ಟೀಂ ಇಂಡಿಯಾಗೆ ಎಂಟ್ರಿ ಕೊಡೋಕೆ ಭರ್ಜರಿ ತಯಾರಿ; ಚಿಕನ್, ಮಟನ್ ಬಿಟ್ಟ ವೈಭವ್ ಸೂರ್ಯವಂಶಿ!

Published : Feb 21, 2026, 04:39 PM IST

ಮುಂಬೈ: ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯಲೇಬೇಕು ಅಂತ ಪಣ ತೊಟ್ಟಿರುವ ವೈಭವ್ ಸೂರ್ಯವಂಶಿ ತಮ್ಮ ಜೀವನಶೈಲಿ ಹಾಗೂ ಆಹಾರ ಪದ್ಧತಿಯಲ್ಲಿ ದೊಡ್ಡ ಬದಲಾವಣೆ ಮಾಡಿಕೊಂಡಿದ್ದಾರೆ. ಸದ್ಯ ಐಪಿಎಲ್‌ಗೆ ಮುನ್ನ ರಾಜಸ್ಥಾನ ರಾಯಲ್ಸ್ ತಂಡದ ಜೊತೆ ಟ್ರೈನಿಂಗ್‌ನಲ್ಲಿರುವ ವೈಭವ್, ಸಂಪೂರ್ಣವಾಗಿ ಮಾಂಸಾಹಾರ ತ್ಯಜಿಸಿದ್ದಾರೆ. 

PREV
16
ದೊಡ್ಡ ಗುರಿ ಮೇಲೆ ಕಣ್ಣಿಟ್ಟ ವೈಭವ್ ಸೂರ್ಯವಂಶಿ

ಕಳೆದ ತಿಂಗಳು ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತಕ್ಕೆ ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ 14 ವರ್ಷದ ವೈಭವ್ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ವೈಭವ್ ಗುರಿ ಅಷ್ಟಕ್ಕೆ ನಿಂತಿಲ್ಲ.

26
ತೂಕ ಇಳಿಸಿಕೊಳ್ಳಲು ರೆಡಿಯಾದ ಸೂರ್ಯವಂಶಿ

ಭಾರತದ ಸೀನಿಯರ್ ತಂಡದಲ್ಲಿ ಸ್ಥಾನ ಗಿಟ್ಟಿಸಿ, 2028ರ ಟಿ20 ವಿಶ್ವಕಪ್ ಆಡಬೇಕು ಅನ್ನೋದು ಅವರ ಗುರಿ. ಇದಕ್ಕಾಗಿ ಫಿಟ್ನೆಸ್ ಹೆಚ್ಚಿಸಿಕೊಳ್ಳಲು ಹಾಗೂ ತೂಕ ಇಳಿಸಿಕೊಳ್ಳಲು ಅವರು ಈಗ ಸಂಪೂರ್ಣ ಸಸ್ಯಾಹಾರಿಯಾಗಿದ್ದಾರೆ.

36
ಚಿಕನ್-ಮಟನ್ ಊಟ ಕೈಬಿಟ್ಟ ವೈಭವ್

ವೈಭವ್ ತಮ್ಮ ಹೊಸ ಡಯಟ್ ಪ್ಲಾನ್‌ನಲ್ಲಿ ಚಿಕನ್ ಮತ್ತು ಮಟನ್ ಅನ್ನು ಪೂರ್ತಿಯಾಗಿ ಕೈಬಿಟ್ಟಿದ್ದಾರೆ. ಪ್ರೊಟೀನ್‌ಗಾಗಿ ಈಗ ಬೇಳೆಕಾಳುಗಳು, ಪನೀರ್ ಮತ್ತು ತರಕಾರಿಗಳನ್ನು ತಮ್ಮ ಆಹಾರದಲ್ಲಿ ಸೇರಿಸಿಕೊಂಡಿದ್ದಾರೆ.

ಇದಕ್ಕೂ ಮೊದಲು ವಿರಾಟ್ ಕೊಹ್ಲಿ ಕೂಡಾ ಸಿಕ್ಕಾಪಟ್ಟೆ ಫುಡ್ಡಿ ಆಗಿದ್ರು. ಆದರೆ ಫಿಟ್ನೆಸ್ ಕಡೆ ಗಮನ ಕೊಡುವ ಉದ್ದೇಶದಿಂದ ಕೊಹ್ಲಿ ನಾನ್‌ವೆಜ್ ಸಂಪೂರ್ಣವಾಗಿ ಕೈಬಿಟ್ಟಿದ್ದಾರೆ. ಈಗ ಕೊಹ್ಲಿ ಯುವಕರೂ ನಾಚುವಂತೆ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ.

46
10ನೇ ಕ್ಲಾಸ್ ಬೋರ್ಡ್ ಎಕ್ಸಾಂಗೆ ಚಕ್ಕರ್

ಅಷ್ಟೇ ಅಲ್ಲ, ಈ ಬಾರಿ 10ನೇ ತರಗತಿ ಬೋರ್ಡ್ ಪರೀಕ್ಷೆ ಬರೆಯಬೇಕಿತ್ತು. ಆದರೆ ರಾಜಸ್ಥಾನ ರಾಯಲ್ಸ್ ತರಬೇತಿ ಶಿಬಿರದಲ್ಲಿ ಭಾಗವಹಿಸಬೇಕಿದ್ದ ಕಾರಣ, ಪರೀಕ್ಷೆ ಬರೆಯದಿರಲು ನಿರ್ಧರಿಸಿದ್ದಾರೆ.

56
ಮುಂದಿನ ವರ್ಷ 10ನೇ ಕ್ಲಾಸ್ ಎಕ್ಸಾಂ ಬರೆಯಲಿರುವ ವೈಭವ್

ಕ್ರಿಕೆಟ್ ಮೇಲೆ ಸಂಪೂರ್ಣ ಗಮನ ಹರಿಸಲು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ವೈಭವ್ ತಂದೆ ಸಂಜೀವ್ ಸೂರ್ಯವಂಶಿ 'ಮಿಡ್-ಡೇ' ಪತ್ರಿಕೆಗೆ ತಿಳಿಸಿದ್ದಾರೆ. ಮುಂದಿನ ವರ್ಷ ಪರೀಕ್ಷೆ ಬರೆಯಲು ನಿರ್ಧರಿಸಲಾಗಿದೆ.

66
ಹಿರಿಯರ ತಂಡ ಕೂಡಿಕೊಳ್ಳುವ ವಿಶ್ವಾಸದಲ್ಲಿ ವೈಭವ್

ಐಪಿಎಲ್ ಮುಗಿಯುವಷ್ಟರಲ್ಲಿ ವೈಭವ್‌ಗೆ 15 ವರ್ಷ ತುಂಬಲಿದೆ. ಇದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಲು ಐಸಿಸಿ ನಿಗದಿಪಡಿಸಿರುವ ಕನಿಷ್ಠ ವಯಸ್ಸು. ಇದರ ನಂತರ ವೈಭವ್ ಭಾರತದ ಸೀನಿಯರ್ ತಂಡಕ್ಕೆ ಆಯ್ಕೆಯಾಗುತ್ತಾರೆ ಎಂದು ಕೋಚ್ ಮನೀಶ್ ಓಜಾ ಭರವಸೆ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories