ಟಿ20 ವಿಶ್ವಕಪ್‌ನಲ್ಲಿ ಸತತ 3 ಸೊನ್ನೆ ಸುತ್ತಿದ್ದು ಅಭಿಷೇಕ್‌ ಮಾತ್ರವಲ್ಲ ಇನ್ನೊಬ್ಬ ಭಾರತೀಯನೂ ಇದ್ದಾನೆ! ಆತ ಯಶಸ್ವಿ ಕೋಚ್!

Published : Feb 21, 2026, 01:57 PM IST

ಒಂದು ಸೊನ್ನೆ, ಎರಡು ಸೊನ್ನೆ, ಮೂರು ಸೊನ್ನೆ! ಟಿ20 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ಡಕೌಟ್ ಆದ ಕೆಟ್ಟ ದಾಖಲೆ, ಅದೂ ಸತತವಾಗಿ. ಭಾರತದ ಸ್ಪೋಟಕ ಬ್ಯಾಟರ್ ಅತ್ಯಂತ ಕೆಟ್ಟ ದಾಖಲೆಗೆ ಪಾತ್ರರಾಗಿದ್ದಾರೆ. ಹಾಗಂತ ಈ ದಾಖಲೆಗೆ ಪಾತ್ರವಾದ ಮೊದಲ ಕ್ರಿಕೆಟಿಗ ಅಭಿಷೇಕ್ ಶರ್ಮಾ ಅಲ್ಲ. 

PREV
16
ಸತತ ಮೂರು ಪಂದ್ಯಗಳಲ್ಲಿ ಅಭಿ ಶೂನ್ಯ ಸಂಪಾದನೆ!

ಟಿ20 ವಿಶ್ವಕಪ್ ಇತಿಹಾಸದಲ್ಲಿ ಎಡಗೈ ಸ್ಪೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಮೊದಲ 3 ಪಂದ್ಯಗಳಲ್ಲಿ ಶೂನ್ಯ ಸುತ್ತಿ ಕೆಟ್ಟ ದಾಖಲೆ ನಿರ್ಮಿಸಿದ್ದಾರೆ. ಆದರೆ ಈ ಅವಮಾನಕರ ದಾಖಲೆ ಹೊತ್ತಿರುವ ಏಕೈಕ ಭಾರತೀಯ ಆಟಗಾರ ಅಭಿಷೇಕ್ ಅಲ್ಲ. ಅವರ ಜೊತೆ ಇನ್ನೊಬ್ಬರೂ ಇದ್ದಾರೆ.

26
ನೆಹ್ರಾ ಸಾಲಿಗೆ ಸೇರಿದ ಅಭಿಷೇಕ್ ಶರ್ಮಾ

ಅಭಿಷೇಕ್ ಜೊತೆ ಈ ಪಟ್ಟಿಯಲ್ಲಿರುವ ಮತ್ತೊಬ್ಬ ಆಟಗಾರ ಅಂದ್ರೆ, ಭಾರತದ ಮಾಜಿ ವೇಗಿ ಆಶಿಶ್ ನೆಹ್ರಾ. ಅಭಿಷೇಕ್‌ನಂತೆಯೇ ನೆಹ್ರಾ ಕೂಡ ಸತತವಾಗಿಯೇ ಡಕೌಟ್ ಆಗಿದ್ದರು. ಆದರೆ, ಅವರ ಮೂರು ಡಕ್‌ಗಳು ಎರಡು ಬೇರೆ ಬೇರೆ ವಿಶ್ವಕಪ್‌ಗಳಲ್ಲಿ ಬಂದಿದ್ದವು ಅಷ್ಟೇ.

36
2010ರಲ್ಲಿ ಸತತ ಎರಡು ಪಂದ್ಯಗಳಲ್ಲಿ ನೆಹ್ರಾ ಶೂನ್ಯ ಸಂಪಾದನೆ

2010ರ ಟಿ20 ವಿಶ್ವಕಪ್‌ನಲ್ಲಿ ನೆಹ್ರಾ ಮೊದಲ ಎರಡು ಡಕ್‌ಗಳನ್ನು ಎದುರಿಸಿದ್ದರು. ಆಸ್ಟ್ರೇಲಿಯಾ ಮತ್ತು ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಗಳಲ್ಲಿ ಅವರು ಸೊನ್ನೆ ಸುತ್ತಿದ್ದರು. ಈ ಎರಡೂ ಪಂದ್ಯಗಳಲ್ಲಿ ನೆಹ್ರಾಗೆ ಒಂದು ನಿಮಿಷಕ್ಕಿಂತ ಹೆಚ್ಚು ಕಾಲ ಕ್ರೀಸ್‌ನಲ್ಲಿ ನಿಲ್ಲಲು ಸಾಧ್ಯವಾಗಲಿಲ್ಲ. ಇವೆರಡೂ ಸತತ ಪಂದ್ಯಗಳಾಗಿದ್ದವು.

46
ನೆಹ್ರಾ ಡಕ್ ಆದ ಎಲ್ಲಾ ಪಂದ್ಯವನ್ನು ಭಾರತ ಸೋತಿದೆ

ನಂತರ, 2016ರ ಟಿ20 ವಿಶ್ವಕಪ್‌ನಲ್ಲಿ ನೆಹ್ರಾಗೆ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿತು. ನಾಗ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆದ ಪಂದ್ಯದಲ್ಲೂ ಅವರು ಡಕೌಟ್ ಆದರು. ಆ ಪಂದ್ಯದಲ್ಲಿ ಭಾರತ ಕೇವಲ 79 ರನ್‌ಗಳಿಗೆ ಆಲೌಟ್ ಆಗಿತ್ತು. ವಿಶೇಷ ಅಂದ್ರೆ, ನೆಹ್ರಾ ಡಕೌಟ್ ಆದ ಈ ಮೂರೂ ಪಂದ್ಯಗಳಲ್ಲಿ ಭಾರತ ಸೋಲು ಕಂಡಿತ್ತು.

ಅಂದಹಾಗೆ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ ಆಶಿಶ್ ನೆಹ್ರಾ, ಕೋಚ್ ಆಗಿಯೂ ಸೈ ಎನಿಸಿಕೊಂಡಿದ್ದಾರೆ. ಕೋಚ್ ಆಗಿ ಗುಜರಾತ್ ಟೈಟಾನ್ಸ್‌ಗೆ ಮೊದಲ ಪ್ರಯತ್ನದಲ್ಲೇ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿಸಿದ್ದರು.

56
ಸತತ ಅತಿಹೆಚ್ಚು ಡಕ್ ಯಾರು?

ಆದರೆ, ಟಿ20 ವಿಶ್ವಕಪ್ ಇತಿಹಾಸದಲ್ಲೇ ಅತಿ ಹೆಚ್ಚು ಬಾರಿ ಡಕೌಟ್ ಆದವರ ದಾಖಲೆ ಭಾರತೀಯರ ಹೆಸರಲ್ಲಿಲ್ಲ. ಈ ಕೆಟ್ಟ ದಾಖಲೆ ಪಾಕಿಸ್ತಾನದ ಶಾಹಿದ್ ಅಫ್ರಿದಿ ಹಾಗೂ ಶ್ರೀಲಂಕಾದ ತಿಲಕರತ್ನೆ ದಿಲ್ಶನ್ ಹೆಸರಲ್ಲಿದೆ. ಇವರಿಬ್ಬರೂ ತಲಾ ಐದು ಬಾರಿ ರನ್ ಗಳಿಸದೆ ಪೆವಿಲಿಯನ್‌ಗೆ ಮರಳಿದ್ದಾರೆ.

66
ಸೂಪರ್-08ನಲ್ಲಿ ಖಾತೆ ತೆರಿತಾರಾ ಅಭಿಷೇಕ್ ಶರ್ಮಾ

ಗ್ರೂಪ್‌ ಹಂತದ ಆಡಿದ ಮೂರು ಪಂದ್ಯಗಳಲ್ಲೂ ಶೂನ್ಯಕ್ಕೆ ವಿಕೆಟ್ ಒಪ್ಪಿಸಿರುವ ಅಭಿಷೇಕ್ ಶರ್ಮಾಗೆ ಫೆಬ್ರವರಿ 22ರಿಂದ ಆರಂಭವಾಗಲಿರುವ ಸೂಪರ್-8 ಹಂತದ ಮೊದಲ ಪಂದ್ಯದಲ್ಲಿ ಖಾತೆ ತೆರೆಯುತ್ತಾರೋ ಇಲ್ಲವೋ ಎನ್ನುವುದನ್ನು ಕಾದು ನೋಡಬೇಕಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories