IPL ಕಪ್‌ ಗೆಲ್ಲದಿದ್ದರೇನಂತೆ, ಆರ್‌ಸಿಬಿ ಈ 5 ದಾಖಲೆ ಬ್ರೇಕ್ ಆಗೋದು ಡೌಟ್..!

First Published | Jun 3, 2022, 11:07 AM IST

ಬೆಂಗಳೂರು: ರಾಯಲ್ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore), ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯಲ್ಲಿ ಅತಿಹೆಚ್ಚು ಮನರಂಜನೆ ನೀಡಿದ ತಂಡ ಎಂದರೆ ಅತಿಶಯೋಕ್ತಿಯಾಗಲಾರದು. ಕಳೆದ 15 ಆವೃತ್ತಿಯ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿದ್ದರೂ ಕಪ್‌ ಗೆಲ್ಲಲು ಆರ್‌ಸಿಬಿಗೆ (RCB) ಸಾಧ್ಯವಾಗಿಲ್ಲ, ಆದರೆ ಅಭಿಮಾನಿಗಳ ಮನದಲ್ಲಿ ಆರ್‌ಸಿಬಿ ಅಚ್ಚಳಿಯದೇ ಉಳಿದಿದೆ. ಆರ್‌ಸಿಬಿ ಕಪ್ ಗೆಲ್ಲದಿದ್ದರೂ ನಿರ್ಭಯವಾಗಿ ಆಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದೆ. ಐಪಿಎಲ್‌ನಲ್ಲಿ ಆರ್‌ಸಿಬಿ ಹೆಸರಿನಲ್ಲಿರುವ ಈ 5 ದಾಖಲೆಗಳು ಸದ್ಯಕ್ಕೆ ಬ್ರೇಕ್ ಆಗೋದು ಡೌಟ್.. ಯಾವುವು ಆ ದಾಖಲೆಗಳು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

1. ಐಪಿಎಲ್‌ನಲ್ಲಿ ಗರಿಷ್ಟ ರನ್ ಬಾರಿಸಿದ ತಂಡ ಆರ್‌ಸಿಬಿ: 263/5

ಐಪಿಎಲ್ ಇತಿಹಾಸದಲ್ಲಿ ಗರಿಷ್ಟ ರನ್‌ ಬಾರಿಸಿದ ತಂಡ ಎನ್ನುವ ದಾಖಲೆ ಇಂದಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದೆ. ಪುಣೆ ವಾರಿಯರ್ಸ್‌ ಇಂಡಿಯಾ ತಂಡದ ವಿರುದ್ದ ಆರ್‌ಸಿಬಿ 5 ವಿಕೆಟ್ ಕಳೆದುಕೊಂಡು 263 ರನ್ ಬಾರಿಸಿತ್ತು. 
 

1. ಐಪಿಎಲ್‌ನಲ್ಲಿ ಗರಿಷ್ಟ ರನ್ ಬಾರಿಸಿದ ತಂಡ ಆರ್‌ಸಿಬಿ: 263/5

ಐಪಿಎಲ್ ಇತಿಹಾಸದಲ್ಲಿ ಗರಿಷ್ಟ ರನ್‌ ಬಾರಿಸಿದ ತಂಡ ಎನ್ನುವ ದಾಖಲೆ ಇಂದಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರಿನಲ್ಲಿದೆ. ಪುಣೆ ವಾರಿಯರ್ಸ್‌ ಇಂಡಿಯಾ ತಂಡದ ವಿರುದ್ದ ಆರ್‌ಸಿಬಿ 5 ವಿಕೆಟ್ ಕಳೆದುಕೊಂಡು 263 ರನ್ ಬಾರಿಸಿತ್ತು. 
 

Tap to resize

2. ಗರಿಷ್ಟ ವೈಯುಕ್ತಿಕ ಸ್ಕೋರ್: ಕ್ರಿಸ್ ಗೇಲ್‌(175*)

ಏಪ್ರಿಲ್ 23, 2013ರಂದು ಯೂನಿವರ್ಸೆಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್, ಟಿ20 ಕ್ರಿಕೆಟ್‌ನಲ್ಲಿ ಅಚ್ಚಳಿಯದೇ ಉಳಿಯುವಂತ ದಾಖಲೆ ನಿರ್ಮಿಸಿದ್ದರು. ಪುಣೆ ವಾರಿಯರ್ಸ್ ಎದುರು ಗೇಲ್ ಕೇವಲ 66 ಎಸೆತಗಳಲ್ಲಿ ಅಜೇಯ 175 ರನ್ ಸಿಡಿಸುವ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಗರಿಷ್ಟ ವೈಯುಕ್ತಿಕ ಸ್ಕೋರ್ ದಾಖಲಿಸಿದ ಸಾಧನೆ ಮಾಡಿದ್ದರು. ಇಂದಿಗೂ ಟಿ20 ಕ್ರಿಕೆಟ್‌ನ ಗರಿಷ್ಟ ವೈಯುಕ್ತಿಕ ಸ್ಕೋರ್ ಕ್ರಿಸ್ ಗೇಲ್ ಹೆಸರಿನಲ್ಲಿದೆ.
 

ಕ್ರಿಸ್ ಗೇಲ್ ವಿಸ್ಪೋಟಕ ಬ್ಯಾಟಿಂಗ್ ಹೇಗಿತ್ತು ಎಂದರೆ, 13 ಬೌಂಡರಿಗಳು ಹಾಗೂ 17 ಮುಗಿಲೆತ್ತರದ ಸಿಕ್ಸರ್‌ಗಳು ಆ ಇನಿಂಗ್ಸ್‌ನಲ್ಲಿ ಗೇಲ್‌ ಬ್ಯಾಟಿಂದ ಹೊರಹೊಮ್ಮಿದ್ದವು. ಕ್ರಿಸ್‌ ಗೇಲ್ ಅವರ ಈ ದಾಖಲೆ ಮುರಿಯೋದು ಸದ್ಯಕ್ಕಂತೂ ಅನುಮಾನ.

4. ಒಂದೇ ಆವೃತ್ತಿಯಲ್ಲಿ ಗರಿಷ್ಟ ರನ್ ಬಾರಿಸಿದ ದಾಖಲೆ: ವಿರಾಟ್ ಕೊಹ್ಲಿ(973 ರನ್)

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ 2016ರ ಐಪಿಎಲ್‌ನಲ್ಲಿ ಅಕ್ಷರಶಃ ರನ್ ಮಳೆ ಹರಿಸಿದ್ದರು. ಆರ್‌ಸಿಬಿ ಪರ 16 ಪಂದ್ಯಗಳನ್ನಾಡಿ 81.08ರ ಬ್ಯಾಟಿಂಗ್ ಸರಾಸರಿಯಲ್ಲಿ ಬರೋಬ್ಬರಿ 973 ರನ್ ಚಚ್ಚಿದ್ದರು. 

2016ರಲ್ಲಿ ವಿರಾಟ್ ಕೊಹ್ಲಿ 4 ಶತಕ ಹಾಗೂ 7 ಅರ್ಧಶತಕ ಸಹಿತ 973 ರನ್ ಬಾರಿಸುವ ಮೂಲಕ ಕೇವಲ ಐಪಿಎಲ್ ಮಾತ್ರವಲ್ಲ ಬದಲಾಗಿ ಇಡೀ ಟಿ20 ಟೂರ್ನಿಯೊಂದರಲ್ಲೇ ಗರಿಷ್ಟ ರನ್ ಬಾರಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಇನ್ನು 15ನೇ ಆವೃತ್ತಿಯ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಜೋಸ್ ಬಟ್ಲರ್ 863 ರನ್ ಬಾರಿಸಿದರಾದರೂ, ಕೊಹ್ಲಿ ದಾಖಲೆ ಹಿಂದಿಕ್ಕಲು ಸಾಧ್ಯವಾಗಲಿಲ್ಲ.

Image credit: PTI

5. ಒಂದೇ ಫ್ರಾಂಚೈಸಿ ಪರ ಗರಿಷ್ಟ ಪಂದ್ಯಗಳನ್ನಾಡಿದ ಆಟಗಾರ: ವಿರಾಟ್ ಕೊಹ್ಲಿ(223)

ಆರ್‌ಸಿಬಿ ಹಾಗೂ ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಇದುವರೆಗೂ ಒಂದೇ ಫ್ರಾಂಚೈಸಿಯನ್ನು ಪ್ರತಿನಿಧಿಸಿ ಗಮನ ಸೆಳೆದಿದ್ದಾರೆ. 2008ರಲ್ಲಿ ಆರಂಭವಾದ ಐಪಿಎಲ್‌ನಿಂದಲೂ ಕಿಂಗ್ ಕೊಹ್ಲಿ, ಆರ್‌ಸಿಬಿ ತಂಡವನ್ನು ಮಾತ್ರ ಪ್ರತಿನಿಧಿಸುತ್ತಿದ್ದಾರೆ. 
 

ವಿರಾಟ್ ಕೊಹ್ಲಿ, ಕಳೆದ 14 ವರ್ಷಗಳಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಿದ್ದು, ಇದುವರೆಗೂ ಆರ್‌ಸಿಬಿ ಪರ ಬರೋಬ್ಬರಿ 223 ಪಂದ್ಯಗಳನ್ನಾಡಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪರ ಮಹೇಂದ್ರ ಸಿಂಗ್ ಧೋನಿ 204 ಪಂದ್ಯಗಳನ್ನಾಡುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

Latest Videos

click me!