಂದ್ಯಗಳಲ್ಲಿ ಬೌಲಿಂಗ್ ಮಾಡುವ ಅವಕಾಶ ಸಿಕ್ಕಿತು. ಅದರಲ್ಲೇ ಮೂರು ವಿಕೆಟ್ ಪಡೆದಿದ್ದಾರೆ. ಹಾರ್ದಿಕ್ ಪಾಂಡ್ಯ ಬದಲಿಗೆ ಸೂಕ್ತ ಆಲ್ರೌಂಡರ್ ನಿತೀಶ್.
4. ಆರ್ಷದ್ ಖಾನ್
ಲಖನೌ ಸೂಪರ್ ಜೈಂಟ್ಸ್ ಪರ ಆಡಿದ ಅರ್ಷದ್ ಖಾನ್, ಡೆಲ್ಲಿ ವಿರುದ್ಧದ ಪಂದ್ಯದಲ್ಲಿ 58 ರನ್ ಹೊಡೆದು, ಒಂದು ವಿಕೆಟ್ ಸಹ ಪಡೆದಿದ್ದರು. ಆಡಿದ ನಾಲ್ಕು ಪಂದ್ಯದಲ್ಲೂ ಆಲ್ರೌಂಡ್ ಆಟವಾಡಿದ್ದಾರೆ. ಹೆಚ್ಚು ಅವಕಾಶ ಸಿಕ್ಕಿದ್ದರೆ, ಮತ್ತಷ್ಟು ರನ್, ವಿಕೆಟ್ ಪಡೆಯತ್ತಿದ್ದರು. ಲೆಫ್ ಆರ್ಮ್ ಫಾಸ್ಟ್ ಬೌಲರ್ ಆಗಿರೋ ಅರ್ಷದ್, 145 ಕಿಲೋ ಮೀಟರ್ ವೇಗದಲ್ಲಿ ಬಾಲ್ ಬಿಡುತ್ತಾರೆ. ಸೇಮ್ ಇರ್ಫಾಣ್ ಪಠಾಣ್ ಸ್ಟೈಲ್ನಲ್ಲಿ ಬೌಲಿಂಗ್ ಮಾಡೋದು ವಿಶೇಷ.
5.ನಮನ್ ಧೀರ್
ಮುಂಬೈ ಇಂಡಿಯನ್ಸ್ ಪರ ಆಡಿದ ಹರ್ಯಾಣ ಆಲ್ರೌಂಡ್ ನಮನ್ ಧೀರ್, 7 ಮ್ಯಾಚ್ನಲ್ಲಿ ಒಂದು ವಿಕೆಟ್ ಪಡೆದಿದ್ದಾರೆ. ಆದ್ರೆ ಲಕ್ನೋ ವಿರುದ್ಧ ಕೊನೆ ಮ್ಯಾಚ್ನಲ್ಲಿ ಹಾಫ್ ಸೆಂಚುರಿ ಸಿಡಿಸಿ ಎಲ್ಲರನ್ನೂ ದಂಗು ಬಡಿಸಿದ್ರು. 177ರ ಸ್ಟ್ರೈಕ್ರೇಟ್ನಲ್ಲಿ 140 ರನ್ ಹೊಡೆದಿದ್ದಾರೆ.