ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ 2024ರಲ್ಲಿ 50 ವರ್ಷ ತುಂಬಿದೆ. ಆರ್‌ಸಿಬಿ ಸಂಭ್ರಮಾಚರಣೆ ಸ್ಟೇಡಿಯಂಗೆ ಕಳಂಕ ತಂದಿದೆ . ಈ ನಡುವೆ ಕ್ರೀಡಾಂಗಣವನ್ನು ಬೇರೆಡೆಗೆ ಸ್ಥಳಾಂತರಗೊಳಿಸುವ ಬಗ್ಗೆ ಹಲವು ವರ್ಷಗಳಿಂದಲೂ ಚರ್ಚೆಯಾಗುತ್ತಿದೆ. ಕ್ರೀಡಾಂಗಣ ಸ್ಥಳಾಂತರ ಏಕೆ ಅನಿವಾರ್ಯ ನೋಡೋಣ ಬನ್ನಿ
ಚಿನ್ನಸ್ವಾಮಿ ಕ್ರೀಡಾಂಗಣದ ಆಸನ ಸಾಮರ್ಥ್ಯ 32,000. ಮಹಿಳಾ ಟಿ20 ಪಂದ್ಯಗಳಿಗೂ ಕ್ರೀಡಾಂಗಣ ಭರ್ತಿಯಾಗಲಿದೆ. ಆ ಮಟ್ಟದ ಕ್ರಿಕೆಟ್ ಆಸಕ್ತರು, ಟಿಕೆಟ್ ದರ ಎಷ್ಟೇ ದುಬಾರಿಯಾದರೂ ಖರೀದಿಸಿ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿದ್ದಾರೆ. ಟಿಕೆಟ್ ಸಿಗದೆ ಸಾವಿರಾರು ಅಭಿಮಾನಿಗಳು ಪರದಾಡುವುದನ್ನು ಪ್ರತಿ ಬಾರಿ ನೋಡುತ್ತೇವೆ. ಐಪಿಎಲ್, ಡಬ್ಲ್ಯುಪಿಎಲ್, ಭಾರತದ ಯಾವುದೇ ಪಂದ್ಯವಿದ್ದರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಸೇರುವ ಬೆಂಗಳೂರಿಗೆ ದೊಡ್ಡ ಕ್ರೀಡಾಂಗಣ ಬೇಕಿದೆ.
25
2. ಪಾರ್ಕಿಂಗ್ ವ್ಯವಸ್ಥೆಯೇ ಇಲ್ಲ
ಚಿನ್ನಸ್ವಾಮಿ ಕ್ರೀಡಾಂಗಣ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಹೊಂದಿಲ್ಲ. ಆಟಗಾರರ ಬಸ್, ಕೆಎಸ್‌ಸಿಎ ಸದಸ್ಯರು, ಸಿಬ್ಬಂದಿಗೆ ಒಂದಷ್ಟು ವಾಹನಗಳನ್ನು ನಿಲ್ಲಿಸಲು ಕ್ರೀಡಾಂಗಣದ ಮುಖ್ಯ ಗೇಟ್ ಒಳಗೆ ಅಲ್ಪ ಜಾಗವಿದೆ. ಅದನ್ನು ಹೊರತುಪಡಿಸಿ ಪ್ರೇಕ್ಷಕರಿಗೆ ಯಾವುದೇ ಪಾರ್ಕಿಂಗ್ ವ್ಯವಸ್ಥೆ ಇಲ್ಲ. ದೊಡ್ಡ ಪಂದ್ಯಗಳ ವೇಳೆ ಕಿಲೋ ಮೀಟರ್ ದೂರದಲ್ಲಿ, ಖಾಸಗಿ ಸ್ಥಳಗಳಲ್ಲಿ ವಾಹನ ನಿಲ್ಲಿಸಿ ಮೈದಾನಕ್ಕೆ ಬರಬೇಕಿದೆ.
35
3. ಜನದಟ್ಟಣೆ, ನೂಕುನುಗ್ಗಲು
ಯಾವುದೇ ಪಂದ್ಯವಿದ್ದರೂ ಕ್ರೀಡಾಂಗಣ ಬಳಿ ಜನದಟ್ಟಣೆ ಇರುತ್ತದೆ. ಇದರಿಂದ ನೂಕುನುಗ್ಗಲು ಕೂಡಾ ಉಂಟಾಗುವುದಿದೆ. ಗೇಟ್ ಬಳಿ ಕ್ಯೂ ನಿಲ್ಲಲು ಕೂಡಾ ಮುಖ್ಯ ರಸ್ತೆಯ ಪಾದಾಚಾರಿ ಮಾರ್ಗವನ್ನು ಬಳಸಬೇಕಾಗಿದೆ. ಸಮೀಪದಲ್ಲೇ ವಾಹನಗಳು ಸಂಚರಿಸುವುದರಿಂದ ಗೇಟ್ ಬಳಿ ಜನರ ಜಮಾವಣೆ ಅಪಾಯಕಾರಿ. ಇತ್ತೀಚೆಗೆ ನಡೆದ ಕಾಲ್ತುಳಿತ ಇದಕ್ಕೆ ಸಾಕ್ಷಿ.
ಚಿನ್ನಸ್ವಾಮಿಯಲ್ಲಿ ಪಂದ್ಯವಿದ್ದ ದಿನ ಸಮೀಪದ ರಸ್ತೆಗಳಲ್ಲಿ ವಾಹನಗಳು ಸಂಚರಿಸಬೇಕಿದ್ದರೆ ಹರಸಾಹಸ ಪಡಬೇಕು. ಸುಗಮ ಸಂಚಾರಕ್ಕಾಗಿ ನೂರಾರು ಪೊಲೀಸರನ್ನು ನಿಯೋಜಿಸಿದರೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತದೆ. ಅತ್ತಿಂದಿತ್ತ ಓಡಾಡುವ ಅಭಿಮಾನಿಗಳು, ಗೇಟ್ ಬಳಿ ಕ್ಯೂ ನಿಲ್ಲುವ ಪ್ರೇಕ್ಷಕರಿಂದಾಗಿ ರಸ್ತೆಗಳಲ್ಲೂ ಜನದಟ್ಟಣೆ ಉಂಟಾಗುತ್ತದೆ. ನಗರದ ಹೊರವಲಯದಲ್ಲಿ ಕ್ರೀಡಾಂಗಣವಿದ್ದರೆ ಈ ಸಮಸ್ಯೆ ಇರುವುದಿಲ್ಲ.
55
5 ಮೂಲಸೌಕರ್ಯ ಕೊರತೆ
ಪ್ರೇಕ್ಷಕರ ಅನುಭವ ಹಾಗೂ ಇತ್ತೀಚೆಗೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ನ್ಯಾ.ಕುನ್ಹಾ ಆಯೋಗದ ಪ್ರಕಾರ ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಕೊರತೆಯಿದೆ. ಕ್ರೀಡಾಂಗಣದ ವಿನ್ಯಾಸ, ರಚನೆ ಹೆಚ್ಚಿನ ಜನರು ಸೇರುವ ಪಂದ್ಯಗಳಿಗೆ ಸೂಕ್ತವಲ್ಲ ಮತ್ತು ಅಸುರಕ್ಷಿತ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದು ಇಲ್ಲಿ ಗಮನಾರ್ಹ. ಭದ್ರತಾ ವ್ಯವಸ್ಥೆ, ಪಾರ್ಕಿಂಗ್, ನೀರು, ಶೌಚಾಲಯ, ಕಟ್ಟಡ ಸ್ಥಿತಿ, ಗೇಟ್‌ಗಳ ರೂಪ ಕೂಡಾ ಕ್ರೀಡಾಂಗಣಕ್ಕೆ ಸೂಕ್ತವಲ್ಲ ಎಂಬ ಆರೋಪಗಳಿವೆ.